ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ- ಡಾ. ಸಂಗಮೇಶ ಮಾಲಿ ಪಾಟೀಲ
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ- ಡಾ. ಸಂಗಮೇಶ ಮಾಲಿ ಪಾಟೀಲ
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ರೈತರ ಆಶೀರ್ವಾದದಿಂದ 2491 ಮತಗಳ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ ಡಾ. ಸಂಗಮೇಶ ಮಾಲಿ ಪಾಟೀಲ ಅವರನ್ನು ಇಂದು ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ. ಮಾಲಿ ಪಾಟೀಲ ಮಾತನಾಡುತ್ತಾ ಹೇಳಿದರು:
“ಈ ಗೆಲುವು ನನ್ನದೇ ಅಲ್ಲ, ಇದು ನಾರಂಜಾ ಪ್ರದೇಶದ ರೈತರ ವಿಶ್ವಾಸದ ಗೆಲುವು. ರೈತರ ಹಿತಾಸಕ್ತಿಯೇ ನನ್ನ ಧ್ಯೇಯವಾಗಿದ್ದು, ಕಾರ್ಖಾನೆಯ ಪ್ರಗತಿ, ಪಾರದರ್ಶಕ ಆಡಳಿತ ಮತ್ತು ನವೀನ ಯೋಜನೆಗಳ ಮೂಲಕ ರೈತರ ಆರ್ಥಿಕ ಸ್ಥಿತಿ ಬಲಪಡಿಸಲು ನಾನು ಶ್ರಮಿಸುವೆ. ರೈತ ಬಂಧುಗಳ ವಿಶ್ವಾಸವನ್ನು ಉಳಿಸಲು ನಿಷ್ಠೆಯಿಂದ ಕೆಲಸ ಮಾಡುವುದು ನನ್ನ ಮೊದಲ ಆದ್ಯತೆಯಾಗಲಿದೆ,” ಎಂದು ಹೇಳಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಸಂತೋಷ ಪಡಸಲೆ, ಆಕಾಶ ಶಿಂಧೆ, ಅಶೋಕ ಸಂತಪೂರೆ, ಸಾಗರ್ ಪಡಸಲೆ, ಗೋರಕ ಬಿರಾದರ್, ಧೊಂಡಿಬಾ ಬೀರಾದರ್, ಶಿವರಾಜ ಮೇತ್ರೆ ಮತ್ತು ಗಾಂದೆಪ್ಪ ನಾಗೂರೆ ಉಪಸ್ಥಿತರಿದ್ದರು.
ವರದಿ: ಮಛಂದ್ರನಾಥ ಕಾಂಬಳೆ ಬೀದರ್
