ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಯಶಸ್ವಿ

ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಯಶಸ್ವಿ
ಕಲಬುರಗಿ: ನಮ್ಮ ಕಲಬುರಗಿಯನ್ನು ಹಸಿರಾಗಿಸುವ ಚಿಕ್ಕ ಪ್ರಯತ್ನದೊಂದಿಗೆ ನಾಲ್ಕುಚಕ್ರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ "ಹಸಿರು ಕ್ರಾಂತಿ" ಧ್ಯೇಯದಡಿಯಲ್ಲಿ ಜಿಲ್ಲೆಯ ಹರಸೂರ್ ಗ್ರಾಮದ ಕರಿಬಸವೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ೩೦ ಸಸಿಗಳನ್ನು ನೆಡಸಲಾಯಿತು. ಹಾಗೆಯೇ ಅಲ್ಲಿರುವ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ, ಪ್ಲಾಸ್ಟಿಕ್ ಬ್ಯಾನ್, ಹಸಿಕಸಿ ಒಣಕಸ ಕುರಿತು ಜಾಗೃತಿ ಮೂಡಿಸಿ ಸಸಿಗಳ ಪಾಲನೆ ಪೋಷಣೆಯ ಜವಬ್ದಾರಿ ನೀಡಲಾಯಿತು.ಎಂದು ಮಾಲಾ ಕಣ್ಣಿ ತಿಳಿಸಿದರು.
ಆರೋಗ್ಯವಂತ ಹಾಗೂ ಸ್ವಾಸ್ಥ್ಯ ಸಮಾಜಕ್ಕಾಗಿ ನಾವೆಲ್ಲರೂ ಹೆಚ್ಚೆಚ್ಚು ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡೊಣ. ಈ ಒಂದು ಅಭಿಯಾನಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಟ್ರಸ್ಟ್ನ್ ಸದಸ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾಲ್ಕು ಚಕ್ರ ತಂಡದ ಮುಖ್ಯಸ್ತೇ ಮಾಲಾ ಕಣ್ಣಿ, ಯುವ ಮುಖಂಡರಾದ ಆನಂದ ಕಣಸೂರ, ಕರಬಸಪ್ಪ ಉಜ್ಜಾ, ಮಂಗಲಾ ಕಂತಿ, ಲಿಂಗರಾಜ ಡಾಗೆ, ಅನಿಲ್ ಬಿದನೂರ್, ಸುಭಾಶ್ ಮೇತ್ರೆ ಸೇರಿದಂತೆ ಶಾಲೆಯ ಮುಖ್ಯಪಾಧ್ಯರು, ಸಿಬ್ಬಂದಿಗಳು ಇದ್ದರು.