ಸ್ವಾತಂತ್ರ್ಯ ಹೋರಾಟಗಾರ್ತಿ ತಿಪ್ಪಮ್ಮ (ನೀಲಮ್ಮ) ಶರಣಪ್ಪ ಬನ್ನೇರ ನಿಧನ

ಸ್ವಾತಂತ್ರ್ಯ ಹೋರಾಟಗಾರ್ತಿ ತಿಪ್ಪಮ್ಮ (ನೀಲಮ್ಮ) ಶರಣಪ್ಪ ಬನ್ನೇರ ನಿಧನ

ನಿಧನ ವಾರ್ತೆ:- ಸ್ವಾತಂತ್ರ್ಯ ಹೋರಾಟಗಾರ್ತಿ ತಿಪ್ಪಮ್ಮ (ನೀಲಮ್ಮ) ಶರಣಪ್ಪ ಬನ್ನೇರ ನಿಧನ

ಕಲಬುರಗಿಯ ಸಂತೋಷ ಕಾಲೋನಿ ನಿವಾಸಿ ಸ್ವಾತಂತ್ರ್ಯ ಹೋರಾಟಗಾರ್ತಿ ಶ್ರೀಮತಿ ತಿಪ್ಪಮ್ಮ (ನೀಲಮ್ಮ) ಶರಣಪ್ಪ ಬನ್ನೇರ (90 ) ವರ್ಷ ನಿನ್ನೆ ಸಾಯಂಕಾಲ ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದರು.

 ಇವರಿಗೆ ಚಿತ್ತಾಪುರ ತಾಲೂಕಿನ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರಚಂದ್ರ ವಿದ್ಯಾಸಾಗರ, ಸಹಕಾರ ಇಲಾಖೆಯ ರವೀಂದ್ರ ಬನ್ನೇರ ಸೇರಿದಂತೆ 5 ಜನ ಪುತ್ರರು ಒಬ್ಬ ಪುತ್ರಿ ಮತ್ತು ಸೊಸೆಯಂದಿರು, ಮೊಮ್ಮಗಳು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮೂಲತಃ ಗುರುಮಠಕಲ್ ನವರಾದ ಇವರು ಸ್ವಾತಂತ್ರ್ಯ ಸೇನಾನಿ ಕೋಳೂರು ಮಲ್ಲಪ್ಪ ನವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು.

ಇವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಚಿತ್ತಾರಿ ಅಡ್ಡ ಸ್ಮಶಾನ ಭೂಮಿಯಲ್ಲಿ ನೇರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

 ಅಂತ್ಯಕ್ರಿಯೆಗೂ ಮುಂಚೆ ಭೂಮಾಪನ ಇಲಾಖೆಯ ಅಧಿಕಾರಿಗಳು,ಸಹಕಾರಿ, ಬ್ಯಾಂಕ್, ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ರಾಜಕೀಯ ಧುರೀಣರು, ಕನ್ನಡಪರ ಸಂಘಟಕರು ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು.