ಸಮಾಜ ಸೇವಕ ಶ್ರೀಕಾಂತ್ ರೆಡ್ಡಿ ಅವರ ನೇತೃತ್ವದಲ್ಲಿ ಎಂ ಎಸ್ ಪಾಟೀಲ್ ನರಿಬೋಳ ಅವರ ಜನ್ಮ ದಿನಾಚರಣೆ

ಸಮಾಜ ಸೇವಕ ಶ್ರೀಕಾಂತ್ ರೆಡ್ಡಿ ಅವರ ನೇತೃತ್ವದಲ್ಲಿ ಎಂ ಎಸ್ ಪಾಟೀಲ್ ನರಿಬೋಳ ಅವರ ಜನ್ಮ ದಿನಾಚರಣೆ
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ರೈತ ಮುಖಂಡರಾದ ಎಂ ಎಸ್ ಪಾಟೀಲ್ ನರಿಬೋಳ ಅವರ ಜನ್ಮ ದಿನಾಚರಣೆಯನ್ನು ಸಮಾಜ ಸೇವಕರಾದ ಶ್ರೀಕಾಂತ್ ರೆಡ್ಡಿ ಅವರ ನೇತೃತ್ವ ಹಾಗೂ ಹಿಂದೂ ಪರ ಸಂಘಟನೆಗಳು ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಸೈಯದ್ ಚಿಂಚೋಳಿ ಕ್ರಾಸ್ ಬಳಿ ಇರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ವೃದ್ಧರ ಸಮ್ಮುಖದಲ್ಲಿ ಕೆಕ್ ಕತ್ತರಿ ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಮಾಡುವುದರ ಮೂಲಕ ಎಂ ಎಸ್ ಪಾಟೀಲ್ ನರಿಬೋಳ್ ಅವರ ಜನ್ಮ ದಿನಾಚರಣೆ ಅತಿ ಸರಳತೆಯಿಂದ ಆಚರಣೆ ಮಾಡಲಾಯಿತು.
ಬಳಿಕ ಮಾತನಾಡಿದ ಸಂಘಟನೆಯ ಮುಖಂಡರು ಎಂ ಎಸ್ ಪಾಟೀಲ್ ನರಿಬೋಳ್ ಅವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು ಎಂ ಎಸ್ ಪಾಟೀಲ್ ನರಿಬೋಳ್ ಅವರು ಹಾಗಾಗಿ ಆ ಭಗವಂತನ ಆಶಿರ್ವಾದ ಸದಾ ಅವರ ಮೇಲೆ ಹೀಗೆ ಇರಲಿ ಅವರಿಗೆ ಆಯುಷ್ ಆರೋಗ್ಯ ಸಮೃದ್ಧಿ ಕೊಟ್ಟು ಕಾಪಾಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮತ್ತೋಮ್ಮೆ ಎಂ ಎಸ್ ಪಾಟೀಲ್ ನರಿಬೋಳ್ ಅವರಿಗೆ ಜನ್ಮ ದಿನಾಚರಣೆಯ ಶುಭಾಶಯಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ, ರೈತ ಮುಖಂಡರಾದ ನಾಗೇಂದ್ರ ತಾಂಬೆ, ವೀರ ಶಿವಾಜಿ ಸೇನೆಯ ಜಿಲ್ಲಾಧ್ಯಕ್ಷ ಶ್ರೀಕಾಂತ್ ಜಾದವ್, ರಾಮ ಸೇನೆ ವಿಭಾಗೀಯ ಅಧ್ಯಕ್ಷ ಗುಂಡು ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.