ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಜೋತೆ ವಿಶೇಷ ಹುದ್ದೆಗಳನ್ನು ಸೃಷ್ಟಿಸಿ ಉಪನ್ಯಾಸಕರ ಮೇಲುಸ್ತುವಾರಿ ನೀಡಲು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಆಗ್ರಹ
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಜೋತೆ ವಿಶೇಷ ಹುದ್ದೆಗಳನ್ನು ಸೃಷ್ಟಿಸಿ ಉಪನ್ಯಾಸಕರ ಮೇಲುಸ್ತುವಾರಿ ನೀಡಲು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಆಗ್ರಹ
ಕಲಬುರ್ಗಿ: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ಹಾಗೂ ರಾಜ್ಯ ಶೈಕ್ಷಣಿಕ ತರಭೇತಿ ಇಲಾಖೆ (DSERT) ಜಂಟಿ ಸುತ್ತೋಲೆ ಹೊರಡಿಸಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ DIET ಹಿರಿಯ ಉಪನ್ಯಾಸಕರುಗಳ ಮೂಲಕ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸಲು ಸುತ್ತೋಲೆ ಹೊರಡಿಸಲಾಗಿದೆ ಈ ಸುತ್ತೋಲೆಗೆ ಈಗಾಗಲೇ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘ ವಿರೋಧ ವ್ಯಕ್ತಪಡಿಸಿ ನನಗೂ ಸಹ ಮನವಿ ಸಲ್ಲಿಸಿದ್ದಾರೆ ಈ ವಿಷಯವನ್ನು ನಾನು ಖುದ್ದಾಗಿ ಶಿಕ್ಷಣ ಸಚಿವರಾದ ಮಾನ್ಯ ಶ್ರೀ ಮಧು ಬಂಗಾರಪ್ಪನವರನ್ನು ಭೇಟಿ ಮಾಡಿ ಈ ವಿಷಯವನ್ನು ಚರ್ಚಿಸಿರುವೆ. ಮತ್ತು ಶಿಕ್ಷಣ ಸಚಿವರಲ್ಲಿ ಮನವಿ ಮಾಡಿ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗವನ್ನು ಗುಣಮಟ್ಟದ ಶಿಕ್ಷಣಕ್ಕಾಗಿ ಇಲಾಖೆಯನ್ನು ವಿಕೇಂದ್ರೀಕರಣಗೊಳಿಸಿ ಬಲಪಡಿಸಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಪದವಿಪೂರ್ವ ಶಿಕ್ಷಣವು ಅತ್ಯಂತ ಮಹತ್ವವಾಗಿದ್ದು ವಿದ್ಯಾರ್ಥಿಯ ಭವಿಷ್ಯದ ಜೀವನವನ್ನು ನಿರ್ಧರಿಸುವ ಶೈಕ್ಷಣಿಕ ವ್ಯವಸ್ಥೆಯಾಗಿದೆ. ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಪ್ರೌಢ ವಿಭಾಗದ ಗುಣಮಟ್ಟವನ್ನು ಹೆಚ್ಚಿಸಲು ಅನೇಕ ಕ್ರಮ ಕೈಗೊಳ್ಳುತ್ತಿದೆ ಅದೆ ರೀತಿ ಈಗ ಅದೆ ಇಲಾಖೆಯಲ್ಲಿ ಸೇರಿದ ಪದವಿ ಪೂರ್ವ ವಿಭಾಗವನ್ನು ಶೈಕ್ಷಣಿಕ ವರ್ಧನೆಗಾಗಿ ಪ್ರಾಥಮಿಕ ಪ್ರೌಢ ವಿಭಾಗದಲ್ಲಿ ಶಿಕ್ಷಕರಿಗೆ ಅನೂಕೂಲವಾಗುವಂತೆ ಉದಾಹರಣೆಗೆ ಬಿ ಈ ಓ, ಬಿ ಆರ್ ಪಿ, ವಿಶೇಷ ಹುದ್ದೆಗಳ ಮೂಲಕ ಮೇಲುಸ್ತುವಾರಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಇದೆಯೋ ಅದೇ ರೀತಿ ವಿದ್ಯಾರ್ಥಿಗಳ ಜೀವನದ ಮಹತ್ವದ ಘಟ್ಟವಾಗಿರುವ ಪದವಿಪೂರ್ವ ವಿಭಾಗದಲ್ಲಿಯೂ ಜಿಲ್ಲೆಗೆ ಉಪನಿರ್ದೇಶಕರ ಜೋತೆ ಒಂದು ಸಹಾಯಕ ನಿರ್ದೇಶಕರು ತಾಲೂಕಿನ ಹಿರಿಯ ಪ್ರಾಚಾರ್ಯರಿಗೆ ಅಥವಾ ವಿಶೇಷ ಪರೀಕ್ಷೆಯನ್ನು ತೆಗೆದುಕೊಂಡು ಹೊಸ ಹುದ್ದೆಗಳನ್ನು ಸೃಷ್ಟಿಸಿ ಪದವಿಪೂರ್ವ ಕಾಲೇಜುಗಳ, ಪ್ರಾಚಾರ್ಯರ ಉಪನ್ಯಾಸಕರ ಹಾಗೂ ಕಾಲೇಜುಗಳ ಮೇಲುಸ್ತುವಾರಿ ನೀಡಿ ಆದಷ್ಟು ಉಪನಿರ್ದೇಶಕರ ಮೇಲಿನ ಒತ್ತಡ ಕಡಿಮೆ ಮಾಡಿ ಉಪನ್ಯಾಸಕರಿಗೆ ಅನೂಕೂಲ ಮಾಡಿಕೊಡಬೇಕೆಂದು ಮಾನ್ಯ ಶಿಕ್ಷಣ ಸಚಿವರಿಗೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ವಿನಂತಿಸಿದ್ದಾರೆ.
