ಅಡ್ಯನಡ್ಕದಲ್ಲಿ ರಂಜಿಸಿದ ಸ್ಯಾಕ್ಸೋಫೋನ್ ಜೊತೆ ದ್ವಂದ್ವ ಸ್ವರಾಭಿಷೇಕ...!
ಅಡ್ಯನಡ್ಕದಲ್ಲಿ ರಂಜಿಸಿದ ಸ್ಯಾಕ್ಸೋಫೋನ್ ಜೊತೆ ದ್ವಂದ್ವ ಸ್ವರಾಭಿಷೇಕ...!
ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಪಡಿಬಾಗಿಲು ಮಕ್ಕಳ ಕಲರವ.
ಮನತುಂಬಿ ಹಾಡುವೆನು...ಮಾನವ ತನ್ನ ಭಾವನೆಯನ್ನು ಅಭಿವ್ಯಕ್ತ ಪಡಿಸುವ ಅಮೂಲ್ಯ ಮಾಧ್ಯಮವೇ ಕಲೆ, ಕಲೆ ನಮ್ಮ ದೇಹ ಮನಸುಗಳ ಎರಡನ್ನು ಸಂಸ್ಕರಿಸಿ ಬದುಕನ್ನು ರೂಪಿಸುತ್ತದೆ ಪ್ರಕೃತಿ ನಾನಾ ಕಲೆಗಳ ಮೂಲ ಕಲೆ ಕಲಾವಿದರು ಬದುಕಿನ ಅನರ್ಘ್ಯ ರತ್ನಗಳು ಕಲೆ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ದೊಡ್ಡ ಮನಸ್ಸು ನಮ್ಮಲ್ಲಿರಬೇಕು ಅದೇ ಭಕ್ತಿರಸ ಗಾನಸುಧ ಗಾಯನ.
ವಲಚಿ ನವರಾಗ ಮಾಲೀಕಾವರಣ ಆದಿತಾಳ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ರಚನೆಯಲ್ಲಿ ಚೆನ್ನಾಗಿ ಮೂಡಿ ಬಂತು.
ವಾತಾಪಿ ಗಣಪತಿo ಆದಿತಾಳ ಹಂಸಧ್ವನಿ ರಾಗ ಮುತ್ತುಸ್ವಾಮಿ ದೀಕ್ಷಿತರ ರಚನೆಯ ಅರ್ಥಗರ್ಭಿತ ಸಾಹಿತ್ಯ ಅಷ್ಟೇ ಮಧುರವಾದ ರಾಗ ಸಂಯೋಜನೆ ಯಲ್ಲಿ ಮೂಡಿಬಂತು.
ಸರಸ್ವತಿ ನಮೋಸ್ತುತೆ ರೂಪಕ ತಾಳ ಸರಸ್ವತಿ ರಾಗ ಜನನಿ ಜನನಿ ಆದಿತಾಳ ರೇವತಿ ರಾಗ ಹಾಡುಗಳನ್ನು ಸವಿತಾ ಕೋಡಂದೂರ್ ಮತ್ತು ಸಿಂಚನ ಲಕ್ಷ್ಮಿ ಕೊಡಂದೂರು ಅಮ್ಮ ಮಗಳ ದ್ವಂದ್ವ ಹಾಡುಗಾರಿಕೆ
ಸುಶ್ರವ್ಯವಾಗಿ ಮೂಡಿ ಬಂತು.
ಐಗಿರಿ ನಂದಿನಿ ,ಕುರೈ ಒಂಡ್ರುಂ ಶಿವರಂಜಿನಿ ರಾಗವನ್ನು ಸಿಂಚನ ಲಕ್ಷ್ಮಿ ಕೋಡಂದೂರು ಹಾಡಿ ಪ್ರೇಕ್ಷಕರ ಮನಸೂರೆಗೊಂಡರು.
ರಂಜನಿ ನಿರಂಜನಿ ಕೆಲವು ಹಾಡುಗಳನ್ನು ಸ್ಯಾಕ್ಸೋಫೋನ್ ಜೊತೆ ಪ್ರಸ್ತುತಪಡಿಸಿದರು. ರಂಗಪುರ ವಿಹಾರ ಹಾಡನ್ನು ಜೊತೆ ಸಿಂಚನ ಲಕ್ಷ್ಮಿ ಕೋಡಂದೂರ್ ಹಾಡಿ ಸ್ವರ ಸಂಗಮವಾಯಿತು.
ನಗು ಮೋಮು ಗನಲೆ ಆದಿತಾಳ ಅಭೇರಿ ರಾಗ ತ್ಯಾಗರಾಜರ ರಚನೆಯನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು .ಅಲೆಪಾಯುದೇ ಆದಿತಾಳ ಕಾನಡ ರಾಗ ಪದ ಬ್ರಹ್ಮಮುಕುಟೆ ಆದಿತಾಳ ಭೌಳಿರಾಗ ಭಕ್ತಿಗೀತೆ ಯನ್ನು ಸಿಂಚನ ಲಕ್ಷ್ಮಿ ಕೋಡಂದೂರ್ ಹಾಡಿ ಭಕ್ತಿಯ ಸಿಂಚನವಾಯಿತು.
ಸುಗಮ ಸಂಗೀತದಲ್ಲಿ ಸರಸ್ವತಿಯೇ ಶಾರದೆಯೇ, ಹೂವು ಹೊರಳುವ ಹೂ, ಎಂಥ ಅಂದ ಎಂಥ ಚಂದ, ಶಿವನು ಭಿಕ್ಷಕ್ಕೆ ಬಂದ, ಅಲಾರೆ ಅಲಾರೆ ,ತಿಂಗಳು ಮುಳುಗ್ಯಾವೋ, ನೀಡು ಶಿವ,ಮೂಡಲ್ ಕುಣಿಗಲ್ ಕೆರೆ ,ಗುಬ್ಬಿ ಯಾಡೋ ಪ್ರೇಕ್ಷಕರ ಮನಸೂರಿಗೊಂಡಿತು. ವಾಹ್ ಅದ್ಭುತ ....
ಗುರುವಿನ ಗುಲಾಮ ಕೊಡಗನ ಕೋಳಿ ನುಂಗಿತ್ತ ಪ್ರೀತಿಯ ಕರೆ ಕೇಳಿ ಸಬಿಕರನ್ನೆಲ್ಲಾ ತಲೆದೂಗುವಂತೆ ಮಾಡಿದ ಗಾಯನ ಸಂಗೀತ ಗಾನ ಸ್ವರ ಸಿಂಚನ ಬಾಲ ಪ್ರತಿಭೆಗಳಿಂದ ರಸದೌತಣ ಭಾವನೆಯ ಅದ್ಭುತ ಸ್ವರಯಾನ.
ವಿದ್ವಾನ್ ಉದಯ ಕಾಸರಗೋಡು
ಸ್ಯಾಕ್ಸೋಫೋನ್ ಜೊತೆ ,ಪಕ್ಕ ವಾದ್ಯದಲ್ಲಿ ರಿದಂ ಪ್ಯಾಡ್ ನಲ್ಲಿ ಸುಹಾಸ್ ಹೆಬ್ಬಾರ್ ಪುತ್ತೂರು , ಕೀಬೋರ್ಡ್ ವಾದನದಲ್ಲಿ ಅಮ್ಮು ಮಾಸ್ಟರ್ ಕಾಸರಗೋಡು. ಪದ್ಮರಾಜ ಚಾರ್ವಾಕ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಯಶಸ್ಸು ನಿರಂತರ ಪರಿಶ್ರಮದ ಫಲ ಅದೃಷ್ಟದಾಟ ಅಲ್ಲ ಮೈನವಿರೇಳಿಸುವ ಹಾಡುಗಳ ಜೋಡಣೆ ರಂಗು ತುಂಬಿದ ಸಹ ಕಲಾವಿದರ ಕಲರವ ಸಂಪನ್ನ ನವದೇವಿ ವೈಭವ ನವ ರೂಪ ಕಾಮನಬಿಲ್ಲಿನ ಬಣ್ಣ ಏಳಲ್ಲ ಒಂಬತ್ತು.
ಹರಿವರಾಸನಂ , ಭಾಗ್ಯದ ಲಕ್ಷ್ಮಿ ಬಾರಮ್ಮ ಸಂಗೀತ ಕಲರವ ರಸಮಂಜರಿಯ ಸುಮಧುರ ಹಾಡಿನೊಂದಿಗೆ ಮೂಡಿಬಂದು ಸಂಪನ್ನಗೊಂಡಿತು.
ಬರಹ:ಕುಮಾರ್ ಪೆರ್ನಾಜೆ ಪುತ್ತೂರು.ಪೆರ್ನಾಜೆ ಮನೆ ಪೆರ್ನಾಜೆ ಅಂಚೆಪುತ್ತೂರು ತಾಲೂಕು ದ.ಕ 574223
ಮೋ:9480240643