ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ: ಬಿಇಓ ಚಿಂಚೋಳಿ :

ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ: ಬಿಇಓ ಚಿಂಚೋಳಿ :
ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ: ಬಿಇಓ ಚಿಂಚೋಳಿ :

ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ: ಬಿಇಓ ಚಿಂಚೋಳಿ :

ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಜ್ಞಾನ ಹೆಚ್ಚಳಗೊಳುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ ಹೇಳಿದರು.

ಇಲ್ಲಿನ ಪೋಲಕಪಳ್ಳಿ ತಾಲುಕಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2025-26ನೇ ಸಾಲಿನ ಚಿಂಚೋಳಿ ತಾಲೂಕ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ದೇಶದ 140 ಕೋಟಿ ಜನಸಂಖ್ಯೆ ಹೊಂದಿದರೂ ಭಾರತ ಕ್ರೀಡೆಯಲ್ಲಿ ಒಲಂಪಿಕ್ಸ್ ಪದಕ ಪಡೆಯಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ, ತಾಲೂಕಿಗೆ ಕೀರ್ತಿ ಪಾತ್ರರಾಗಬೇಕೆಂದರು.

ತಾ.ಪಂ. ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಚವ್ಹಾಣ ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವಂತಹ ಮುಖ್ಯ ಘಟವಾಗಿದೆ. ಹೀಗಾಗಿ ಮಕ್ಕಳು ಕ್ರೀಡೆಯು ಉತ್ಸಹದಿಂದ ಮೈಗೂಡಿಸಿಕೊಂಡಷ್ಟು ಭವಷ್ಯ ಉಜ್ವಲಗೊಳಲಿದೆ ಮತ್ತು ವಿದ್ಯಾರ್ಥಿಗಳಿಗೆ ದೇಶದ ವಿವಿಧ ರಂಗಗಳಲ್ಲಿ ಗುರುತಿಸಿಕೊಳ್ಳಲು ಕ್ರೀಡೆ ಮುಖ್ಯ ಪಾತ್ರ ವಹಿಸಲಿದೆ ಎಂದರು.

ಕ್ರೀಡೆಯಲ್ಲಿ ಗೆದ್ದ ಶಾಲೆಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ :  

ತಾಲೂಕಿನ ನಾಗಾಇದ್ಲಾಯಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ಕಬ್ಬಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಉದ್ದ ಜಿಗಿತದಲ್ಲಿ ದ್ವೀತಿಯ ಸ್ಥಾನ, ಬಾಲಕರ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ದ್ವೀತಿಯ ಸ್ಥಾನ ಹಾಗೂ ಗಡಿಕೇಶ್ವರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಖೋ ಖೋ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುವುದಕ್ಕೆ ಶಾಲೆಯ ಮುಖ್ಯಗುರುಗಳು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕವೃಂದ ಹಾಗೂ ವಲಯ ಶಿಕ್ಷಣ ಸಂಪನ್ಮೂಲ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.  

ಈ ಸಂದರ್ಭದಲ್ಲಿಪೋಲಕಪಳ್ಳಿ ಗ್ರಾ.ಪಂ.ಅಧ್ಯಕ್ಷೆ ಸುವರ್ಣ ಜಗನ್ನಾಥ, ನಾಗಶೆಟ್ಟಿ ಭದ್ರಶೆಟ್ಟಿ, ಮಲ್ಲಿಕಾರ್ಜುನ್ ಪಾಲಮೂರ, ದೇವೀಂದ್ರಪ್ಪ ಹೊಳ್ಕರ್ , ಜಯಪ್ಪ ಚಾಪಲ್, ಖುರ್ಷಿದಮಿಯಾ ಐನಾಪೂರ, ಅಶೋಕ ಹೂವಿನಭಾವಿ, ಶಾಮರಾವ ಮೋಘ, ಮಾರುತಿ ಪತಂಗೆ, ಮಲ್ಲಿಕಾರ್ಜುನ ನೆಲ್ಲಿ, ಹಣಮಂತ ಗುತ್ತೇದಾರ, ಮಲ್ಲಿಕಾರ್ಜುನ್ ಪಸ್ತಾಪೂರ, ಮಹಾದೇವ ಬಿರಾದಾರ, ರಾಜು ಮುಸ್ತರಿ, ಚಾಂದ್ ಪಾಶಾ, ನಾಗರತ್ನ ಚಿಮ್ಮನಚೋಡ, ಕೃಷ್ಣವೇಣಿ, ರೇವಣಸಿದ್ದ ಕಲಬುರಗಿ ಅವರು ಇದ್ದರು.