ಖರ್ಗೆ ವಿರುದ್ಧ ಅವಹೇಳನ ಹೇಳಿಕೆ ಖಂಡನೀಯ || ಅಮೃತ ಸಜ್ಜನ
ಖರ್ಗೆ ವಿರುದ್ಧ ಅವಹೇಳನ ಹೇಳಿಕೆ ಖಂಡನೀಯ ಅಮೃತ ಸಜ್ಜನ
ಕಲಬುರಗಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಬಿಜೆಪಿ ಪಕ್ಷದ ವಿಧಾನ ಪರಿಷತನ ವಿರೋಧ ಪಕ್ಷ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ಅವರು ಬಿಜೆಪಿ ಪಕ್ಷದ ಒಬ್ಬ ಬಕಿಟ್ ನಾಯಕ ಆಗಿದ್ದಾರೆ. ಆರ್ ಎಸ್ ಎಸ್ ನ ಅಂಡರ್ವೇರ್ ಗಳನ್ನು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿದಂತ ವ್ಯಕ್ತಿ, ನಮ್ಮ ದಲಿತರು ನಾಚಿಕೆ ಪಡುವಂತೆ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರರಾದ ಅಮೃತ ಸಜ್ಜನ ಅವರು ವ್ಯಂಗ್ಯವಾಗಿಮಾತನಾಡಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಈ ಮನವಾದಿ ವ್ಯಕ್ತಿಗೆ ಕಾನೂನಿನ ವ್ಯವಸ್ಥೆಗಳ ಬಗ್ಗೆ ಅರಿವಿಲ್ಲ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಯಾವ ಯಾವ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ.ಅವರನ್ನು ಕಸದ ಬುಟ್ಟಿಗೆ ಹಾಕುವಂತೆ ರೀತಿಯಲ್ಲಿ ಚಲವಾದಿ ನಾರಾಯಣ ಸ್ವಾಮಿ ಅವರನ್ನು ಬಳಸಿಕೊಳ್ಳುತ್ತಿರುವುದು ಅವರಿಗೆ ಅರ್ಥ ಆಗುತ್ತಿಲ್ಲ, ದಲಿತ ಸಮುದಾಯದವರೇ ಇವರನ್ನು ನೋಡಿ ಅಯ್ಯೋ ಪಾಪ ಅನ್ಸುತ್ತೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಜಾತಿ ಗಣತಿ ಆಗಬೇಕು, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಏನಾದರೂ ಮಾನ ಮರ್ಯಾದೆ ಇದ್ದರೆ ದಲಿತರಿಗೆ, ಓಬಿಸಿಯವರಿಗೆ, ಮತ್ತು ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ನ್ಯಾಯ ಜವಾಬ್ದಾರಿ ಇದ್ದರೆ ಜಾತಿಗಣತಿ ಮಾಡಲಿ ಎಂದು ಅವರು ಸವಾಲು ಹಾಕಿದರು.
ಇಲ್ಲವಾದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ದಲಿತ ವಿರೋಧಿ, ಒಬಿಸಿ ವಿರೋಧಿ ಮತ್ತು ಅಲ್ಪಸಂಖ್ಯಾತ ವಿರೋಧಿ ಸರ್ಕಾರವಾಗಿದೆ ಎಂದು ಹೇಳಬೇಕಾಗುತ್ತದೆ ಎಂದರು. ನಮ್ಮ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಪರಿಶಿಷ್ಠ ಜಾತಿ ವಿಭಾಗದ ವತಿಯಿಂದ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಬಿಜೆಪಿ ಸರ್ಕಾರ ಅವಧಿಯಲ್ಲಿ ಮಾಡಿರುವ 21 ಹಗರಣ ಗಳಲ್ಲಿ ಕೋವಿಡ್ ಹಗರಣದಲ್ಲಿ 17000 ಕೋ.ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ. ಡಾ. ಸುಧಾಕರ್ ಮತ್ತು ಉಸ್ತುವಾರಿ ಸಚಿವರ ವಿರುದ್ದ ಶೀಘ್ರದಲ್ಲೇ ತನಿಖೆ ಮಾಡಿ ರಾಜ್ಯದ ಜನರಿಗೆ ತಿಳಿಸಬೇಕಾಗಿದೆ. ಮತ್ತು ಜೆಡಿಎಸ್ ಪಕ್ಷದ ಮಾಜಿ ಮುಖ್ಯಮಂತಿಗಳಾದ ಕುಮಾರಸ್ವಾಮಿ ಅವರ ಗಣಿ ಹಗರಣಗಳನ್ನು ಮತ್ತು ಬೇನಾಮಿ ಆಸ್ತಿಗಳ ಬಗ್ಗೆ ತನಿಖೆ ಮಾಡಬೇಕು ಎಂದು ಅವರು ಒತ್ತಾಯಸಿದ್ದಾರೆ.