ಸೇಡಂ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ರಣರೋಚಕ ಸಾಧನೆ
ಸೇಡಂ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ರಣರೋಚಕ ಸಾಧನೆ
ಸೇಡಂ, ನ.೨ : ಮೈಸೂರು ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನವೆಂಬರ್ ೧ ಮತ್ತು ೨ರಂದು ನಡೆದ ಆಲ್ ಇಂಡಿಯಾ ಶಿಟೋರಿಯೋ ಕರಾಟೆ-ಡು ಚಾಂಪಿಯನಶಿಪ್ 2025 ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಸೇಡಂ ತಾಲೂಕಿನ ಎಚ್.ಪಿ.ಎಸ್ ನಂ.2, ವಿದ್ಯಾನಗರ ಶಾಲೆಯ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ತೋರಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದ ಈ ಎರಡು ದಿನಗಳ ಕ್ರೀಡಾಕೂಟದಲ್ಲಿ, ಸೇಡಂ ತಾಲೂಕಿನ ವಿದ್ಯಾರ್ಥಿಗಳು ಒಟ್ಟು ಆರು ಪದಕಗಳನ್ನು ಗೆದ್ದುಕೊಂಡು ತಾಲೂಕಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ್ದಾರೆ.
ವಿಜೇತರ ವಿವರಗಳು:
* ಶರತ್ ಕುಮಾರ್ (ತಂದೆ ರಮೇಶ್) – ಚಿನ್ನದ ಪದಕ
* ಜೀವನ (ತಂದೆ ಶಂಕರ್) – ಬೆಳ್ಳಿಯ ಪದಕ
* ಹಾರೋ (ತಂದೆ ಸಾಬಣ್ಣ) – ಕಂಚಿನ ಪದಕ
* ಪ್ರತಿಕ್ (ತಂದೆ ರಾಘವೇಂದ್ರ) – ಕಂಚಿನ ಪದಕ
* ಸಾಯಿ ರಿತ್ವಿಕ್ (ತಂದೆ ರಾಜಕುಮಾರ) – ಕಂಚಿನ ಪದಕ
* ಕೌಶಿಕ್ (ತಂದೆ ಎಂ.ಜಿ. ದೀಪು) – ಕಂಚಿನ ಪದಕ
ಈ ವಿಜಯದ ಕುರಿತು ಭಾರತೀಯ ಕರಾಟೆ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಸಿ.ಎಸ್. ಅರುಣ ಮಾಚಯ್ಯ ಹಾಗೂ ಕಲ್ಯಾಣ ಕರ್ನಾಟಕ ಜೆನ್ನ ಶಿಟೋರಿಯೋ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿಹಾನ್ ದಶರಥ ದುಮ್ಮನ್ಸೂರ್ ಅವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳನ್ನು ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕರಾಟೆ ಕೋಚ್ ಕಾವೇರಿ ಹಾಗೂ ಸೇನ್ಸೈ ಸಾಬಣ್ಣ ಅಳ್ಳೊಳ್ಳಿ ಅವರು “ವಿದ್ಯಾರ್ಥಿಗಳ ಶ್ರದ್ಧೆ, ಶಿಸ್ತು ಮತ್ತು ಹಠಮಾರಿತನದಿಂದ ಈ ಯಶಸ್ಸು ಸಾಧ್ಯವಾಗಿದೆ” ಎಂದು ತಿಳಿಸಿದ್ದಾರೆ.
ವರದಿ: ಜೇಟ್ಟೆಪ್ಪ ಎಸ್. ಪೂಜಾರಿ
