ಇಲಾಖೆಗಳಿಗೆ ದೀಪಾಲಂಕಾರ ಮಾಡದೆ ಅಂಬೇಡ್ಕರ್ ರಿಗೆ ಅವಮಾನ : ಆರೋಪ ಸರಕಾರ ಆದೇಶ ಪಾಲನೆ ಮಾಡದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ : ಆಗ್ರಹ
ಇಲಾಖೆಗಳಿಗೆ ದೀಪಾಲಂಕಾರ ಮಾಡದೆ ಅಂಬೇಡ್ಕರ್ ರಿಗೆ ಅವಮಾನ : ಆರೋಪ
ಸರಕಾರ ಆದೇಶ ಪಾಲನೆ ಮಾಡದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ : ಆಗ್ರಹ
ಚಿಂಚೋಳಿ : ಪ್ರತಿಯೊಬ್ಬ ಮಹಾಪುರುಷರ ಜಯಂತಿಯಂದು ಸರಕಾರ ಅಧೀನದ ಎಲ್ಲಾ ಸರಕಾರಿ ಕಛೇರಿಗಳಿಗೆ ದೀಪಾಲಂಕಾರ ಹಾಕಬೇಕೆಂಬ ಆದೇಶವಿದೆ. ಆದರೆ ಪಟ್ಟಣದ ಚಿಂಚೋಳಿ ವಿದ್ಯುತ್ ಸರಬರಾಜು ಇಲಾಖೆ, ಮೀನುಗಾರಿಕೆ ಇಲಾಖೆ, ಚಂದ್ರಂಪಳ್ಳಿ ಜಲಾಶೆಯ ಇಲಾಖೆ ಗಳಿಗೆ ಅಧಿಕಾರಿಗಳು ದೀಪಾಲಂಕಾರ ಮಾಡದೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಅವಮಾನಿಸಲಾಗಿದೆ ಎಂದು ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಹೊಡೆಬೀರನಳ್ಳಿ ಅವರು ದೂರಿದ್ದಾರೆ.
ಸರಕಾರದ ಆದೇಶವಿದ್ದರೂ ದೀಪಾಲಂಕಾರ ಮಾಡದೇ ಇಲಾಖೆಗಳು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಗೆ ಅವಮಾನಿಸಿದಂತೆ ಸರಿ. ಹೀಗಾಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳಬೇಕೆಂದು ಅಧ್ಯಕ್ಷ ವಿಶ್ವನಾಥ ಅವರು ತಾಲೂಕ ಆಡಳಿತ ಅಧಿಕಾರಿ ತಹಸೀಲ್ದಾರ್ ಅವರಿಗೆ ಫೋನ್ ಕರೆ ಮಾಡಿ ದೂರಿದ್ದಾರೆ.
ಡಾ. ಬಿ. ಆರ್.ಅಂಬೇಡ್ಕರ್ ಜಯಂತಿಗೆ ದೀಪಾಲಂಕಾರ ಮಾಡುವುದಿಲ್ಲ :
ಸರಕಾರದ ಆದೇಶವಿದ್ದರೂ ಜೇಸ್ಕಾಂ ಇಲಾಖೆಗೆ ದೀಪಾಲಂಕಾರ ಮಾಡದೆ ಇರುವುದಕ್ಕೆ ಅಧಿಕಾರಿಗೆ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಅವರು ಫೋನ್ ಕರೆ ಮಾಡಿ ಕಾರಣ ಕೇಳಿದರೆ, ನಾವು ಪ್ರತಿ ವರ್ಷ ಅಂಬೇಡ್ಕರ್ ಜಯಂತಿಗೆ ಇಲಾಖೆಗೆ ದೀಪಾಲಂಕಾರ ಹಾಕುವುದಿಲ್ಲ. ಹೀಗಾಗಿ ಈ ವರ್ಷದ ಜಯಂತಿಗೂ ಕೂಡ ದೀಪಾಲಂಕಾರ ಮಾಡಿರುವುದಿಲ್ಲವೆಂದು ಜೇಸ್ಕಾಂ ಎಇಇ ತಿಳಿಸಿದ್ದಾರೆ.