ಕಲಬುರಗಿ ಹಾಗೂ ಯಾದಗಿರಿ ನಗರಗಳಲ್ಲಿ ಕೆಲವು ಭಾಗಗಳನ್ನು ಸ್ಲಂಗಳೆಂದು ಘೋಷಣೆ ಮಾಡಿ

ಕಲಬುರಗಿ ಹಾಗೂ ಯಾದಗಿರಿ ನಗರಗಳಲ್ಲಿ ಕೆಲವು ಭಾಗಗಳನ್ನು ಸ್ಲಂಗಳೆಂದು ಘೋಷಣೆ ಮಾಡಿ
ಕಲಬುರಗಿಯಲ್ಲಿ ಅಘೋಷಿತ ಸ್ಲಂಗಳಾದ ರಾಮ ನಗರ ಭಾಗ-2, ಸಂಜು ನಗರ ಭಾಗ-2 ಮತ್ತು ಯಾದಗಿರಿ ಅಘೋಷಿತ ಸ್ಲಂಗಳಾದ ಮೌನೇಶ್ವರ ನಗರ, ಮದನಪೂರ ಭಾಗ-2, ತಪ್ಪಡಗೇರಾ, ಗಂಗಾನಗರ ಸ್ಲಂಗಳನ್ನು ಸ್ಲಂ ಎಂದು ಘೋಷಣೆ ಮಾಡದೆ ಏಳಂಬ ನೀತಿ ಅನುಸರಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರುಗಳಾದ ಶ್ರೀಧರ ಸಾರವಾಡ ಮತ್ತು ದೇವಿಂದ್ರ ಇವರನ್ನು ಅಮಾನತ್ತುಗೊಳಿಸಿ ಶೀಘ್ರದಲ್ಲೇ ಸ್ಲಂ ಘೋಷಣೆ ಮಾಡುವಂತೆ ದಂತೆ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎದುರು ಎರಡನೇಯ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ ನಡೆಸಿದರು. ಗೌರಮ್ಮ ಮಾಕಾ, ರೇಣುಕಾ ಸರಡಗಿ, ಶರಣು ಕಣ್ಣಿ, ಹಣಮಂತ ಶಹಾಪೂರಕರ್ ಸೇರಿದಂತೆ ಇತರರು ಇದ್ದರು.