ರಾಷ್ಟ್ರವ್ಯಾಪ್ತಿ ಏಕಕಾಲಕ್ಕೆ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಸಿ.ಎಮ್ ಶಿವಶರಣಪ್ಪ ಕರೆ

ರಾಷ್ಟ್ರವ್ಯಾಪ್ತಿ ಏಕಕಾಲಕ್ಕೆ  ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಸಿ.ಎಮ್ ಶಿವಶರಣಪ್ಪ ಕರೆ

ರಾಷ್ಟ್ರವ್ಯಾಪ್ತಿ ಸೆಪ್ಟೆಂಬರ್-3-2024 ರಂದು. ಏಕಕಾಲಕ್ಕೆ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಸಿ.ಎಮ್ ಶಿವಶರಣಪ್ಪ ಕರೆ 

ಕಲಬುರಗಿ: ಸೃಷ್ಟಿಕರ್ತ ಸಾಕ್ಷಾತ್ ಪರಮೇಶ್ವರನ ಉಗ್ರ ರೂಪವೇ ಆಗಿರುವ ಬೆಂಕಿ ಪ್ರೀಯ, ಗುಗ್ಗುಳ ಪ್ರೀಯ ಶ್ರೀ ವೀರಭದ್ರೇಶ್ವರ ದೇವರು ದಕ್ಷ ಬ್ರಹ್ಮನನ್ನು ಸಂಹಾರ ಮಾಡಲು ಶಿವನ ಜಡೆಯಿಂದ ಭೂಮಿಯ ಮೇಲೆ ಉದ್ಭವಿಸಿದ ದಿವಸವಾದ ಭಾದ್ರಪದ ಮಾಸದ ಮೊದಲ ಮಂಗಳವಾರ, ಪ್ರತಿ ವರ್ಷ ವಿಶ್ವದಾದ್ಯಂತ ಶ್ರೀ ವೀರಭದ್ರೇಶ್ವರ ದೇವರ ಕೋಟ್ಯಾಂತರ ಭಕ್ತರ ಮನೆ, ಮಠ ಮತ್ತು ದೇವಸ್ಥಾನಗಳಲ್ಲಿ ಶ್ರೀ ವೀರಭದ್ರೇಶ್ವರ ದೇವರ ಹಬ್ಬವನ್ನಾಗಿ ಬಹು ವಿಜೃಂಬಣೆಯಿಂದ ಆಚರಿಸೋಣ.ಎಂದು ಸಿ.ಎಮ್. ಶಿವಶರಣಪ್ಪ ಕಲಬುರಗಿ ಇವರು ಕರೆ ಕೊಟ್ಟಿದ್ದಾರೆ.

  ಶಿವನ ಹೆಸರಿನಿಂದ ವಿಶ್ವದಾದ್ಯಂತ ಏಕ ಕಾಲಕ್ಕೆ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ಮತ್ತು ದೇವಿಮಾತೆಯ ಹೆಸರಿನ ಮೇಲೆ ವಿಶ್ವದಾದ್ಯಂತ ಏಕ ಕಾಲಕ್ಕೆ ದಸರಾ ಹಬ್ಬವನ್ನು ಆಚರಣೆ ಮಾಡುತ್ತೇವೆ. ಅದೇ ರೀತಿ ಲಕ್ಷ್ಮೀ ದೇವಿಯ ಹೆಸರಿನಿಂದ ವಿಶ್ವದಾದ್ಯಂತ ಏಕ ಕಾಲಕ್ಕೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ಅದೇ ರೀತಿ ಭಾದ್ರಪದ ಚತುರ್ಥಿಯಂದು ವಿಶ್ವದಾದ್ಯಂತ ಏಕ ಕಾಲಕ್ಕೆ ಶ್ರೀ ಗಣೇಶೋತ್ಸವ ಹಬ್ಬವನ್ನು ಬಹು ವಿಜೃಂಬಣೆಯಿಂದ ಆಚರಣೆ ಮಾಡುತ್ತೇವೆ. ಆದರೆ ವೀರಭದ್ರೇಶ್ವರ ಜಾತ್ರೆ ಏಕ ಕಾಲಕ್ಕೆ ನಡೆಯುತ್ತಿಲ್ಲ.

ಭಾರತ ದೇಶದಾದ್ಯಂತ ಶ್ರೀ ವೀರಭದ್ರೇಶ್ವರ ದೇವರ ಲಕ್ಷಾಂತರ ದೇವಸ್ಥಾನಗಳನ್ನು ಹೊಂದಿವೆ, ಕೋಟ್ಯಾಂತರ ಜನರು ಶ್ರೀ ವೀರಭದ್ರೇಶ್ವರ ದೇವರ ಭಕ್ತರಿದ್ದಾರೆ. ಯಲ್ಲಾ 

ಶ್ರೀ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ಪ್ರತ್ಯೇಕವಾಗಿ ಜಾತ್ರೆಗಳು ನಡಿತಾ ಇವೆ,ಆದರೆ ವಿಶ್ವದಾದ್ಯಂತ ಏಕ ಕಾಲಕ್ಕೆ ಶ್ರೀ ವೀರಭದ್ರೇಶ್ವರ ದೇವರ ಹಬ್ಬವನ್ನು ಆಚರಿಸುತ್ತಿಲ್ಲ.

ಹೀಗಾಗಿ ಭಾದ್ರಪದ ಮೊದಲ ಮಂಗಳವಾರ ದಂದು ಶ್ರೀ ವೀರಭದ್ರೇಶ್ವರರು ಭೂಮಿಯ ಮೇಲೆ ಉದ್ಭವಿಸಿದ ದಿನವನ್ನು ವೀರಭದ್ರೇಶ್ವರ ಹಬ್ಬವನ್ನಾಗಿ ಆಚರಿಸೋಣ ಎಂದು 

ಶ್ರೀ ವೀರಭದ್ರೇಶ್ವರ ಪ್ರಚಾರ ಸಮೀತಿಯ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಮ್. ಶಿವಶರಣಪ್ಪ ಕಲಬುರಗಿ ಇವರು ಕರೆ ಕೊಟ್ಟಿದ್ದಾರೆ.