ಸಾಧಕೋತ್ತಮರಿಗೆ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ

ಸಾಧಕೋತ್ತಮರಿಗೆ   ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ

 ಸಾಧಕೋತ್ತಮರಿಗೆ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ

ಆಯೋಜನೆ : ವಿಶ್ವ ಮಧ್ವಮತ ವೆಲ್‌ಫೇರ್ ಫೌಂಡೇಶನ್ 

 ಆಚಾರ್ಯ ಮಧ್ವರ ಚಿಂತನೆಗಳು ಸಾರ್ವಕಾಲಿಕ  ಅರಳು ಮಲ್ಲಿಗೆ ಪಾರ್ಥಸಾರಥಿ ಅಭಿಮತ 

ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ಬೆಂಗಳೂರು ಚಾಮರಾಜಪೇಟೆ ಶ್ರೀಮನ್ಮಾಧ್ವ ಸಂಘದಲ್ಲಿ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಶ್ವ ಮಧ್ವಮತ ವೆಲ್‌ಫೇರ್ ಅಸೋಸಿಯೇಷನ್ ಆಯೋಜಿಸಿತ್ತು 

ಕನ್ನಡನಾಡಿನ ಹೆಮ್ಮೆಯ ಆಚಾರ್ಯರಾದ ವಿಶ್ವಗುರು ಮಧ್ವಾಚಾರ್ಯರ ಸಂದೇಶದ ಪ್ರಸಾರ ತನ್ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕೈಂಕರ‍್ಯ ಮಾಡುತ್ತಿರುವ ವಿಎಂಡಬ್ಲೂಎ ವತಿಯಿಂದ ಈ ಸಮಾರಂಭ ಏರ್ಪಡಿಸಿದ್ದು, ಗಾಂಧಿ ಬಜಾರ್ ಸೋಸಲೇ ವ್ಯಾಸರಾಜ ಮಠದಿಂದ ಚಾಮರಾಜಪೇಟೆ ಶ್ರೀಮನ್ಮಾಧ್ವ ಸಂಘದವರೆಗೆ ಬೃಹತ್ ಶೋಭಾಯಾತ್ರೆಗೆ ಶಾಸಕ ರವಿ ಸುಬ್ರಮಣ್ಯ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥರು ವಹಿಸಿ  

ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಾದ ಅಂತಾರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಟಿಟಿಡಿ ಆಡಳಿತ ಮಂಡಳಿಯ ನಿಕಟಪೂರ್ವ ಸದಸ್ಯ ಮತ್ತು ಎಸ್‌ವಿಬಿಸಿ ನಿರ್ದೇಶಕ ಡಾ.ಡಿ.ಪಿ. ಅನಂತ , ಸಮಾಜ ಸೇವಕ ವಿದ್ವಾನ್ ಪ್ರಸನ್ನ ಹೆಬ್ಬಣಿ, ವಿಜಯಮಾಲಾ ಟ್ರಸ್ಟ್ ಸಂಸ್ಥಾಪಕಿ ಹರಿಣೀ ಪಗಡಾಲ ರವರುಗಳಿಗೆ ಮತ್ತು ಚಾಮರಾಜಪೇಟೆ ‘ಶ್ರೀಮನ್ಮಾಧ್ವ ಸಂಘ’ಕ್ಕೆ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

 ಇದೇ ಸಂದರ್ಭದಲ್ಲಿ ವಿದ್ಯಾಪೀಠಗಳಲ್ಲಿ ಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಾದ ಎಸ್ ಬಿ ಸಾಗರ್ 

 ಪ್ರ ಣವಾಚಾರ್ಯ,ಶ್ರೀನಿಧಿ ಆಚಾರ್ಯ, ಚರಣ್ ವಸಿಷ್ಠ 

 ವೇದವ್ಯಾಸ ಪುರಸ್ಕಾರ ನೀಡಿಲಾಯಿತು.

 ವಿಎಂಡಬ್ಲೂಎಫ್ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ವೆಂಕೋಬ ರಾವ್ ಪ್ರಾಸ್ತಾವಿಕ ನುಡಿಗಳನ್ನು ಆಡಿ ಸಮುದಾಯದಲ್ಲಿ ಪರಸ್ಪರ ಸ್ನೇಹ ವಿಶ್ವಾಸ ವೃದ್ಧಿಗೆ ಪ್ರಯತ್ನಿಸುತ್ತ ಸಮಾನತೆ ಸಹಾನುಭೂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಪ್ರಾರಂಭವಾಗಿದೆ ಎಂದು ತಿಳಿಸಿದರು.

 ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ವಿದ್ವಾಂಸ ಅರಳು ಮಲ್ಲಿಗೆ ಪಾರ್ಥಸಾರಥಿ ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀಮಧ್ವಾಚಾರ್ಯರ ಚಿಂತನೆಗಳು ಸಾರ್ವಕಾಲಿಕವಾಗಿದ್ದು ಉತ್ತರದ ಬದರಿಯಲ್ಲಿ ಅವರ ಪ್ರತಿಮೆ ಸ್ಥಾಪಿಸುವ ಕಾರ್ಯ ಅಂತೆಯೇ ಕೇಂದ್ರ ಸರ್ಕಾರದಿಂದ ಅಂಚೆ ಚೀಟಿಯನ್ನು ಹೊರ ತರಬೇಕು, ರಾಜ್ಯ ಸರ್ಕಾರ ಅವರ ಜಯಂತಿಯನ್ನು ಆಚರಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ತಿಳಿಸಿದರು.

ಎಕೆಬಿಎಂಎಸ್ ನಿಕಟಪೂರ್ವ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ಚಾಮರಾಜಪೇಟೆ ಶ್ರೀಮನ್ಮಾಧ್ವ ಸಂಘದ ಅಧ್ಯಕ್ಷ ನಾಗೇಶ್, ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಸಂಘಟನೆಯ ಪ್ರಮುಖರಾದ ರಾಘವೇಂದ್ರ ಜೋಯಿಸ್ ಶ್ರೀನಿವಾಸ ಜೋಶಿ ಮೊದಲಾದವರು ಉಪಸ್ಥಿತರಿದ್ದರು.