ರಾಜರಾಜೇಶ್ವರಿ ನಗರದ ಶ್ರೀ ಯೋಗ ಕೇಂದ್ರದಲ್ಲಿ ಉಚಿತ ಬಣ್ಣದ ಚಿಕಿತ್ಸೆ

ರಾಜರಾಜೇಶ್ವರಿ ನಗರದ ಶ್ರೀ ಯೋಗ ಕೇಂದ್ರದಲ್ಲಿ ಉಚಿತ ಬಣ್ಣದ ಚಿಕಿತ್ಸೆ

ರಾಜರಾಜೇಶ್ವರಿ ನಗರದ ಶ್ರೀ ಯೋಗ ಕೇಂದ್ರದಲ್ಲಿ ಉಚಿತ ಬಣ್ಣದ ಚಿಕಿತ್ಸೆ

ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿ ಹಾಗೂ ಡಾ ll ಬಸವರಾಜು ಅವರ ಬಸವ ಆಕ್ಯೂ ಅಕಾಡೆಮಿ ಯ ಚಿಕಿತ್ಸಕಿ ಶ್ರೀಮತಿ ಅನುರಾಧ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಉಚಿತ ವರ್ಣ ಚಿಕಿತ್ಸೆ ಕಾರ್ಯಕ್ರಮವನ್ನು ಹಿರಿಯ ಚಿಕಿತ್ಸಕಿ ಶ್ರೀಮತಿ ಗೀತಾ ರುಕ್ಮಿಣಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

 ವರ್ಣ ಚಿಕಿತ್ಸೆ ಎಂದರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಪರಿಸ್ಥಿತಿಗಳನ್ನು ಗುಣಪಡಿಸಲು ಬಣ್ಣ ಮತ್ತು ಬೆಳಕನ್ನು ಬಳಸುವ ಚಿಕಿತ್ಸೆ ಒಂದು ರೂಪವಾಗಿದೆ. ಇ ಚಿಕಿತ್ಸೆಯು ಪ್ರಾಚೀನ ಈಜಿಪ್ಟ್ ರ ಕಾಲದಿಂದಲೂ ಇದೆ ಮತ್ತು ಇದು ಕೆಲವು ಬಣ್ಣಗಳು ನಮ್ಮ ಮನಸ್ಥಿತಿ ಭಾವನೆಗಳು ಮತ್ತು ಶಕ್ತಿಯ ಮೇಲೆ ಪ್ರಭಾವ ಬೀರಬಹುದು ಎಂಬ ನಂಬಿಕೆ ಇದೆ. ಬಣ್ಣ ಚಿಕಿತ್ಸೆಯ ಮೂಲ ಪ್ರಾಚೀನ ಈಜಿಪ್ಟ್ ನಲ್ಲಿ ಕಾಣಬಹುದು ಅಲ್ಲಿ ಅವರು ಸೂರ್ಯನ ಬೆಳಕನ್ನು ಬಣ್ಣದ ಕನ್ನಡಕಗಳೊಂದಿಗೆ ಚಿಕಿತ್ಸೆಗೆ ಬಳಸುತ್ತಾರೆ ವಿವಿಧ ಬಣ್ಣಗಳನ್ನು ಬಳಸಿಕೊಂಡು ದೇಹ ಮತ್ತು ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಬಳಸಲಾಗುತ್ತದೆ. ಈ ಉಪಯೋಗವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳುವಂತೆ ಚಿಕಿತ್ಸಕರು ತಿಳಿಸಿದರು.

 ಕಾರ್ಯಕ್ರಮದಲ್ಲಿ ಚಿಕಿತ್ಸಕರಾದ ಶ್ರೀಮತಿ ಗೀತಾ ರುಕ್ಮಿಣಿ ಶ್ರೀಮತಿ ಅನುರಾಧ ಯೋಗ ಅಕಾಡೆಮಿ ಅಧ್ಯಕ್ಷರಾದ ಶ್ರೀ ಬಿಕೆ ರಮೇಶ್ ಹಾಗೂ ಯೋಗ ಶಿಕ್ಷಕಿ ಶ್ರೀಮತಿ ಬಿ ವಿ ಶ್ರೀಮತಿ ಪಾಲ್ಗೊಂಡಿದ್ದರು ಬೇರೆ ಬೇರೆ ಭಾಗಗಳಿಂದ ಆಸಕ್ತರು ಈ ಚಿಕಿತ್ಸೆಯ ಸದುಪಯೋಗ ಪಡೆದುಕೊಂಡರು.