ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಶಿಣ್ಣೂರ ಆಯ್ಕೆ
 
                                ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಶಿಣ್ಣೂರ ಆಯ್ಕೆ
ಶಹಪುರ : ಯಾದಗಿರಿ ಜಿಲ್ಲಾ ಆಡಳಿತ ವತಿಯಿಂದ ಕೂಡ ಮಾಡುವ 2025-26 ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತಿ,ಪತ್ರಕರ್ತ, ಸಂಘಟಕ ಬಸವರಾಜ ಶಿಣ್ಣೂರ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ರಾಜೋತ್ಸವ ಆಯ್ಕೆ ಸಮಿತಿ ಪ್ರಕಟಣೆಗೆ ತಿಳಿಸಿದೆ.
ಶಹಪುರ ತಾಲೂಕಿನ ಸಗರ ಗ್ರಾಮದ ನಿವಾಸಿಯಾದ ಇವರು, ಕಲಾನಿಕೇತನ ಟ್ರಸ್ಟ್ ಕಟ್ಟಿಕೊಂಡು ಕಲೆ,ಸಾಹಿತ್ಯ,ಸಂಗೀತ,ಮತ್ತು ಸಂಸ್ಕೃತಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವುದರ ಜೊತೆಗೆ,ಸಾಹಿತಿಗಳಾಗಿ ಪತ್ರಕರ್ತರಾಗಿ,ಸಂಘಟಕರಾಗಿ, ಜಿಲ್ಲೆಯಾದ್ಯಂತ ಕಳೆದ 15 ವರ್ಷಗಳಿಂದ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತ ಕನ್ನಡ ನಾಡು ನುಡಿ ನೆಲ ಜಲಕ್ಕಾಗಿ ಶ್ರಮಿಸುತ್ತಿದ್ದಾರೆ,
ಇವರ ಅನುಪಮ ಸೇವೆಯನ್ನು ಪರಿಗಣಿಸಿ ನವೆಂಬರ್ 1 ರಂದು ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
 

 kkeditor
                                    kkeditor                                 
                    
                 
                    
                 
                    
                 
                    
                 
                    
                 
                    
                 
                    
                 
    
             
    
             
    
             
    
             
    
             
    
             
    
 
    
 
    
 
    
 
    
 
    
                                        
                                     
    
 
    
