ಡೆಂಟಲ್ ತಂಡದಿಂದ ದಂತ ಚಿಕಿತ್ಸೆ : ಅಫಜಲಪುರ
ಡೆಂಟಲ್ ತಂಡದಿಂದ ದಂತ ಚಿಕಿತ್ಸೆ
ಅಫಜಲಪುರ ಅ23.ಪಟ್ಟಣದ ಮುನ್ಸಿಪಲ್ ಕಾರ್ಪೊರೇಷನ್ ಕಛೇರಿಯಲ್ಲಿ ಪುರಸಭೆಯ ಕಾರ್ಯಕರ್ತರಿಗೆ ಡೆಂಟಲ್ ತಂಡದಿಂದ ಡಾ.ಮನಾಲಿ ದೇಶಪಾಂಡೆ , ಡಾ.ಆರಾಧನಾ ಎ. ರಾಠೋಡ ಅವರು ದಂಪತಿಗಳನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಹಾಗೂ ಸ್ವಚ್ಛಗೊಳಿಸಬೇಕು ಮಾಹಿತಿ ನೀಡಿದರು.
ನಂತರ ಪುರಸಭೆ ಕಾರ್ಯಕರ್ತರ ದಂತ ತಪಾಸಣೆ ಮಾಡಿದ . ನಂತರ ಎನ್ ಸಿಡಿ ತಂಡ , ಸುನೀತಾ ಕಂಬಾಳಿಮಠ ಮತ್ತು ಪ್ರೀತಿ, ರವರು ಬಿಪಿ ,ಮಧುಮೇಹ ಪರೀಕ್ಷೆ ಮಾಡಿದರು . ಜೋತೆಗೆ ಐಸಿಟಿಸಿ ವೈದ್ಯರಾದ ರವಿಕುಮಾರ್ ಬುರ್ಲೆ ಮತ್ತು ಗೌತಮ್ ರವರು ರೋಗಿಗಳ ತಪಾಸಣೆ ನಡೆಸಿದರು.
ಜಿಲ್ಲಾ ರಾಷ್ಟ್ರಿಯ. ಟ್ಯೂಬಾಕ್ ಕಂಟ್ರೋಲ್ ತಂಡದ ಜಿಲ್ಲಾ ಸಲಹೆಗಾರರಾದ ಸುಜಾತಾ ಪಾಟೀಲ
ಅವರು ಮಾತನಾಡುತ್ತ ಹೆಣ್ಣು , ಗುಂಡು ಮಕ್ಕಳು ತಾಂಬಾಕು ಮತ್ತು ಸಿಗರೇಟ್ ಸೆೆೇದುವದರಿಂದ ಕಾಯಿಲೆಗಳು ಉಲ್ಬಣವಾಗುತ್ತದೆ. ಯುವ ಜನಾಂಗ ಇದನ್ನು ತ್ಯಾಜಿಸಬೆೆೇಕು.
ನಿಕೋಟೆಕ್ಸ್ ಚ್ಯೂಯಿಂಗ್ ಗಮ್ ವಿತರಿಸಿದರು .
ಆರ್ ಕೆ ಎಸ್ ಕೆ ಸಮಾಲೋಚಕಿ ಸುಜಾತಾ ಹಿರೇಮಠ ಹದಿಹರೆಯದವರಲ್ಲಿ ಆಗುವ ಮುಟ್ಟಿನ ತೊಂದರೆ ಬಗ್ಗೆ ಹೇಗೆ ಸುರಕ್ಷಿತವಾಗಿರಬೇಕೆಂದು ತಿಳಿಸಿದರು .ತಾಲುಕಾ ಆರೋಗ್ಯ ಆಧಿಕಾರಿಗಳಾದ ಡಾ. ಚೇತನ್ ಧುಮಾಲೆ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ವಿನಾಯಕ ಜೋಶಿ. ಕ್ಷೇತ್ರ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳು ಕೆ.ಎಸ್ ಬಡಿಗಾರ್. ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮೇಲ್ವಿಚಾರಣೆ ಮಾಡಿದರು. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಬಸವರಾಜ ಶಿವಪೂಜೆ ಭಾಗವಹಿಸಿದ್ದರು.