ಕಲಬುರಗಿಯಲ್ಲಿ “ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್” ಮೌಲ್ಯವರ್ಧಿತ ಕೋರ್ಸ್ ಉದ್ಘಾಟನೆ

ಕಲಬುರಗಿಯಲ್ಲಿ “ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್” ಮೌಲ್ಯವರ್ಧಿತ ಕೋರ್ಸ್ ಉದ್ಘಾಟನೆ

 ಕಲಬುರಗಿಯಲ್ಲಿ “ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್” ಮೌಲ್ಯವರ್ಧಿತ ಕೋರ್ಸ್ ಉದ್ಘಾಟನೆ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದ ವತಿಯಿಂದ “ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್” ವಿಷಯದಲ್ಲಿ ಮೌಲ್ಯವರ್ಧಿತ ಕೋರ್ಸ್ನ ಉದ್ಘಾಟನಾ ಕಾರ್ಯಕ್ರಮ ಇಂದು ನೆರವೇರಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ವಿಜಯ್ ಎಸ್. ರಾಚಪಗೋಳ ಅವರು ಕೋರ್ಸ್ನ ಉದ್ಘಾಟನೆ ನೆರವೇರಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆರ್.ಬಿ. ಕೊಂಡಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಕನ್ಯಾಕುಮಾರಿ ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿ ರಾಚಪಗೋಳ ಅವರು, *“ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್” ಎಂಬುದು ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉದ್ಯೋಗಾವಕಾಶಗಳಲ್ಲಿ ಅತ್ಯಂತ ಅಗತ್ಯವಾದ ಕೌಶಲ್ಯಭರಿತ ವಿಷಯವಾಗಿದೆ. ಈ ಕೋರ್ಸ್ ವಿದ್ಯಾರ್ಥಿಗಳ ತಾರ್ಕಿಕ ಚಿಂತನೆ ಹಾಗೂ ಸಮಸ್ಯಾ ಪರಿಹಾರದಲ್ಲಿ ಸಹಾಯ ಮಾಡುತ್ತದೆ*” ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ವಾಣಿಜ್ಯ ವಿಭಾಗ ಹಾಗೂ ಪ್ರಾಚಾರ್ಯರ ಶ್ರಮವನ್ನು ಶ್ಲಾಘಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಪ್ರಾಚಾರ್ಯ ಡಾ. ಆರ್.ಬಿ. ಕೊಂಡಾ ಅವರು, ವಿದ್ಯಾರ್ಥಿಗಳು ಈ ಮೌಲ್ಯವರ್ಧಿತ ಕೋರ್ಸ್ನಿಂದ ಹೆಚ್ಚಿನ ಪ್ರಯೋಜನ ಪಡೆದು ತಮ್ಮ ಭವಿಷ್ಯದಿಗಾಗಿ ಅಗತ್ಯವಾದ ವಿಷಯಗಳನ್ನು ಸಮಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಬಿ.ಕಾಂ ೩ನೇ ಸೆಮಿಸ್ಟರ್ನ ವಿದ್ಯಾರ್ಥಿನಿ ತನಿಷಾ ನಿರ್ವಹಿಸಿದರು. ದಿವ್ಯಾ ಪುರೋಹಿತ್ ಧನ್ಯವಾದ ಸಲ್ಲಿಸಿದರು. ಕಾಲೇಜಿನ ನ್ಯಾಕ್ ಹಾಗೂ ಪತ್ರಿಕಾ ಮಾಧ್ಯಮ ಸಂಯೋಜಕ ಡಾ. ಮೋಹನರಾಜ ಎನ್. ಪತ್ತಾರ ಉಪಸ್ಥಿತರಿದ್ದರು.