ಕಲಬುರ್ಗಿಯಲ್ಲಿ ಬಿ ವೈ ವಿಜಯೇಂದ್ರ ಜನ್ಮದಿನಾಚರಣೆ
ಬಿ.ವೈ. ವಿಜಯೇಂದ್ರ ಜನ್ಮದಿನ ಕಲಬುರಗಿಯಲ್ಲಿ ಭವ್ಯವಾಗಿ ಆಚರಣೆ
ಕಲ್ಯಾಣ ಕಹಳೆ ವಾರ್ತೆ ಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಜನ್ಮದಿನವನ್ನು ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಭವ್ಯವಾಗಿ ಆಚರಿಸಲಾಯಿತು. ಬಿಜೆಪಿ ಮುಖಂಡ ಆನಂದ ಕಣಸೂರ ಅವರ ನೇತೃತ್ವದಲ್ಲಿ ವಿಜಯೇಂದ್ರ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಕೇಶ ವಾಡೇಕರ, ಈರಣ್ಣ ಹಡಪದ, ಚೇತನ್ ಹಿರೇಮಠ, ರಾಹುಲ ಬಬಲಾದ, ನಿತೇಶ್ ಚವ್ಹಾಣ, ವಿಶ್ವನಾಥ ಸೌಕಾರ್, ಶರಣು ನೇತಿ, ಅಂಬಾರಾಯ ಸಾವಳಗಿ, ಗುರುರಾಜ್ ಸುಂಟನೂರ್, ಅನಿಲ್ ಎಡಗೆ, ಸಿದ್ದು ತುಪ್ಪದ, ಲಖನ ಕಾಂಬ್ಳೆ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ ಅವರ ನಾಯಕತ್ವವನ್ನು ಶ್ಲಾಘಿಸಿ, ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷ ಬಲವರ್ಧನೆಗೆ ಅವರ ಕೊಡುಗೆಯನ್ನು ಸ್ಮರಿಸಲಾಯಿತು.
