ಸೆ.22 ರಂದು ತುಂಗಭದ್ರೆಗೆ ಬಾಗಿನ
ಸೆ.22 ರಂದು ತುಂಗಭದ್ರೆಗೆ ಬಾಗಿನ
ಕಲಬುರಗಿ:
ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು
ಕೊಪ್ಪಳ, ರಾಯಚೂರು,ಬಳ್ಳಾರಿ ಹಾಗೂ ನೆರೆಯ ಆಂಧ್ರಪ್ರದೇಶ ಕಡಪಾ,ಕರ್ನೂಲು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ನದಿಗೆ ಹೊಸಪೇಟೆ-ಕೊಪ್ಪಳ ಮಧ್ಯೆ ಇರುವ ಜಲಾಶಯದ 19 ನೇ ಕ್ರೆಸ್ಟಗೇಟು ಸುಮಾರು ಒಂದು ತಿಂಗಳ ಹಿಂದೆ ಕಿತ್ತು ಹೋಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದುಹೋಗುತ್ತಿತ್ತು,ರೈತರು ಆತಂಕಗೊಂಡಿದ್ದರು, ಸರ್ಕಾರ,ಸ್ಥಳೀಯ ಜನಪ್ರತಿನಿಧಿಗಳು ,ಇಂಜಿನಿಯರುಗಳು ತೋರಿದ ಕಾಳಜಿ ಹಾಗೂ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವ ನೂರಾರು ಕಾರ್ಮಿಕರ ತಂಡ ಶ್ರಮವಹಿಸಿ ಕೇವಲ ಐದು ದಿನಗಳಲ್ಲಿ ಗೇಟು ಅಳವಡಿಸಿ ನೀರು ಪೋಲಾಗುವುದನ್ನು ನಿಯಂತ್ರಿಸಿದರು.ಪರಿಣಾಮವಾಗಿ ಈಗ ಜಲಾಶಯ ಪುನಃ ಭರ್ತಿಯಾಗಿದೆ.
ಕ್ರೆಸ್ಟ್ ಗೇಟ್ ದುರಸ್ತಿಗೆ ಶ್ರಮಿಸಿದ ಎಲ್ಲ ಅಧಿಕಾರಿಗಳು, ಇಂಜನಿಯರು ಹಾಗೂ ಕಾರ್ಮಿಕರು ಸೇರಿ ಸುಮಾರು 108 ಜನರಿಗೆ ಅಂದು ಸತ್ಕರಿಸಿ,ಗೌರವಿಸಲಾಗುವುದು ಎಂದರು.