ಶ್ರೀ ಅಂಬಿಗರ ಚೌಡಯ್ಯ ಗೆಳೆಯರ ಬಳಗ ಗಂಗಾನಗರ ಕಲಬುರಗಿ ವತಿಯಿಂದ ಬೃಹತ್ ಪ್ರತಿಭಟನೆ

ಶ್ರೀ ಅಂಬಿಗರ ಚೌಡಯ್ಯ ಗೆಳೆಯರ ಬಳಗ ಗಂಗಾನಗರ ಕಲಬುರಗಿ ವತಿಯಿಂದ ಬೃಹತ್ ಪ್ರತಿಭಟನೆ
ಕಲಬುರಗಿ: ಜಿಲ್ಲೆಯ ಶಾಹಾಬಾದ ತಾಲ್ಲೂಕಿನ ಮುತ್ತಗಿ. ಗ್ರಾಮದಲ್ಲಿ ದಿನಾಂಕ 08-10-2025 ರಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯ ಮುಖಕ್ಕೆ ಸಗಣಿ ಎರಚುವುದನ್ನು ಅಲ್ಲದೆ ಮೂರ್ತಿಯನ್ನು ಉದ್ದೇಶ ಪೂರ್ವಕವಾಗಿ ಭಗ್ನಗೊಳಸಿರುವದು. ಖಂಡಿಸಿ ಶ್ರೀ ಅಂಬಿಗರ ಚೌಡಯ್ಯ ಗೆಳೆಯರ ಬಳಗ ಗಂಗಾನಗರ ಕಲಬುರಗಿ ವತಿಯಿಂದ ಗಂಗಾನಗರ ದಿಂದ ಜಗತ್ ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಿ ಡಿಸಿ ಅವರಿಗೆ ಮನವಿ ಸಲ್ಲಿಸಿದರು.
ಹನ್ನೆರಡನೆಯ ಶತಮಾನದಲ್ಲಿ ಅಲ್ಲಮಪ್ರಭು ಅಣ್ಣ ಬಸವಣ್ಣನವರ ಹಾಗು (63)ರು ಜೊತೆಯಲ್ಲಿ ಹೆಗಲಿಗೆ ಹೆಗಲ ಕೂಟ್ಟು ಹಗಲಿರುಳು ಎನ್ನುದೆ ಸೇವೆಗೈದು ಶರಣರೂಳಗೆ ನಿಜ ಶರಣವೆಂದು ಬಸವಕಲ್ಯಾಣದ ಸಮಗ್ರ ಶರಣರ ಸಮಕ್ಷಮದಲಿ ಬಿರುದು ಪಡೆದು ಡಂಬಚಾರಿಗಳ ವಿರುದ್ಧ ಕಟ್ಟೂರವಾದ ಇದ್ದಕೆ ಇದ್ದಂತೆ ಎದೆಗೆ ಒದ್ದಂತೆ ವಚನಗಳು ಬರೆಯುವ ಮೂಲಕ ಜಗತ್ತಿಗೆ ಸತ್ಯ ಮತ್ತು ಮುಂದಿನ ಭವಿಷ್ಯ ತಿಳಿಸಿರುವ ಅಲ್ಲದೆ ಇಡಿ ಭಾರತದಾದ್ಯಂತ ಕೋಲಿ ಕಬ್ಬಲಿಗ ಜನಾಂಗದವರು ಪೂಜಿಸುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರಗೆ ಘನಘೋರ ಮಾಡಿದಂತ ಅವಮಾನವನ್ನು ನಮ್ಮ ಸಮಾಜಕ್ಕೆ ಬಾರಿ ಆಘಾತವನ್ನುಂಟು ಮಾಡಿದೆ.
ಆದಕಾರಣ ಈ ಹೀನಕೃತವೆಸಗಿದ ಸಮಾಜ ದ್ರೋಹಿಗಳನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮತ್ತು ಮುತ್ತಗಾ ಗ್ರಾಮದ ಅದೆ ಸ್ಥಳದಲ್ಲಿ ಭವ್ಯವಾದ ಮೂರ್ತಿಯನ್ನು ಸ್ಥಾಪನೆಮಾಡಿ ಸರ್ಕಾರದ ವತಿಯಿಂದ ರಕ್ಷಣೆ ಒದಗಿಸಬೇಕು. ಒಂದು ವೇಳೆ ಈ ನಮ್ಮ ಬೇಡಿಕೆಯನ್ನು ಕೂಡಲೇ ಈಡೇರಿಸದೆ ಇದ್ದಲ್ಲಿ ಕಲ್ಬುರ್ಗಿಯ ಜಿಲ್ಲೆಯಾದ್ಯಂತ ಬಂದ ಮಾಡುವ ಮೂಲಕ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವದು. ಈ ಹೋರಾಟದ ಸಮಯದಲ್ಲಿ ಏನೆ ಅನಾಹುತ ಸಂಭವಿಸಿದ್ದರೆ ಇದಕ್ಕೆ ಸರ್ಕಾರವೆ ಹೊಣೆಯಾಗುತ್ತದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಶ್ರೀ ಅಂಬಿಗರ ಚೌಡಯ್ಯ ಗೆಳೆಯರ ಬಳಗ ಗಂಗಾನಗರ ಕಲಬುರಗಿಯ ಅಧ್ಯಕ್ಷ ರಮೇಶ ಜಮಾದಾರ, ಕಾರ್ಯಾಧ್ಯಕ್ಷ ರಾಕೇಶ್ ಜಮಾದಾರ್ ಸೇರಿದಂತೆ ಸಮಾಜದ ಮುಖಂಡರು ಯುವಕರು ಇದ್ದರು
.