ಸಾಧಕನಿಗೆ ಇಷ್ಟಲಿಂಗ ಅವಶ್ಯಕ

ಸಾಧಕನಿಗೆ ಇಷ್ಟಲಿಂಗ ಅವಶ್ಯಕ
ಕಲಬುರ್ಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂ. ಗಂಗಮ್ಮ ವೀರಪ್ಪ ಹತ್ತಿ ಸ್ಮರಣಾರ್ಥ ಜರುಗಿದ 896 ನೆಯ ದತ್ತಿ ಕಾರ್ಯಕ್ರಮದಲ್ಲಿ ಅಗ್ನಿಯಲ್ಲಿಹ ಗುಣವು ಪ್ರಕಾಶದಲ್ಲುಂಟೆ ಎಂಬ ವಿಷಯದ ಕುರಿತು ಡಾ. ಟಿ.ಆರ್. ಗುರುಬಸಪ್ಪ ಅವರು ಮಾತನಾಡುತ್ತಾ ಉರಿಲಿಂಗಪೆದ್ದಿ ಮಹಾರಾಷ್ಟ್ರ ಮೂಲದವರಾಗಿದ್ದು ಪೂರ್ವಾಶ್ರಮದಲ್ಲಿ ದಲಿತರಾಗಿದ್ದರು .ಬಸವಾದಿ ಶರಣರ ಸಂದೇಶಕ್ಕೆ ಮಾರುಹೋಗಿ ಶರಣರಾದರು . ಗುರುಗಳು ಲಿಂಗ ದೀಕ್ಷೆ ಕೊಡಲು ನಿರಾಕರಿಸಿ ಒಂದು ಕಲ್ಲನ್ನು ಇವರೆಡೆಗೆ ಎಸೆದರೆ ಆ ಕಲ್ಲನ್ನೇ ಲಿಂಗವೆಂದು ಭಾವಿಸಿ ಪೂಜಿಸಿ ಶ್ರೇಷ್ಠ ಶರಣರಾದರು . ಮಠದ ಮಠಾಧಿಪತಿಯೂ ಆದರೂ.
ಇಷ್ಟಲಿಂಗದ ಮಹತ್ವವನ್ನು ಅವರು ಸಾರಿದ್ದಾರೆ .ನಿರಾಕಾರ ದೇವರ ಸಾಕಾರ ಕುರುಹು ಅಂಗೈಯಲ್ಲಿರುವ ಲಿಂಗವಾಗಿದೆ .ನಿರಾಕಾರ ನಿರ್ಗುಣ ದೇವರನ್ನು ಅರಿಯಲು ಸಾಕಾರ ಲಿಂಗ ಬೇಕೇ ಬೇಕು ಎಂದು ಹೇಳಿದರು .ಸಾಕಾರ ನಿರಾಕರ ಎರಡು ಬೇರೆ ಅಲ್ಲ ,ನಿರಾಕಾರವು ಸಹಕಾರದಲ್ಲಿ ನಾವು ಕಾಣಲು ಸಾಧ್ಯವಿದೆ .ಬ್ರಹ್ಮಾಂಡ ಪಿಂಡಾಂಡ ಎರಡು ಗರ್ಭಿಸಿಕೊಂಡಿದ್ದೆ ಲಿಂಗವಾಗಿದೆ . ಆಕಾಶದಲ್ಲಿ ಹಾರಾಡುವ ಗಾಳಿಪಟಕ್ಕೆ ಸೂತ್ರದ ಅವಶ್ಯಕತೆ ಇರುವಂತೆ ಭಕ್ತನಿಗೆ ಲಿಂಗದ ಅವಶ್ಯಕತೆ ಇದೆ . ವೀರಸೇನಾನಿಗೆ ಹೋರಾಡಲು ಆಯುಧ ಅವಶ್ಯಕತೆ ಇರುವಂತೆ ಸಾಧಕನಿಗೆ ಲಿಂಗದ ಅವಶ್ಯಕತೆ ಇದ್ದೇ ಇದೆ ಎಂದು ಶರಣರು ಸಾರಿದ್ದಾರೆ .ಅಂತರಂಗದಲ್ಲಿ ದೇವರ ಅಪಾರಜ್ಞಾನ ಉಳ್ಳವನಿಗೂ ಕೂಡ ಬಹಿರಂಗದಲ್ಲಿ ಕ್ರಿಯೆ ಬೇಕೇ ಬೇಕು. ಸತಿಸಂಗ ಬೇಕೆಂದರೆ ಮದುವೆ ಆಗಬೇಕು. ಕಣ್ಣು ಕಾಣಬೇಕಾದರೆ ಬೆಳಗಿನ ಅವಶ್ಯಕತೆ ಇರುವಂತೆ ನಿರಾಕಾರ ದೇವರನ್ನು ಕಾಣಲು ಸಾಕಾರ ಲಿಂಗ ದೀಕ್ಷೆ ಪಡೆಯಲೇಬೇಕು ಎಂದರು .
ಇಷ್ಟಲಿಂಗ ಇಲ್ಲದವರ ಮುಖ ನೋಡಲಾಗದು ಎಂದು ಚನ್ನಬಸವಣ್ಣ ಹೇಳಿದ್ದಾರೆ .ಲಿಂಗವೆಂದರೆ ತನ್ನನ್ನೇ ತಾನು ಕಾಣುವ ಕನ್ನಡಿಯಾಗಿದೆ .ದೇವರನ್ನು ಅರಿತ ಜ್ಞಾನಿಗೆ ಲಿಂಗದ ಅವಶ್ಯಕತೆ ಇಲ್ಲವೆಂದು ಹೇಳುವುದು ಮೂರ್ಖತನವಾಗಿದೆ ,ಪ್ರತಿಯೊಬ್ಬರಿಗೂ ಲಿಂಗದ ಅವಶ್ಯಕತೆ ಇದೆ ಎಂದು ಶರಣರು ಹೇಳಿದ್ದಾರೆ .ಅಂತರಂಗದಲ್ಲಿ ದೇವರ ಅರಿವಾದರೂ ಕೂಡ ಬಹಿರಂಗದಲ್ಲಿ ಲಿಂಗ ಪೂಜೆಯ ಕ್ರಿಯೆ ಬೇಕೇ ಬೇಕು . ಸಾಕಾರ ನಿರಾಕಾರ ಏಕೋ ದೇವ ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ .
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಿದೆ ಎಂದು ಅಲ್ಲಮಪ್ರಭುದೇವರು ಹೇಳಿದ್ದಾರೆ .ಇಷ್ಟಲಿಂಗ ಸಾಕಾರವಾದರೂ ನಿರಾಕಾರವಾಗಿದೆ .ಸಿದ್ದರಾಮ ಹೇಳುವಂತೆ ಅರಿವು ಜ್ಞಾನದ ಬಲವಾಗಿದೆ .ಭಾವಲಿಂಗ ಪ್ರಾಣಲಿಂಗ ಇಷ್ಟಲಿಂಗಗಳು ಒಂದಾಗಿ ಪೂಜಿಸಬೇಕು ಎಂದಿದ್ದಾರೆ.ಇಷ್ಟಲಿಂಗದಿಂದ ಆತ್ಮ ಉನ್ನತಿಯ ಲಾಭವಿದೆ ಎಂದು ಹೇಳಿದರು .
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ , ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ ದತ್ತಿ ದಾಸೋಹಿಗಳಾದ ಎಸ್ ವಿ ಹತ್ತಿ , ಡಾ.ಕೆ. ಎಸ್. ವಾಲಿ ಉದ್ದಂಡಯ್ಯ ಭಾಗವಹಿಸಿದರು.