ಸಿಂಧನೂರಲ್ಲಿ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ.

ಸಿಂಧನೂರಲ್ಲಿ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ.

ಸಿಂಧನೂರಲ್ಲಿ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ.

(ಕುಟುಂಬ ರಾಜಕಾರಣ ತೊಲಗಿಸಲು ನಿರುಪಾದಿ ಕೆ ಗೋಮರ್ಸಿ ಕರೆ)...

ಸಿಂಧನೂರು :- ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಮಂಗಳವಾರ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿಯಾಗಿ ನಡೆಯಿತು.ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಅಭಿಯಾನ ಕನಕದಾಸ ವೃತ್ತ, ಮಹಾತ್ಮ ಗಾಂಧೀಜಿ ವೃತ್ತ,ಬಸವೇಶ್ವರ ವೃತ್ತ,ಮಾರ್ಗವಾಗಿ ಹಳೆ ಬಜಾರ್ ಮೂಲಕ ಸಾಗಿ ಜನರಿಗೆ ಜಾಗೃತಿ ಮೂಡಿಸಲಾಯಿತು. 

ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಯವರು ಸಿಂಧನೂರು ತಾಲೂಕಿನ ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ,ಲಂಚಾವತಾರ ತುಂಬಿತುಳುಕುತ್ತಿದೆ.ಜನಸಾಮಾನ್ಯರ ಪರವಾಗಿ ಆಡಳಿತ ನಡೆಸುವ ಅಧಿಕಾರಿಗಳು ಜನರ ಕುಂದು ಕೊರತೆಗಳಿಗೆ,ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ತಾಲೂಕಿನಲ್ಲಿ ಯುವಕರ,ವಿದ್ಯಾರ್ಥಿಗಳ,ಕೃಷಿ ಕಾರ್ಮಿಕರ,ರೈತರ,ಬಡವರ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ದುಪ್ಪಟ್ಟುಕೊಂಡಿದ್ದು ಇವುಗಳ ಪರಿಹಾರಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ.ಇದಕ್ಕೆಲ್ಲ ಮೂಲ ಕಾರಣ ನಮ್ಮನ್ನಾಳುವ ಜನಪ್ರತಿನಿಧಿಗಳು ಮತ್ತು ಆಡಳಿತ ಅಧಿಕಾರಿಗಳು ಕಾರಣ.ತಾಲೂಕಿನಲ್ಲಿ ಕುಟುಂಬ ರಾಜಕಾರಣ,ಹಣಬಲ,ತೋಳಬಲದ ರಾಜಕಾರಣ ನಡೆಯುತ್ತಿದೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರಿಗೆ ಸುಳ್ಳು ಭರವಸೆಗಳನ್ನು ನೀಡುವ ಜೆಸಿಬಿ ಪಕ್ಷಗಳ ಮುಖಂಡರು ಪ್ರಸ್ತುತ ದಿನಗಳಲ್ಲಿನ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದಿರುವುದು ವಿಪರ್ಯಾಸದ ಸಂಗತಿ.ತಾಲೂಕಿನಲ್ಲಿ ಕನ್ನಡಕ್ಕೆ,ಕನ್ನಡ ಭಾಷೆಗೆ ಬಹಳಷ್ಟು ದಕ್ಕೆ ಆಗುತ್ತಿದ್ದು ಅನ್ಯರಾಜ್ಯದ ವಾಸಿಗರು ಕನ್ನಡ ನಾಡು ನುಡಿಗೆ ಅಗೌರವಿಸುತ್ತಿದ್ದು ಕನ್ನಡಿಗರ ಮೇಲೆ ದಬ್ಬಾಳಿಕೆ,ದೌರ್ಜನ್ಯ ಮಾಡುತ್ತಿದ್ದಾರೆ. ಹಾಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ಕನ್ನಡ ನೆಲ,ಜಲ,ಗಡಿ,ಭಾಷೆ,ಸಾಹಿತ್ಯ,ಸಂಸ್ಕೃತಿಯ ಉಳಿವಿಗಾಗಿ ಕನ್ನಡಿಗರ ಮೇಲೆ ಆಗುತ್ತಿರುವ ಅನ್ಯಾಯ,ಅಕ್ರಮ,ಭ್ರಷ್ಟಾಚಾರ,ದಬ್ಬಾಳಿಕೆ,ದೌರ್ಜನ್ಯಗಳನ್ನ ವಿರೋಧಿಸಲು ಅವರಿಗೆ ಶಕ್ತಿ, ಸಾಮರ್ಥ್ಯ,ಚೈತನ್ಯವನ್ನು ತುಂಬಿ ಈ ನಾಡನ್ನ ರಕ್ಷಣೆ ಮಾಡುವಂತಹ ಸ್ಪೂರ್ತಿ ತುಂಬಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ತಾಲೂಕಿನಲ್ಲಿ ಪ್ರತಿನಿತ್ಯವೂ ಜನಸಾಮಾನ್ಯರ ಪರವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಯಾವುದೇ ಇಲಾಖೆಯಲ್ಲಿ ಮತ್ತು ಅಧಿಕಾರಿಗಳಿಂದ ಭ್ರಷ್ಟಾಚಾರ ಹಾಗೂ ಅನ್ಯಾಯಕ್ಕೆ ಒಳಗಾದ ನಾಗರಿಕರು ಕೆಆರ್‌ಎಸ್ ಪಕ್ಷದ ಜೊತೆ ಸೇರಿ ಅನ್ಯಾಯವನ್ನ ಎದುರಿಸುವಂತಹ ಶಕ್ತಿಯನ್ನು ಪಡೆದುಕೊಳ್ಳಬೇಕು ಹಾಗೂ ಮುಂದಿನ ಚುನಾವಣೆಗಳಲ್ಲಿ ಕೆಆರ್‌ಎಸ್ ಪಕ್ಷದ ವತಿಯಿಂದ ಸ್ಪರ್ಧೆ ಮಾಡುವ ಮೂಲಕ ಪ್ರಾಮಾಣಿಕ ಮತ್ತು ಜನಪರ ರಾಜಕಾರಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಯುವ ಘಟಕದ ರಾಜ್ಯ ಕಾರ್ಯದರ್ಶಿ ದ್ಯಾವಣ್ಣ ಪುಲದಿನ್ನಿ,ಎಸ್ಸಿ ಎಸ್ಟಿ ಘಟಕದ ಕಾರ್ಯದರ್ಶಿ ಬಸವ ಪ್ರಭು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್,ಜಿಲ್ಲಾ ಉಪಾಧ್ಯಕ್ಷರಾದ ಕೃಷ್ಣ ಸುಕಲ್ಪೇಟೆ,ಜಿಲ್ಲಾ ಕಾರ್ಯದರ್ಶಿಗಳಾದ ಶರಣಪ್ಪ ಹಂಚಿನಾಳ್,ಶರಣಪ್ಪ ಕವಿತಾಳ್,ವಿಶ್ವನಾಥ ನಾಯ್ಡು,ಚನ್ನಬಸವ ಸೋಮಲಾಪುರ,ತಾಲೂಕ ಅಧ್ಯಕ್ಷ ವೀರೇಶ್ ಕೋಟೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಗೌಡ ಕಾರ್ಯದರ್ಶಿಗಳು ಹುಸೇನ್ ಬಾಷಾ ಮಹಬೂಬ್ ಸಾಬ್,ಶರಣಪ್ಪ ಬೆರಿಗಿ, ಮಸ್ಕಿ ತಾಲೂಕ ಅಧ್ಯಕ್ಷ, ಬಸವರಾಜ ಅಮೀನಗಡ,ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವರದಿ ಜೇಟ್ಟೆಪ್ಪ ಎಸ್ ಪೂಜಾರಿ