ಡಾ. ವಿಜಯಕುಮಾರ್ ಗೋಪಾಳೆಗೆ “ಸರ್ವೋತ್ತಮ ಸೇವಾ ಪ್ರಶಸ್ತಿ – 2025

ಡಾ. ವಿಜಯಕುಮಾರ್ ಗೋಪಾಳೆಗೆ “ಸರ್ವೋತ್ತಮ ಸೇವಾ ಪ್ರಶಸ್ತಿ – 2025

ಡಾ. ವಿಜಯಕುಮಾರ್ ಗೋಪಾಳೆಗೆ “ಸರ್ವೋತ್ತಮ ಸೇವಾ ಪ್ರಶಸ್ತಿ – 2025”

ಕಲಬುರಗಿ: ಸರಕಾರಿ ಸ್ವಾಯತ್ತ ಕಾಲೇಜಿನ ಗ್ರಂಥಪಾಲಕರಾಗಿರುವ ಮತ್ತು ಎನ್.ಸಿ.ಸಿ. ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಿಜಯಕುಮಾರ್ ಬಿ. ಗೋಪಾಳೆ ಅವರು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಶ್ರೇಷ್ಠ ಸೇವೆ, ಯುವಕರ ವ್ಯಕ್ತಿತ್ವ ವಿಕಾಸ ಮತ್ತು ಶಿಸ್ತು ನಿರ್ಮಾಣದಲ್ಲಿ ತೋರಿದ ಅಸಾಧಾರಣ ಕೊಡುಗೆಗಾಗಿ ಜಿಲ್ಲಾ ಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ – 2025” ಗೌರವಕ್ಕೆ ಆಯ್ಕೆಯಾಗಿದ್ದಾರೆ.

ಡಾ. ಗೋಪಾಳೆ ಅವರ ನಿಷ್ಠೆ, ಶ್ರಮ, ಶಿಸ್ತಿನ ಮೌಲ್ಯಗಳು ಹಾಗೂ ವಿದ್ಯಾರ್ಥಿಗಳ ಮಾರ್ಗದರ್ಶನದ ಹೋರಾಟವು ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಅವರ ಈ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಪ್ರೇರಣೆಯಾಗಿದೆ.

ಈ ಗೌರವವು ಅವರ ವೃತ್ತಿಪರತೆ, ಪ್ರಾಮಾಣಿಕತೆ ಮತ್ತು ಸಮಾಜ ಸೇವೆಯ ಪ್ರತಿಬಿಂಬವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಎಲ್ಲಾ ನಿಕಾಯದ ಡೀನರು, ವಿಭಾಗಾಧ್ಯಕ್ಷರು ಹಾಗೂ ವಿದ್ಯಾರ್ಥಿ ಸಮುದಾಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.