ಲಸಿಕೆಗಳು ಸಾರ್ವಜನಿಕ ಆರೋಗ್ಯ ಸುಧಾರಿಸುವ ಸಾಧನಗಳಾಗಿವೆ ಡಾ ಸಂವೇದನಾ ಘಂಟಿ
ಲಸಿಕೆಗಳು ಸಾರ್ವಜನಿಕ ಆರೋಗ್ಯ ಸುಧಾರಿಸುವ ಸಾಧನಗಳಾಗಿವೆ ಡಾ ಸಂವೇದನಾ ಘಂಟಿ
ಕಲಬುರ್ಗಿ: ಲಸಿಕೆಗಳು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ಸಾಧನಗಳಾಗಿವೆ ಮತ್ತು ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಕಮ್ಯೂನೀಟಿ ಔಷಧಿ ವಿಭಾಗದ ಡಾ ಸಂವೇದನಾ ಘಂಟಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾತೋಶ್ರೀ ತಾರಾದೇವಿ ರಾಂಪೂರೆ ಔಷಧಿ ಮಹಾವಿದ್ಯಾಲಯದಲ್ಲಿ ಜರುಗಿದ 64 ನೇ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ನಿಮಿತ್ತ ಫಾರ್ಮಾಸಿಸ್ಟ ಅಡ್ವೋಕೇಟ್ ಆಫ್ ವ್ಯಾಕ್ಸೀನೆಷನ್ ಕಾರ್ಯಕ್ರಮ ಮುಖ್ಯ ವಕ್ತಾರರಾಗಿ ಮಾತನಾಡುತ್ತಿದ್ದರು.
ಫಾರ್ಮಸಿಸ್ಟ ಅಂದ್ರೆ ಔಷಧಿಕಾರರು ರೋಗನಿರೋಧಕ ವಸ್ತುಗಳ ವಕೀಲರಾಗಿ ಕಾರ್ಯನಿರ್ವಹಿಸುತ್ತಾರೆ. ಲಸಿಕೆಗಳ ಬಗ್ಗೆ ಸಾರ್ವಜನಿಕರಲ್ಲಿ ತಿಳಿಸಿ ಹೇಳುವ ಮಹತ್ವದ ಜವಾಬ್ದಾರಿ ಇವರದಾಗಿದೆ. ಲಸಿಕೆಗಳ ಬಗ್ಗೆ ಗ್ರಾಮೀಣ ಜನರಲ್ಲಿ ಗೊಂದಲಗಳಿವೆ ಈ ಗೊಂದಲಗಳನ್ನು ಪರಿಹರಿಸುವ ವಕಾಲತ್ತು ವಹಿಸುವ ವಕೀಲರರಾಗಿ ಫಾರ್ಮಾಸಿಸ್ಟರು ಕೆಲಸ ಮಾಡಬೇಕಾಗುವದು. ರೋಗನಿರೋಧಕಗಳ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ಫಾರ್ಮಸಿಸ್ಟರ ಮೇಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಂ ಆರ್ ಎಂ ಸಿಯ ಕಮ್ಯೂನಿಟಿ ಮೇಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ ಸುನೀಲ್ ದೇಶಮುಖ್ ಮಾತನಾಡಿ ಸಾರ್ವಜನಿಕರಿಗೆ ಔಷಧಿಗಳಿಂದ ಆಗುವ ಉಪಯೋಗಗಳು ಹಾಗೂ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಮಹತ್ತರ ಜವಾಬ್ದಾರಿ ಫಾರ್ಮಸಿಸ್ಟ ಮೇಲಿದೆ ಎಂದು ಹೇಳಿದರು. ರೀನಾ ಇಂಗಿನ ಶೆಟ್ಟಿ,
ಬೆಂಗಳೂರು ಸರಕಾರಿ ಔಷದಿ ವಿಜ್ಞಾನ ಮಹಾವಿದ್ಯಾಲಯದ ಡಾ ಚೆಲುವರಾಯ ವೇದಿಕೆಯ ಮೇಲೆ ಉಪಸ್ಥಿತರಿದ್ದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ ಪ್ರಕಾಶ್ ಸರಸಂಬಿ ವಹಿಸಿದ್ದರು,ಉಪ ಪ್ರಾಚಾರ್ಯರಾದ ಡಾ ಲಿಂಗರಾಜ ಬೆಂಕಿ ಸ್ವಾಗತಿಸಿದರು, ಡಾ ನೀಲಕಂಠ ರೆಡ್ಡಿ ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು
