ಕಿತ್ತೂರು ರಾಣಿ ಚೆನ್ನಮ್ಮಳ ಆದರ್ಶ ನಮಗೆಲ್ಲ ಸ್ಪೂರ್ತಿ - ಭಾಗೀರಥಿ ಮುದ್ದಾ

ಕಿತ್ತೂರು ರಾಣಿ ಚೆನ್ನಮ್ಮಳ ಆದರ್ಶ ನಮಗೆಲ್ಲ ಸ್ಪೂರ್ತಿ - ಭಾಗೀರಥಿ ಮುದ್ದಾ

ಕಿತ್ತೂರು ರಾಣಿ ಚೆನ್ನಮ್ಮಳ ಆದರ್ಶ ನಮಗೆಲ್ಲ ಸ್ಪೂರ್ತಿ - ಭಾಗೀರಥಿ ಮುದ್ದಾ

ಶಹಾಪುರ : ಪ್ರಾಣವನ್ನೇ ಪಣಕ್ಕಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟ ಕಿತ್ತೂರು ರಾಣಿ ಚೆನ್ನಮ್ಮಳ ತತ್ವದರ್ಶಗಳು ನಮಗೆಲ್ಲರಿಗೂ ಸ್ಪೂರ್ತಿಯಾಗಿವೆ ಎಂದು ಅಂಗನವಾಡಿ ಶಿಕ್ಷಕಿ ಭಾಗಿರಥಿ ಮುದ್ದಾ ಹೇಳಿದರು.

ತಾಲೂಕಿನ ಪಿಂಜಾರ ದೊಡ್ಡಿ ಅಂಗನವಾಡಿ ಕೇಂದ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು,ರಾಣಿ ಚೆನ್ನಮ್ಮಳ ಶೌರ್ಯ ಸಾಹಸದ ಕುರಿತು ಮಕ್ಕಳಿಗೆ ಮನ ಮುಟ್ಟುವ ಹಾಗೆ ತಿಳಿಸಿದರು.

ಕಿತ್ತೂರು ಸಂಸ್ಥಾನದ ಸಾಂಸ್ಕೃತಿಕ ಪರಂಪರೆಯ ಇತಿಹಾಸ ಅರಿತುಕೊಳ್ಳುವುದರ ಜೊತೆಗೆ ಕಿತ್ತೂರು ರಾಣಿ ಚೆನ್ನಮ್ಮಳ ಆದರ್ಶ ತತ್ವಗಳು ಪ್ರತಿಯೊಬ್ಬ ಮಕ್ಕಳು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿ ಕಾಜಾಬಿ ನಡಿಗೆರ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳು ಹಾಜರಿದ್ದರು.