ಶಸ್ತ್ರಚಿಕಿತ್ಸಾ ಕೋಣೆಯಲ್ಲಿ ಸೂಕ್ಷ್ಮ ಜೀವಿಗಳ ಉಪಸ್ಥಿತಿಯನ್ನು ಪರೀಕ್ಷಿಸಲು ಸ್ವ್ಯಾಬ ಸಹಾಯಕಾರಿಯಾಗಿದೆ ಡಾ ಪರಮೇಶ್ವರಿ
ಶಸ್ತ್ರಚಿಕಿತ್ಸಾ ಕೋಣೆಯಲ್ಲಿ ಸೂಕ್ಷ್ಮ ಜೀವಿಗಳ ಉಪಸ್ಥಿತಿಯನ್ನು ಪರೀಕ್ಷಿಸಲು ಸ್ವ್ಯಾಬ ಸಹಾಯಕಾರಿಯಾಗಿದೆ ಡಾ ಪರಮೇಶ್ವರಿ
ಕಲಬುರ್ಗಿ: ಶಸ್ತ್ರಚಿಕಿತ್ಸಾ ಕೋಣೆಯಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಇತರ ಸೂಕ್ಷ್ಮಜೀವಿಗಳ ಉಪಸ್ಥಿತಿಯನ್ನು ಪರೀಕ್ಷಿಸಲು ಈ ಸ್ವ್ಯಾಬ್‌ಗಳು ಸಹಾಯ ಮಾಡುತ್ತವೆ ಎಂದು ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥರು ಹಾಗೂ ಪ್ರೋಪೆಸರ್ ಡಾ ಪರಮೇಶ್ವರಿ ಹೇಳಿದರು
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಗಮೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಓಟಿ ಸ್ವಾಬ್ ಕಲೆಕ್ಷನ್ ಪ್ರೋಸಿಜರ್ ಫಾರ್ ಟೆಕ್ನಿಕಲ್ ಸ್ಟಾಪ್ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.
ಸೂಕ್ಷ್ಮಜೀವಿಗಳು ಯಾವ ಪ್ರತಿಜೈವಿಕಗಳಿಗೆ ಹೆಚ್ಚು ನಿರೋಧಕವಾಗಿವೆ ಎಂಬುದನ್ನು ನಿರ್ಧರಿಸಲು ಸ್ವ್ಯಾಬ್ ಸಂಗ್ರಹಣೆ ಅಗತ್ಯವಾಗಿದೆ. ಇದು ಪ್ರತಿಜೈವಿಕ ಪ್ರತಿರೋಧವನ್ನು ನಿರ್ವಹಿಸಲು ಅತ್ಯಗತ್ಯ ಎಂದು ಹೇಳಿದರು.
ಸೋಂಕುಗಳ ಹರಡುವಿಕೆಯನ್ನು ತಡೆಗಟ್ಟುವ ಮೂಲಕ, OT ಸ್ವ್ಯಾಬ್ ಸಂಗ್ರಹಣೆಯು ರೋಗಿಯ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ ಮತ್ತು ಶಸ್ತ್ರಚಿಕಿತ್ಸಾ ನಂತರದ ತೊಡಕುಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವೇಶ್ವರ ಆಸ್ಪತ್ರೆಯ ಡಾ ಶಿಲ್ಪಾ ಪ್ರಧಾನ್, ಡಾ ಬಸವರಾಜ ಪಾಟೀಲ, ಶರಣಮ್ಮ, ವೈದ್ಯಕೀಯ ಅಧಿಕ್ಷಕರಾದ ಡಾ ಮಹಾನಂದಾ ಮೇಳಕುಂದಿ, ಕಾರ್ಯಕ್ರಮ ಸಂಘಟಕಿ ಡಾ ಪಾರ್ವತಿ ಭೀಮಳ್ಳಿ, ಸತೀಶ್ ಹಿರೇಮಠ ಉಪಸ್ಥಿತರಿದ್ದರು.
