ಸಂಸದರಾದ ಶ್ರೀ ಸಾಗರ ಈಶ್ವರ ಖಂಡ್ರೆ ಹರಿನಾಥ ಮಾಹಾರಾಜರ ದರುಶನ

ಸಂಸದರಾದ ಶ್ರೀ ಸಾಗರ ಈಶ್ವರ ಖಂಡ್ರೆ ಹರಿನಾಥ ಮಾಹಾರಾಜರ ದರುಶನ
ಕಮಲನಗರ : ಕಮಲನಗರ ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಪ್ರತಿ ಗುರುವಾರ ರಂದು ನಡೆಯುವ ಶ್ರೀ ಸದ್ಗುರು ಹರಿನಾಥ ಮಹಾರಾಜರ ವಿಶೇಷ ಪೂಜೆ ಹಾಗೂ ಮಹಾ ಆರತಿ ಕಾರ್ಯಕ್ರಮಕ್ಕೆ ಗುರುವಾರ ಸಂಸದ ಶ್ರೀ ಸಾಗರ್ ಈಶ್ವರ ಖಂಡ್ರೆ ಆಗಮನವಾಗಿತು.
ಕಮಲನಗರ:ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಇಂದು ಸಾಯಂಕಾಲ 6 ಗಂಟೆಗೆ ಹೊಳೆ ಸಮುದ್ರ ಗ್ರಾಮದಲ್ಲಿ ಸದ್ಗುರು ಶ್ರೀ ಹರಿನಾಥ ಮಹಾರಾಜ ಮಂದಿರಕ್ಕೆ ಆಗಮಿಸಿ ಮಂದಿರದ ಸಮ್ಮುಖದಲ್ಲಿ ಬೀದರ್ ಜಿಲ್ಲೆಯ ಸಂಸದರಾದ ಶ್ರೀ ಸಾಗರ ಈಶ್ವರ್ ಖಂಡ್ರೆ ಮಹಾಆರತಿ ಮಾಡಿದರು. ದೇವರ ದರ್ಶನ ಪಡೆದರು.
ನಂತರದಲ್ಲಿ ಭಕ್ತರನ್ನು ಉದೇಶಿ ಸಿ ಅಭಿವೃದ್ಧಿ ಕೆಲಸಗಳಿಗೆ ನಾನು ಯಾವಾಗಲೂ ನಿಮ್ಮ ಬೆನ್ನ ಹಿಂದೆ ನಿಂತಿದ್ದೇನೆ ಎಂದು ತಿಳಿಸಿದರು.
ಗ್ರಾಮದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ನಿಮ್ಮೆಲ್ಲ ಕೆಲಸಗಳಿಗೆ ಮಾಡಿಕೊಡುತ್ತೇನೆ ಎಂದು ಭರವಸೆಯನ್ನು ನೀಡಿದರು. ನೀವು ಯಾವಾಗಲೂ ನಿಮ್ಮ ಕಷ್ಟಗಳಿಗೆ ನಾನು ಸಿದ್ಧನೆಂದುಅವರು ಮಾತನಾಡಿದರು.
ಮಂದಿರದ ಟ್ರಸ್ಟ್ ಅವರು ಬೇಡಿಕೆ ಇಟ್ಟಾಗ ಮುಂಬರುವ ದಿನಗಳಲ್ಲಿ ಆ ಕೆಲಸಗಳನ್ನು ಮಾಡಿಸಿ ಕೊಡುತ್ತೇನೆಂದು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾರುತಿ ಅಳಂದೆ,ಹಿರಿಯ ನಾಗರಿಕರಾದ ಗೋಪಾಳರಾವ ಪಾಟೀಲ್, ಪ್ರಭು ಬೆಣ್ಣೆ, ಪ್ರದೀಪ್ ಪಾಟೀಲ್, ಅನಿಲ್ ಬಿರ್ಗೆ , ಸುಭಾಷ್ ಕದಂ, ರಾಮ ಕದಂ ಹೊಳೆಸಮುದ್ರ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾದ ಅನಿಲ್ ಶಿಂಧೆ, ವೈಜಿನಾಥ ಪಾಟೀಲ್, ಜ್ಞಾನೇಶ್ವರ್ ರಾಮ್ ಪಾಟೀಲ್, ನಾನಸಾಬ್ ಪಾಟೀಲ್ , ರಾಹುಲ್ ಪಾಟೇಲ್, ಸತೀಶ್ ಭುರೆ, ಅಂಕೋಶ ಗಾಯಕ್ವಾಡ, ಕಾಂಗ್ರೆಸ್ ಕಾರ್ಯಕರ್ತರು ಸುತ್ತಲಿನ ಗ್ರಾಮದ ಅಭಿಮಾನಿಗಳು ಸೇರಿದಂತೆ ಹೊಳಸಮುದ್ರ ಗ್ರಾಮದ ಭಕ್ತರು ಮತ್ತು ಕಮಲನಗರ ತಾಲೂಕಿನ ಜನರು ಇತರರು ಉಪಸ್ಥಿತರಿದ್ದರು.