ನುಸ್ರತ್ ಮೊಹೀದ್ದೀನ್ ಪಟೇಲ್ ಅವರಿಗೆ ಪಿಹೆಚ್‌ಡಿ

ನುಸ್ರತ್ ಮೊಹೀದ್ದೀನ್ ಪಟೇಲ್ ಅವರಿಗೆ ಪಿಹೆಚ್‌ಡಿ

ನುಸ್ರತ್ ಮೊಹೀದ್ದೀನ್ ಪಟೇಲ್ ಅವರಿಗೆ ಪಿಹೆಚ್‌ಡಿ

ಕಲಬುರಗಿ : ಆಂಧ್ರಪ್ರದೇಶದ ಡ್ರಾವಿಡಿಯನ್ ಯೂನಿವರ್ಸಿಟಿಯ ಕಂಟ್ರೋಲರ್ ಆಫ್ ಎಕ್ಝಾಮಿನೇಷನ್ ಪ್ರಕಟಿಸಿದ, ಗವರ್ನಮೆಂಟ್ ಜೂನಿಯರ್ ಕಾಲೇಜು ಚಂಚೋಳಿಯ ವೈಸ್ ಪ್ರಿನ್ಸಿಪಾಲ್ ಹಾಗೂ ಹುಸೇನ್ ಗಾರ್ಡನ್ ಗಲಬರ್ಗಾ ನಿವಾಸಿ ನುಸ್ರತ್ ಮೊಹೀದ್ದೀನ್ ಪಟೇಲ್ ಅವರಿಗೆ ಸಂಶೋಧನಾ ಪ್ರಬಂಧಕ್ಕಾಗಿ ಬೋರ್ಡ್ ಆಫ್ ಎಕ್ಝಾಮಿನರ್ಸ್ ಡಾಕ್ಟರೇಟ್ ಅರ್ಥಾತ್ ಡಾಕ್ಟರ್ ಆಫ್ ಫಿಲಾಸಫಿ ಇನ್ ಎಡ್ಯುಕೇಶನ್ (ಪಿಹೆಚ್‌ಡಿ) ನೀಡಲು ಅರ್ಹರೆಂದು ನಿರ್ಧರಿಸಿದೆ. 

ಕರ್ನಾಟಕದಲ್ಲಿ ಸ್ವಸಹಾಯ ಗುಂಪುಗಳ ಪ್ರಭಾವದಿಂದ ವಯಸ್ಕ ಅಕ್ಷರಾಶಕ್ತಿಯ ಮೇಲೆ ಸಂಭವನೀಯ ಪರಿಣಾಮಗಳ ಅಧ್ಯಯನ: ಕಲಬುರ್ಗಿ ಜಿಲ್ಲೆಯ ಒಂದು ಅಧ್ಯಯನ",

ಈ ಪ್ರಬಂಧವನ್ನು ಅವರು ಡಾ. ರಾಬಿಯಾ ಖಾನಂ, ಪ್ರಿನ್ಸಿಪಾಲ್, ಹಮೀದ್ ಪ್ಯಾರೆ ಕಾಲೇಜ್ ಆಫ್ ಎಜುಕೇಶನ್ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿದ್ದಾರೆ.

ನುಸ್ರತ್ ಮೊಹೀದ್ದೀನ್ ಪಟೇಲ್ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದ ಹಿನ್ನೆಲೆಯಲ್ಲಿ ಅವರ ಸಂಬAಧಿಕರು, ಸ್ನೇಹಿತರು, ವಿಶೇಷವಾಗಿ ಕಾರಿ ಮೊಹಮ್ಮದ್ ಅಬ್ದುಲ್ ಜಲೀಲ್, ಮೊಹಮ್ಮದ್ ಅಲಿ ಅಡ್ವೊಕೇಟ್, ಮೊಹಮ್ಮದ್ ವಸೀಮ್ ಪಟೇಲ್, ಮೊಹಮ್ಮದ್ ಸಾಲಾರ್ ಮಸೂದ್, ಜಮೀಲ್ ಇಮ್ರಾನ್, ಮಕ್ಸೂದ್ ಅಲಿ, ಮತ್ತು ವಾಜಿದ್ ಅಖ್ತರ್ ಸಿದ್ದಿಕಿ ಅವರು ಶುಭಾಶಯಗಳನ್ನು ಕೋರಿದ್ದಾರೆ

.