ಮುಖ್ಯಮಂತ್ರಿ ಹಾಗೂ ಖರ್ಗೆಜಿ ಅವರಿಗೆ ಅಭಿನಂದನೆ ಸಲ್ಲಿಸಿದ ಕುರುಬ ಸಂಘ
ಕಲಬುರಗಿ ನಗರದ ರಾಜಾಪೂರ ಬಡಾವಣೆಯ ಸರ್ಕಾರಿಯ ಸರ್ವೆ ನಂಬರ್ 7,8/1 ರ, 3 ಎಕರೆ 7 ಗುಂಟೆ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರಗಿ ಶಾಖೆಗೆ ಮಂಜೂರು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿ ಸರ್ಕಾರ ತೀರ್ಮಾನಿಸಿದ್ದು ಸ್ವಾಗತ ಎಂದು ಗುರುನಾಥ್ ಪೂಜಾರಿ ಅವರು ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 20 ವರ್ಷಗಳಿಂದ ಹೋರಾಟ ಮಾಡಿ ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗಿರಲಿಲ್ಲ ನಮ್ಮ ಕುರು ಪ್ರಸಂಗದ ಹಿರಿಯರು ಎಲ್ಲಾ ಪದಾಧಿಕಾರಿಗಳು ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಜಿ ಅವರಿಗೆ ಮನವಿ ಸಲ್ಲಿಸಿದ್ದಾರೆ , ಸಚಿವರು ಮುತುವರ್ಜಿ ವಹಿಸಿ ಅವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ತಿಳಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲಬುರಗಿ ಶಾಖೆಗೆ ಮಂಜೂರು ಮಾಡಿ ಕೊಟ್ಟ ಅವರಿಗೆ
ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ, ಗುರುನಾಥ ಎನ್, ಪುಜಾರಿ, ಭಗವಂತರಾಯಗೌಡ ಪಾಟೀಲ,ನಿರ್ಮಲಾ ಎಸ್. ಬರಗಾಲಿ, ತಿಪ್ಪಣ್ಣ ರಾವೂರ,ರವಿಗೊಂಡ ಕಟ್ಟಿಮನಿ, ನಾಗೇಂದ್ರಪ್ಪ ಪೂಜಾರಿ , ಮಹೇಶ ಧರಿ,ಶಿವಲಿಂಗಪ್ಪ ಎಮ್. , ಸಾಯಿಬಣ್ಣ ಪೂಜಾರಿ ಉಪಸ್ಥಿತರಿದ್ದರು