'ರಾಜ್ಯೋತ್ಸವ ರತ್ನ' ಪ್ರಶಸ್ತಿಗೆ ಜನವಾಡಕರ, ಕುಚಬಾಳ, ಅಶ್ವಜೀತ ದಂಡಿನ ಸೇರಿದಂತೆ ೨೨ ಜನರ ಆಯ್ಕೆ.

'ರಾಜ್ಯೋತ್ಸವ ರತ್ನ' ಪ್ರಶಸ್ತಿಗೆ ಜನವಾಡಕರ, ಕುಚಬಾಳ, ಅಶ್ವಜೀತ ದಂಡಿನ ಸೇರಿದಂತೆ ೨೨ ಜನರ ಆಯ್ಕೆ.
ಪ್ರಗತಿಪರ ಸಾಹಿತಿಗಳಾದ ಎಂ. ಎಸ್. ಜನವಾಡಕರ, ಎಸ್. ಬಿ. ಕುಚಬಾಳ, ಅಶ್ವಜೀತ ದಂಡಿನ ಸೇರಿದಂತೆ ಒಟ್ಟು ೨೨ ಜನರನ್ನು ‘ರಾಜ್ಯೋತ್ಸವ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವ ಕನ್ನಡಿಗರ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ. ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು ಪ್ರತಿ ವರ್ಷದಂತೆ ಈ ವರ್ಷವು ಕೂಡ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ವಿಶ್ವ ಕನ್ನಡಿಗರ ಸಂಸ್ಥೆಯಿಂದ ಕೊಡಮಾಡುವ ‘ಕರ್ನಾಟಕ ರಾಜ್ಯೋತ್ಸವ ರತ್ನ’ ಪ್ರಶಸ್ತಿ ಪ್ರಕಟಿಸಲಾಗಿದೆ. ನವೆಂಬರ್ ಕೊನೆಯ ವಾರದಲ್ಲಿ ಅತ್ಯಂತ ವೈಭವದಿಂದ ಬೀದರ ನಗರದಲ್ಲಿ ನಡೆಯಲಿರುವ 70ನೇ ಕರ್ನಾಟಕ ರಾಜ್ಯೋತ್ಸವ, ಗಡಿ ಭಾಗದ ಕನ್ನಡಿಗರ ಸಾಹಿತ್ಯ ಸಾಂಸ್ಕೃತಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನಗೊಳ್ಳಲಿದೆ. ಇದು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಸಾಧಕರನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ ಎಂದು ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ. ಸುಬ್ಬಣ್ಣ ಕರಕನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.