ಡಿವೈಎಸ್ಪಿ ಕೆ. ಬಸವರಾಜ ಅವರಿಗೆ ಪ್ರಶಂಸನಾ ಪದಕ

ಡಿವೈಎಸ್ಪಿ ಕೆ. ಬಸವರಾಜ ಅವರಿಗೆ ಪ್ರಶಂಸನಾ ಪದಕ
ಕಲಬುರಗಿ, ಮೇ 22: 2024-25 ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರೀಕ್ಷಕರು ನೀಡುವ ಪ್ರಶಂಸನಾ ಪದಕಕ್ಕೆ ಆಯ್ಕೆಯಾಗಿರುವ ಡಿವೈಎಸ್ಪಿ ಕೆ. ಬಸವರಾಜ ಅವರು ಮಹತ್ತರ ಗೌರವವನ್ನು ಹೊಂದಿದ್ದಾರೆ.
ಬೆಂಗಳೂರಿನ ಕೆ.ಎಸ್.ಆರ್.ಪಿ 3ನೇ ಪಡೆ ಕವಾಯತ್ತು ಮೈದಾನದಲ್ಲಿ ನಡೆದ ವಿಜೃಂಭಿತ ಸಮಾರಂಭದಲ್ಲಿ ಅವರು ಪ್ರಶಸ್ತಿ ಹಾಗೂ ಪದಕವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕೆ. ಬಸವರಾಜರ ಈ ಸಾಧನೆಯು ಕಲಬುರಗಿಯ ಗೌರವ ಹೆಚ್ಚಿಸಿದ್ದು, ಪೊಲೀಸರು ಸಲ್ಲಿಸುವ ಸೇವೆ ಮತ್ತು ಕಠಿಣ ಶ್ರಮಕ್ಕೆ ಸರ್ಕಾರ ನೀಡುತ್ತಿರುವ ಮಾನ್ಯತೆಯಾಗಿದೆ.