ನೀಲಹಳ್ಳಿ ಪ್ರೌಢಶಾಲೆಯಲ್ಲಿ ಯೋಗೆಶ್ ಮೇಷ್ಟ್ರು ಅವರ ಪ್ರೇರಣಾದಾಯಕ ಸಂಭಾಷಣೆ

ನೀಲಹಳ್ಳಿ ಪ್ರೌಢಶಾಲೆಯಲ್ಲಿ ಯೋಗೆಶ್ ಮೇಷ್ಟ್ರು ಅವರ ಪ್ರೇರಣಾದಾಯಕ ಸಂಭಾಷಣೆ

ಖ್ಯಾತ ಚಿಂತಕ ಯೋಗೆಶ್ ಮೇಷ್ಟ್ರು ಸರಕಾರಿ ಪ್ರೌಢ ಶಾಲೆ ನೀಲಹಳ್ಳಿಯಲ್ಲಿ ಮಕ್ಕಳೊಂದಿಗೆ ಮಾತು..

ಕಲಿಸುವ ಕ್ರಮವೇ ಕಲಿಕೆಯ ಅತ್ತ್ಯುತ್ತಮ ಮಾರ್ಗ, ಕಲಿತದ್ದನ್ನ ಹಂಚಿಕೊಂಡಾಗ ಜ್ಞಾನ ಹೆಚ್ಚುತ್ತದೆ ಮತ್ತು ಮನಸ್ಸಿಗೆ ಖುಷಿ ಕೊಡುತ್ತದೆ ಎಂದರು. ಮಕ್ಕಳಾದ ನೀವುಗಳು ನನಗೆ ಏನೂ ಬರುವುದಿಲ್ಲ ಎನ್ನುವುದನ್ನ ರೂಡಿಸಿಕ್ಕೊಳ್ಳವಾರದು ಬದಲಿಗೆ ನನಗೆ ಅಥವಾ ನಾನು ಮಾಡಬಲ್ಲೆ ನನಗೆ ಬರುತ್ತದೆ ಎನ್ನುದನ್ನ ರುಢಿಸಿಕೊಳ್ಳಬೇಕು. ಆಗ ನಮಗೆ ಎಲ್ಲವೂ ಬರುತ್ತಾ ಹೋಗುತ್ತದೆ ಎಂದರು. ನೆನಪಿನ ಶಕ್ತಿಯ ಕುರಿತಂತೆ ಮಕ್ಕಳ ಪ್ರಶ್ನೆಗೆ ಉತ್ತರಿಸುತ್ತಾ ಎನಪಿನ ಶಕ್ತಿ ಎಲ್ಲೂ ಇಲ್ಲ ಅದನ್ನ ಸಣ್ಣ ಸಣ್ಣ ಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳುತ್ತಾ ನೆನಪಿಡುವುದನ್ನ ರೂಢಿಸಿಕೊಳ್ಳಬೇಕು ಎಂದರು.

Teaching is the best way of learning ಎನ್ನುವ ಮೂಲಕ ಮಕ್ಕಳ ಆತ್ಮ ಸ್ಥೈರ್ಯವನ್ನು ಹೆಚ್ಚಿಸಿದರು.

ವೇದಿಕೆಯ ಮೇಲೆ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶಿವಶರಣಪ್ಪ ಜಮಾದಾರ, ಶಿಕ್ಷಕರಾದ ರೇಣುಕಾ ಕೆ, ಶಾರದ ಎಮ್, ಬಿಸಮಿಲ್ಲಾ, ಕವಿತಾ, ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ ಮತ್ತು ಅತಿಥಿ ಶಿಕ್ಷಕರಾದ ರಂಜಿತಾ ,ಚಿತ್ರಕಲಾ ಶಿಕ್ಷಕರಾದ ಸವಿತಾ ಕುಂಬಾರ ಮತ್ತು ವಿಸ್ಮಯ ಅಕಾಡೆಮಿಯ ಅದ್ಯಕ್ಷರಾದ ಸಿದ್ದೇಶ್ವರ ಕುಂಬಾರ ವೇದಿಕೆಯ ಮೇಲೆ ಇದ್ದರು.