ಐಟಿಐ ನೌಕರರ ಬೇಡಿಕೆ ಈಡೇರಿಸಿದ್ದಕ್ಕಾಗಿ: ಸಚಿವ ಶರಣಪ್ರಕಾಶ ಪಾಟೀಲ
ಐಟಿಐ ನೌಕರರ ಬೇಡಿಕೆ ಈಡೇರಿಸಿದ್ದಕ್ಕಾಗಿ: ಸಚಿವ ಶರಣಪ್ರಕಾಶ ಪಾಟೀಲ
ಥಾಮಾಸ್ ವರದಿ ಜಾರಿಗೆ ಸಹಕರಿಸಿದ ಐಟಿಐ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಿದ್ದಕ್ಕಾಗಿ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಕೌಶಲ್ಯಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಶರಣಪ್ರಕಾಶ್ ಪಾಟೀಲ್ ಅವರಿಗೆ ಕರ್ನಾಟಕ ರಾಜ್ಯ ಅನುದಾನಿತ ಖಾಸಗಿ ಐಟಿಐ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಕಲಬುರಗಿ ನಗರದ ಸಚಿವ ಶರಣಪ್ರಕಾಶ ಪಾಟೀಲ್ ಅವರ ನಿವಾಸಕ್ಕೆ ಭೇಟಿಕೊಟ್ಟ ಕರ್ನಾಟಕ ರಾಜ್ಯ ಅನುದಾನಿತ ಖಾಸಗಿ ಐಟಿಐ ನೌಕರರ ಸಂಘದ ಮುಖಂಡರು ತಮ್ಮ ಬಹುದಿನಗಳ ಬೇಡಿಕೆಯಾದ ತಾಮಸ್ ವರದಿ ಪರ ಧ್ವನಿಯಾಗಿ ವರದಿ ಜಾರಿಗೆ ಕಾರಣರಾದ ಸಚಿವರಿಗೆ ಸನ್ಮಾನಿಸಿ ಗೌರವಿಸಿದರು
ಈ ಸಂಧರ್ಭದಲ್ಲಿ ಮಾತನಾಡಿದ ಮುಖಂಡರು ತಾಮ್ ವರದಿ ಜಾರಿಗೆ ನಮ್ಮ ಐಟಿಐ ನೌಕರರು ಕಳೆದ ಹಲವು ದಿನಗಳಿಂದ ನಿರಂತರ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿದ್ದು ನಾವು ಸರ್ಕಾರಕ್ಕೆ ಚೀರರುಣಿಯಾಗಿದ್ದೆವೆ ಎಂದರು.
ಕರ್ನಾಟಕ ರಾಜ್ಯ ಅನುದಾನಿತ ಖಾಸಗಿ ನೌಕರರ ಸಂಘದ ಅಧ್ಯಕ್ಷ ಎಸ್ ಆರ್ ರವಿ, ಸಿದ್ದರಾಮೇಶ್ವರ ಪಾಟೀಲ್, ಮಾಂತೇಶ್ ಪಾಟೀಲ್ ಮತ್ತು ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
