ಒಳ ಮೀಸಲಾತಿ ವರದಿ ಸರಿಪಡಿಸಿ : ಮಛಂದ್ರನಾಥ ಕಾಂಬಳೆ

ಒಳ ಮೀಸಲಾತಿ ವರದಿ ಸರಿಪಡಿಸಿ : ಮಛಂದ್ರನಾಥ ಕಾಂಬಳೆ
ಬೀದರ- ನ್ಯಾ. ನಾಗಮೋಹನ್ ದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಛಲವಾದಿ (ಹೊಲಯ ) ಸಮುದಾಯಕ್ಕೆ ಅನ್ಯಾಯ ಮಾಡಿದೆ, ಸರಿಯಾದ ದತ್ತಂಶ ಸಂಗ್ರಹಿಸದೆ ಹಿಂದಿನ ವರದಿಯನ್ನೇ ನಕಲಿಸಿದ್ದು ಅಂಟಿಸಿದ್ದು ಎಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕಲಾ ಸಾಹಿತ್ಯ ಸಾಂಸ್ಕೃತಿಕ ಸಂಘ ಆಣದೂರ ಅಧ್ಯಕ್ಷರೂ ಆರೋಪಿಸಿದ್ದಾರೆ.
ಛಲವಾದಿ ಸಮಾಜಕ್ಕೆ ಸೇರಿದ ಅನೇಕ ಉಪಜಾತಿಗಳನ್ನು ವಿಂಗಡಿಸಿ, ಜನಸಂಖ್ಯೆ ಕಡಿಮೆ ಆಗುವಂತೆ ಮಾಡಿದೆ, ಬಲಗೈ ಸಮುದಾಯದ ಛಲವಾದಿ, ಹೊಲಯ, ಹೊಲರ್, ಪರಯ್ಯ,
ಚಾಂಡಲ, ವಿವಿಧ ಉಪಜಾತಿಗಳನ್ನು ವಿಂಗಡಿಸಿ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಶತಮಾನದಿಂದ ಶೋಷಣೆಗೆ ಒಳಗಾದ ಸಮಾಜವನ್ನು ರಾಜಕೀಯವಾಗಿ ಮುಗಿಸುವ ಕೆಲಸ ಇದಾಗಿದೆ ಹಾಗೂ
ಆದಿ ಕರ್ನಾಟಕ, ಆದಿ ದ್ರಾವಿಡ ಉಪಜಾತಿಗಳಲ್ಲಿ ಶೇಕಡಾ 85 ಕ್ಕೂ ಹೆಚ್ಚು ಹೊಲೆಯ ಜಾತಿಗೆ ಸೇರಿದ ಜನರಿದ್ದು ಅವರನ್ನು ವಿಂಗಡಣೆ ಮಾಡಿ ಸಾಮಾಜಿಕ ನ್ಯಾಯ ದೊರಕದಂತೆ ಮಾಡಲಾಗಿದೆ, ಛಲವಾದಿ, ಹೊಲಯ ಎರಡನ್ನು ಸೇರಿಸಿದರೆ ಕರ್ನಾಟಕದಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಹೆಚ್ಚಾಗಲಿದೆ, ಸಾಮಾಜಿಕ ನ್ಯಾಯದ ಸಲುವಾಗಿ ಬಲಗೈ ಸಮುದಾಯದ ನಿಖರ ಸಂಖ್ಯೆ ನುಮೂದಿಸಿ 7% ಒಳ ಮೀಸಲಾತಿ ಕಲ್ಪಿಸಬೇಕು ಎಂದು ಅಗ್ರಹಿಸಿದರು.