ಸವಾಲುಗಳೇ ಸಾಧನೆಗೆ ಮೆಟ್ಟಿಲಾಗಿಸಿಕೊಳ್ಳಲು ಸಲಹೆ

ಸವಾಲುಗಳೇ ಸಾಧನೆಗೆ ಮೆಟ್ಟಿಲಾಗಿಸಿಕೊಳ್ಳಲು ಸಲಹೆ

ಸವಾಲುಗಳೇ ಸಾಧನೆಗೆ ಮೆಟ್ಟಿಲಾಗಿಸಿಕೊಳ್ಳಲು ಸಲಹೆ 

ಕಲ್ಯಾಣ ಕಹಳೆ ವಾರ್ತೆ 

ಕಾಳಗಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಪತ್ರಕರ್ತ ಜಗನ್ನಾಥ ಶೇರಿಕಾರ ಕರೆ ನೀಡಿದರು. ಅವರು ತಾಲ್ಲೂಕಿನ ಕೋಡ್ಲಿಯ ಕಿತ್ತೂರು ರಾಣಿ ಚನ್ನಮ್ಮ‌ವಸತಿ ಶಾಲೆಯ ವಾರ್ಷೀಕೋತ್ಸವವನ್ನು ಸಸಿಗೆ ನೀರುಣಿಸಿ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ವಿದ್ಯಾರ್ಥಿಗಳು‌ ದೊಡ್ಡ ಕನಸುಗಳನ್ನು ಕಾಣಬೇಕು ಅದರ ನನಸು ಮಾಡಲು ನಿರಂತರ ಓದಿನ‌ ಮೂಲಕ ಛಲದಿಂದ ಶ್ರಮಿಸಬೇಕೆಂದು ಪೌರ ಕಾರ್ಮಿಕ‌ ಮಹಿಳೆ ಆಶಾ ಕಂದಾರ ರಾಜಸ್ಥಾನ ಆಡಳಿತ ಸೇವೆಗೆ ಆಯ್ಕೆಯಾಗಿರುವ ಮತ್ತು ಐಪಿಎಸ್ ಅಧಿಕಾರಿ ದಿಂಡಿಗಲ್ ನ ಸಾಧಕಿ ಎನ್ ಅಂಬಿಕಾ, ಕೃತಕ ಕಾಲು ಹೊಂದಿದ್ದರೂ ಅರುಣಿಮಾ ಸಿಂಹಾ ಅವರು ಮೌಂಟ ಎವರೆಸ್ಟ ಏರಿ‌ಸಾಹಸ ಮಾಡಿರುವುದು ಬಿಹಾರದಲ್ಲಿ ಗುಡ್ಡ ಕತ್ತರಿಸಿ ರಸ್ತೆ ನಿರ್ಮಿಸಿದ ದಶರಥ ಮಾಂಝಿ ಅವರ ಸಾಧನೆ ವಿವರಿಸಿದರು. ವಸತಿ ಶಾಲೆಗಳ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಕೊಡೆಕಲ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಸಂಯಮ ಹಾಗೂ ಪರಿಶ್ರಮ ಗುಣ ಮತ್ತು ತಂದೆತಾಯಿ ಗುರು ಹಿರಿಯರಿಗೆ ಗೌರವ ಕೊಡುವ ಗುಣಗಳು ರೂಢಿಸಿಕೊಳ್ಳಬೇಕು. ಉತ್ತಮ‌ ಫಲಿತಾಂಶ ತರುವ ಮೂಲಕ ಶಾಲೆಗೆ ಕೀರ್ತಿ ತರಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರಾಜಶೇಖರ ಮಾಂಗ ಮಾತನಾಡಿ, ಬಡತನ ಹಾಗೂ ಯಾವುದೇ ಸಮಸ್ಯೆಗಳು ಸಾಧನೆಗೆ ಅಡ್ಡಿಯಾಗಬಾರದು. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಶೇ 100 ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತರಬೇಕು, ಮಾದರಿ ವ್ಯಕ್ತಿಗಳಾಗಿ‌ ತಂದೆತಾಯಿಯ ಸೇವೆ ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಮಲ್ಲಪ್ಪ ಚಿಂತಕುಂಟಾ, ರೇವಣಸಿದ್ದ ಹಾಗೂ ಪಾಲಕರ ಪ್ರತಿನಿಧಿ ಮಲ್ಲಿಕಾರ್ಜುನ ಪತ್ರಕರ್ತರಾಷ ರಮೇಶ ದೇವನಕಲ್ ಹಾಗೂವಸತಿ ಶಾಲೆ ಸಿಬ್ಬಂದಿಗಳಾದ ಶಿಕ್ಷಕರಾದ ಅಶೋಕ ಹಡಪದ್, ಶಿವಾನಂದ ಬೀಳಗಿ, ನಾಗಶೆಟ್ಟಿ, ಗೋಪಾಲ್ ದಾಸ್ ಸಾಹುಕಾರ್, ರೇವಣಸಿದ್ದಯ್ಯ ಹಿರೇಮಠ, ಮಹಾನಂದ, ಅಶೋಕ್, ಕವಿತಾ,ಭಾಗ್ಯ ಜ್ಯೋತಿ, ಸಹಾಯಕ ಮಹೇಶ್, ನಿಲಯಪಾಲಕ ಶಿವಕುಮಾರ್ ಹಿರೇಮಠ, ಶಾಲಾ ಪ್ರಧಾನಿ ಶಿವಾನಿ ಉಪಸ್ಥಿತರಿದ್ದರು. ಅಶ್ವಿನಿ ಸ್ವಾಗತಿಸಿದರು. ಶಿಲ್ಪಾ ಮತ್ತು ಭುವನೇಶ್ವರಿ ನಿರೂಪಿಸಿದರು. ಭವಾನಿ ವಂದಿಸಿದರು.