ರಂಭಾಪುರಿ ಜಗದ್ಗುರುಗಳ ತೀರ್ಮಾನ ಕೋಟಿ ಕೋಟಿ ಭಕ್ತರಿಗೆ ಹರ್ಷ ತಂದಿದೆ - ಹಾರಕೂಡ ಶ್ರೀ

ರಂಭಾಪುರಿ ಜಗದ್ಗುರುಗಳ ತೀರ್ಮಾನ ಕೋಟಿ ಕೋಟಿ ಭಕ್ತರಿಗೆ ಹರ್ಷ ತಂದಿದೆ - ಹಾರಕೂಡ ಶ್ರೀ

ರಂಭಾಪುರಿ ಜಗದ್ಗುರುಗಳ ತೀರ್ಮಾನ ಕೋಟಿ ಕೋಟಿ ಭಕ್ತರಿಗೆ ಹರ್ಷ ತಂದಿದೆ - ಹಾರಕೂಡ ಶ್ರೀ

 ಬಸವಣ್ಣನ ಕಾಯಕದ ಪುಣ್ಯಭೂಮಿಯಲ್ಲಿ ಶ್ರೀಗಳ ತೀರ್ಮಾನ ಕೋಟಿ ಕೋಟಿ ಭಕ್ತರಿಗೆ ಹರ್ಷ ತಂದಿದೆ ಮತ್ತು ಸಮಾಜವನ್ನು ಬೇಸೆಯುವ ಕಾರ್ಯ ಮಾಡಿದೆ, ನಿಜವಾಗಿಯು ರಂಭಾಪುರಿ ಶ್ರೀಗಳು ಪೀಠದ ಘೋಷವಾಕ್ಯದಂತೆ ಮಾನವ ಧರ್ಮಕ್ಕೆ ಜಯವಾಗಿಸಿದ್ದಾರೆ ಎಂದು ದಸರಾ ದರ್ಬಾರ್ ಕಾರ್ಯಕ್ರಮದ ಗೌರವ ಅಧ್ಯಕ್ಷರಾದ ಹಾರಕೂಡ ಶ್ರೀಮಠದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.

 ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ದಸರಾ ದರ್ಬಾರ್ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಡಾ. ಚನ್ನವೀರ ಶಿವಾಚಾರ್ಯರ ಮತ್ತು ಕಾರ್ಯಧ್ಯಕ್ಷರಾದ ಶರಣು ಸಲಗರ, ಶಾಸಕರು ಬಸವಕಲ್ಯಾಣ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಶ್ರೀಗಳು ಈ ಮೊದಲಿಗೆ ಭಕ್ತರ ಆಶಯದಂತೆ ದಸರಾ ದರ್ಬಾರ್ ಆಚರಿಸಲು ಒಪ್ಪಿಗೆ ಕೊಟ್ಟ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಅನಂತ ನಮಸ್ಕಾರಗಳು.

 ಮೊದಲೇ ದಸರಾ ದರ್ಬಾರ್ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿತ್ತು, ಆದರೆ ಪಲ್ಲಕ್ಕಿ ಮೆರವಣಿಗೆ ಬಗ್ಗೆ ಸ್ವಲ್ಪ ಗೊಂದಲ ಮೂಡಿತ್ತು, ಈಗ ಅದು ತಿಳಿ ಆಗಿದ್ದು, ಈ ಸಭೆಯಲ್ಲಿ ದಸರಾ ದರ್ಬಾರ್ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.

 ಭಕ್ತರ ಆಶಯದಂತೆ ವಿಜಯದಶಮಿಯ ಕೊನೆಯ ದಿನದಂದು ಪಲ್ಲಕ್ಕಿಯನ್ನು ಭಕ್ತರ ಹೆಗಲ ಮೇಲೆ ಹೆರುವ ಬದಲಿಗೆ ಅಲಂಕರಿಸಿದ ವಾಹನದ ಮೇಲೆ ಅಡ್ಡ ಪಲ್ಲಕ್ಕಿ ಮೆರವಣಿಗೆ ಮಾಡಲು ತೀರ್ಮಾನಿಸಲಾಯಿತು.

 ವೀರಶೈವ ಲಿಂಗಾಯತ ಪರಂಪರೆಯಲ್ಲಿ ಭಕ್ತನ ಭಾವನೆ ಮುಖ್ಯ, ರಂಭಾಪುರಿ ಶ್ರೀಗಳು ಭಕ್ತರ ಮನಸ್ಸಿನ ಇಂಗಿತಕ್ಕೆ ಅನುಗುಣವಾಗಿ ತೀರ್ಮಾನ ತೆಗೆದುಕೊಂಡಿದ್ದು ಅವರ ಔದಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

 ಸಭೆಯಲ್ಲಿ ಸುರೇಶ ಸ್ವಾಮಿ, ದಯಾನಂದ ಶೀಲವಂತ, ಸುನೀಲ ಪಾಟೀಲ, ರಾಜಕುಮಾರ ಸಿರಗಾಪುರ, ಮೇಘರಾಜ ನಾಗರಾಳೆ, ಮಲ್ಲಿನಾಥ ಹಿರೇಮಠ ಹಾರಕೂಡ, ವೀರಣ್ಣ ಶೀಲವಂತ, ಸೂರ್ಯಕಾಂತ ಶೀಲವಂತ, ರಮೇಶ ರಾಜೋಳೆ, ರುದ್ರೇಶ್ವರ ಸ್ವಾಮಿ ಗೋರಟಾ, ಸೂರ್ಯಕಾಂತ ಮಠ, ಚಂದ್ರಶೇಖರ ಪಾಟೀಲ, ಸದಾನಂದ ಪಾಟೀಲ, ಸಿದ್ದು ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.