ಇಜೇರಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ 70ನೇ ಕನ್ನಡ ರಾಜ್ಯೋತ್ಸವ
ಇಜೇರಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ 70ನೇ ಕನ್ನಡ ರಾಜ್ಯೋತ್ಸವ
ಯಡ್ರಾಮಿ: ತಾಲೂಕಿನ ಇಜೇರಿ ಗ್ರಾಮದಲ್ಲಿ ಡಾ. ವಿಷ್ಣು ಸೇನಾ ಸಮಿತಿಯ ತಾಲೂಕಾಧ್ಯಕ್ಷ ರಾಹುಲ್ ಬಿ. ಮದರಿ ಅವರ ನೇತೃತ್ವದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮವು ಡಾ. ವಿಷ್ಣುವರ್ಧನ್ ವೃತ್ತದಲ್ಲಿ ಜರುಗಿದ್ದು, ಶ್ರೀಶೈಲ್ ಯಡ್ರಾಮಿ, ಮುಖ್ಯಗುರು, ಸರಕಾರಿ ಪ್ರೌಢಶಾಲೆ ಇಜೇರಿ ಅವರು ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಂಜುನಾಥ್ ಸಾವರಕರ್, ಉಪತಹಸಿಲ್ದಾರರು ಇಜೇರಿ, ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ದೇವರಾಜ್ ಗುತ್ತೇದಾರ್ ಅವರು ಯಶಸ್ವಿಯಾಗಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಡಾ. ವಿಷ್ಣು ಸೇನಾ ಸಮಿತಿಯ ತಾಲೂಕಾಧ್ಯಕ್ಷ ರಾಹುಲ್ ಬಿ. ಮದರಿ,ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣರಾಯ ಪಾಟೀಲ್ ಯಂಕಂಚಿ,ಮಳ್ಳಿ ಕಾಲೇಜಿನ ಅತಿಥಿ ಶಿಕ್ಷಕರು ಜಟ್ಟಪ್ಪ ಎನ್. ಪೂಜಾರಿ ಮತ್ತು ಸಾಹೇಬಗೌಡ ಯಂಕಂಚಿ,ಶಬ್ಬೀರ್ ಸಾಹು (ಲಕ್ನಾಪುರ),ಮಹೆಬೂಬ್ ಸೌದಾಗರ್ (ಇಜೇರಿ),ಸೈದಪ್ಪ ಕಟ್ಟಿಮನಿ,ಮರೆಲಿಂಗಪ್ಪ ಕೇರೂರ್,ಸೈದಪ್ಪ ಹೊಸಮನಿ,ಅಶೋಕ್ ಕಟ್ಟಿಮನಿ,ಈರಣ್ಣ ಬಿದರಾಣಿ,ಮಕ್ಬುಲ್ ನಾಸಿ,ರಮೇಶ್ ಮುಡಬುಳ,ಶಿವು ಅವರದಿ,ಸಲೀಂ ಭಗವಾನ್,ಈಶ್ವರ್ ಕಟ್ಟಿಮನಿ,ಮರೆಪ್ಪ ಯಡ್ರಾಮಿ,ಅಬೂಬಕರ್ ಭಗವಾನ್,ಬಸವರಾಜ್ ಯಂಕಂಚಿ,ಹಾಗೂ ಅನೇಕ ಕನ್ನಡಾಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡ ಡಾ. ವಿಷ್ಣು ಸೇನಾ ಸಮಿತಿ – ಇಜೇರಿ ಘಟಕ ಪ್ರಶಂಸೆಗೆ ಪಾತ್ರವಾಯಿತು.
ವರದಿ: ಜಟ್ಟಪ್ಪ ಎಸ್. ಪೂಜಾರಿ (ಯಡ್ರಾಮಿ ವರದಿಗಾರ)
