ಗಾಂಧಿಜೀಯವರ ತತ್ವಗಳನ್ನು ಅಳವಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಿ: ಪ್ರೊ.ಶಾಂತಾದೇವಿ

ಗಾಂಧಿಜೀಯವರ ತತ್ವಗಳನ್ನು ಅಳವಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಿ: ಪ್ರೊ.ಶಾಂತಾದೇವಿ
ಕಲಬುರಗಿ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರಕಾರ ಹಾಗೂ ಕುಮಾರಿ ಶರಣೇಶ್ವರಿ ರೇಷ್ಮಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಗಾಂಧಿ ಚಿಂತನೆಗಳ ಮೂಲಕ ಮಾನವೀಯ ಮೌಲ್ಯಗಳು" ರಾಜ್ಯ
ಮಟ್ಟದ ಯುವ ಶಿಬಿರ ಕಾರ್ಯಕ್ರಮವನ್ನು ಉದ್ಟಾಟಿಸಿದ ಕರ್ನಾಟಕ ರಾಜ್ಯ ಅಕ್ಕಮಾಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದ ಕುಲಪತಿಗಳಾದ ಪ್ರೊ.ಶಾಂತಾದೇವಿ ಟಿ.ಇವರು ಈ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ಗಾಂಧಿಯವರ ತತ್ವಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಹೇಳುತ್ತಾ ಮಹಿಳೆಯರು ಮನಸ್ಸು ಮಾಡಿದರೆ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾರೆ ಎಂದರು ಮಾತನಾಡಿದರು .
ಮುಖ್ಯ ಆಶಯ ನುಡಿಗಳನ್ನಾಡಿದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಮಾತನಾಡುತ್ತಾ ವಿಶೇಷ ಶಿಬಿರದಲ್ಲಿ ಪಡೆಯುವ ಜ್ಞಾನ ಪರಿಣಾಮಕಾರಿಯಾದುದು ಚಿಂತನೆಗಳ ಮೂಲಕ ಮಾನವಿಯ ಮೌಲ್ಯಗಳನ್ನು ಬೆಳೆಸಿಕೊಂಡು ಜಾಗತಿಕ ವ್ಯಾಪ್ತಿಯಲ್ಲಿ ಹೆಚ್ಚು ಸಮಸ್ಯೆಗಳನ್ನು ಎದರಿಸುತ್ತಿರುವವರು ಮಹಿಳೆಯರು ಮತ್ತು ಮಕ್ಕಳು ಅವರ ಆರ್ತನಾದ ಪುರುಷ ಪ್ರಧಾನ ಸಮಾಜಕ್ಕೆ ಕೇಳಿ ಅವರ ಮನಪರಿವರ್ತನೆಯಾಗಬೇಕು ಎಂದು ನುಡಿದರು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಗೀತಾ ಇವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರೊ.ಎಸ್.ಜಿ.ಸಿದ್ದರಾಮಯ್ಯ ಉಪಾಧ್ಯಕ್ಷರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಕಾರ್ಯಕ್ರಮದ ವೇದಿಕೆಯ ಮೇಲೆ ಡಾ.ಜಾವೇದ ಜಮಾದಾರ,ಡಾ ಭಾರತಿ ಎನ್ ರೆಷ್ಮೀ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ರಾ.ಸೇ.ಯೋ ಸಂಯೋಜನಾಧಿಕಾರಿಗಳಾದ ಡಾ.ಅಶೋಕಕುಮಾರ ಸುರಪುರ, ಶ್ರೀ ಅಬ್ದುಲ್ ಭಯಿ,ಡಾ.ಅಬಿದಾ ಬೇಗಂ ಉಪಸ್ಥಿತರಿದ್ದರು ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ ಗೀತಾ ಆರ್ ಎಮ್ ವಹಿಸಿಕೊಂಡಿದ್ದರು . ಕಾರ್ಯಕ್ರಮದಲ್ಲಿ ಡಾ.ಮಹೇಶ ಗಂವ್ಹಾರ ಡಾ.ಉದಯಕುಮಾರ ದೊಡ್ಡಮನಿ,ಡಾ.ಧರ್ಮಣ್ಣ ದೊಡ್ಡಮನಿ,ಡಾ ಸಂತೋಷ ಪ್ರೊ.ಭೀಮರಾವ್ ಕುಲಕರ್ಣಿ ಡಾ.ರಾಜಶೇಖರ ಶಿರವಾಳ್ಕರ್ ಶರದ್ ರೇಷ್ಮೀ ಕಾರ್ಯಕ್ರಮಾಧಿಕಾರಿಗಳಾದ ಶಿವಲಿಲಾ , ಸಂಗಣ್ಣ ಕೆ.ಮತ್ತು ವಿವಿಧ ಮಹಾವಿದ್ಯಾಲಯಗಳ ರಾ.ಸೇ.ಯೋ ಕಾರ್ಯಕ್ರಮಾಧಿಕಾರಿಗಳು ಶಿಬಿರಾರ್ಥಿಗಳು ಭಾಗವಹಿಸಿದ್ದರು ಕಾರ್ಯಕ್ರಮವನ್ನು ಡಾ.ವಿಜಯಲಕ್ಷ್ಮಿ ನಿರೂಪಿಸಿದರು