ಮಾದಿಗರ ಬಡಾವಣೆಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಮನವಿ
ಮಾದಿಗರ ಬಡಾವಣೆಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಮನವಿ
ಕಲಬುರಗಿ: ರಟಕಲ್ ಗ್ರಾಮದ ಬ್ಲಾಕ್-1 ನಲ್ಲಿ ಮಾದಿಗ ಓಣಿ ಸಾರ್ವಜನಿಕ ಬೇಡಿಕೆಗಳಾದ ನೀರು ಮತ್ತು ರಸ್ತೆ ಚರಂಡಿ ವಿದ್ಯುತ್ ದೀಪ ಸೇರಿದಂತೆ ವಿವಿಧ ಮೂಲಭೂತ ಒದಗಿಸಬೇಕೆಂದು ಒತ್ತಾಯಿಸಿ ಮಾದಿಗ ದಂಡೋರ ಹೋರಾಟ ಸಮಿತಿ ನಗರ ಘಟಕ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಕುರಿತು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಅವರು ರಟಕಲ್ ಗ್ರಾಮದ ಬ್ಲಾಕ್- ಒಂದರ ಮಾದಿಗರ ಬಡಾವಣೆಯಲ್ಲಿ ಸುಮಾರು 5-6 ತಿಂಗಳುಗಳಿಂದ ಕುಡಿಯುವ ನೀರು ಬರದ ಕಾರಣ ಬೇರೆ ಕಡೆ ಸುಮಾರು 1 ಕೀ.ಮೀ ದಿಂದ ನೀರು ತರಲು ತುಂಬಾ ತೊಂದರೆ ಉಂಟಾಗುತ್ತಿದೆ ಮತ್ತು ಮಾದಿಗ ಬಡಾವಣೆಯಲ್ಲಿ ಕೆಟ್ಟು ಹೋದ ಎರಡು ಬೋರವೆಲ್ ಇದ್ದರೂ ಕೂಡ ಅವುಗಳನ್ನು ರಿಪೇರಿ ಮಾಡದೆ ಬರೀ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಎಸ್.ಸಿ ಫುಲ್ಲಿಂದ ಮದರಸಾಬ ದರ್ಗಾಕ್ಕೆ ಹೋಗುವ ಮದ್ಯ ರಸ್ತೆ ತುಂಬಾ ಹದಗೆಟ್ಟಿದ್ದು ಶಾಲಾ ಮಕ್ಕಳಿಗೆ ಹಾಗೂ ವೃದ್ಧರಿಗೂ ನಡೆದಾಡಲು ತುಂಬ ತೊಂದರೆಯಾಗುತ್ತಿದೆ.ಆದ್ದರಿಂದ ತಾವುಗಳು ಈ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕೆಂದು ತಮ್ಮಲ್ಲಿ ಮಾದಿಗ ಬಡಾವಣೆಯ ಸಾರ್ವಜನಿಕರ ಪರವಾಗಿ ವಿನಂತಿಸಿಕೊಂಡರು.ಒಂದು ವೇಳೆ ಒಂದು ವಾರದಲ್ಲಿ ನಮ್ಮ ಸಮಸ್ಯೆ ಬಗೆಹರಿಸದೆ ಇದ್ದಲ್ಲಿ ಮಾದಿಗ ದಂಡೂರ ಹೋರಾಟ ಸಮಿತಿಯ ನಗರ ಘಟಕ ಕಲಬುರಗಿ ವತಿಯಿಂದ ತಮ್ಮ ಗ್ರಾಮ ಪಂಚಾಯತ ಎದುರುಗಡೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಭೀಮಶ್ಯಾ ಧರಣಿ,ಅಜಿತಕುಮಾರ ಭೈರಾಮಡಗಿ,ನಾಗರಾಜ ಕೂನ್ನೂರ,ರೇವಪ್ಪಾ ಭೈರಾಮಡಗಿ,ಜಗನ್ನಾಥ ಕಂದಗೂಳ,ಸಾಗರ ಭೈರಾಮಡಗಿ,ಜಿಮ್ಮಿ ಆದಮ್.ಡಿ, ಸುನಿಲ ಕಂದಗೂಳ,ಕಲ್ಯಾಣಿ ಭೈರಾಮಡಗಿ,ವಿಠಲ್ ಭೈರಾಮಡಗಿ,ರೇವಣಸಿದ್ದಪ್ಪ ಕೂನ್ನೂರ,ಪುಲಕೇಶಿ ಭೈರಾಮಡಗಿ, ಸುಧಾಕರ ಭೈರಾಮಡಗಿ,ಪ್ರಕಾಶ ಭೈರಾಮಡಗಿ,ಅನಿಲ ಭೈರಾಮಡಗಿ ಸೇರಿದಂತೆ ಇತರರು ಇದ್ದರು.
