ಚಿಂಚೋಳಿ: 185ನೇ ವಿಶ್ವಛಾಯಾಗ್ರಹಣ ದಿನಾಚರಣೆ ಪ್ರಯುಕ್ತ 36 ಜನರಿಂದ ರಕ್ತದಾನ
ಚಿಂಚೋಳಿ: 185ನೇ ವಿಶ್ವಛಾಯಾಗ್ರಹಣ ದಿನಾಚರಣೆ ಪ್ರಯುಕ್ತ 36 ಜನರಿಂದ ರಕ್ತದಾನ
ಚಿಂಚೋಳಿ: 185ನೇ ವಿಶ್ವಛಾಯಾಗ್ರಹಣ ದಿನಾಚರಣೆ ಪ್ರಯುಕ್ತ 36 ಜನ ರಕ್ತದಾನದ ಮೂಲಕ ಸಮಾಜ ಮುಖಿ ಕಾರ್ಯಕ್ರಮ ಮಂಗಳವಾರ ಇಲ್ಲಿನ ಚಂದಾಪುರದಲ್ಲಿ ನಡೆಯಿತು.
ಚಿಂಚೋಳಿ ತಾಲೂಕಾ ಛಾಯಾಚಿತ್ರ ಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿಂಚೋಳಿ ಘಟಕ ಮತ್ತು ತಾಲ್ಲೂಕು ಆಸ್ಪತ್ರೆ ಜಂಟಿಯಾಗಿ ಕಾರ್ಯಕ್ರಮ ನಡೆಸುವ ಮೂಲಕ ಸಮಾಜಕ್ಕೆ ಸಂದೇಶ ಕೊಡುವ ಕಾರ್ಯಕ್ರಮ ನಡೆಸಿದರು. ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ) ರಕ್ತ ನಿಧಿಗೆ 36 ಜನ ರಕ್ತದಾನ ಮಾಡಿದರು. ಶಾಸಕ ಡಾ. ಅವಿನಾಶ ಜಾಧವ, ತಹಶೀಲ್ದಾರ ವೆಂಕಟೇಶ ದುಗ್ಗನ್,ತಾಲ್ಲೂಕು ಆಸ್ಪತ್ರೆಯ ಸಿಎಂಒ ಡಾ. ಸಂತೋಷ ಪಾಟೀಲ, ವೀರಶೈವ ಲಿಂಗಾಯತ ಮಹಾಸಭೆ ತಾಲ್ಲೂಕು ಅಧ್ಯಕ್ಷ ಶರಣು ಪಾಟೀಲ, ಮುಖಂಡ ರಾಹುಲ್ ಯಾಕಾಪುರ, ಕರ್ನಾಟಕ ಫೋಟೊಗ್ರಾಫರ್ಸ ಅಸೋಸಿಯೇಷನ ಪ್ರಧಾನ ಕಾರ್ಯದರ್ಶಿ ಎ.ಎಂ. ಮುರುಳಿ, ನಿರ್ದೇಶಕ ಮಹಾದೇವ,ಜಿಲ್ಲಾ ಅಧ್ಯಕ್ಷ ಬಸವರಾಜ ತೋಟದ,ಬೀದರ ಅಧ್ಯಕ್ಷ ಪವನಸಿಂಗ್ ಠಾಕೂರ, ಚಂದನಕಲರ ಲ್ಯಾಬನ ಎಂ.ಎನ್ ಎಸ್ ಶಾಸ್ತ್ರೀ, ಉಮೇಶ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಗನ್ನಾಥ ಡಿ. ಶೇರಿಕಾರ, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಆಳಂದನ ಪ್ರಕಾಶ ಜಂಗಲೆ,ಕಾಳಗಿಯ ಗಣಪತಿ, ಶಹಬಾದನ ಮಲ್ಲಿಕಾರ್ಜುನ ತುಪ್ಪದಮಠ, ಚಿತ್ತಾಪುರದ ವಿಜಯಕುಮಾರ ರಾಠೋಡ,ಜೇವರ್ಗಿಯ ಸಿದ್ರಾಮಪ್ಪ, ಅಫಜಲಪುರದ ವೀರಣ್ಣ, ಕಮಲಾಪುರದ ರಾಮಕೃಷ್ಣ, ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ,ಹಿರಿಯ ಮುಖಂಡ ಕೆ.ಎಂ.ಬಾರಿ, ಗೋಪಾಲರಾವ ಕಟ್ಟಿಮನಿ ಮತ್ತಿತರರು ಇದ್ದರು. ಸಂಘದ ಅಧ್ಯಕ್ಷ ಸಂಜೀವಕುಮಾರ ಗಾರಂಪಳ್ಳಿ ಅಧ್ಯಕ್ಷತೆವಹಿಸಿದ್ದರು. ಪೋಟೊಗ್ರಾಫಿ ಪರಿಚಯಿಸಿದ ದಿ. ಜಗನ್ನಾಥ ಪಾಟೀಲ ಹಲಕೋಡಾ ಅವರ ಪತ್ನಿ ಶಿವಲೀಲಾ ಪಾಟೀಲ ಹಾಗೂ
ಹಿರಿಯ ಛಾಯಾಚಿತ್ರ ಗ್ರಾಹಕರಾದ ಕುಪೇಂದ್ರ ದಾದಾಪುರ, ರಾಜಶೇಖರ ಬೀರನಹಳ್ಳಿ ಅವರನ್ನು ಸನ್ಮಾನಿಸಲಾಯಿತು.ಶಿವಬಸ್ಸಯ್ಯ ಮಠ ಸ್ವಾಗತಿಸಿದರು. ರಮೇಶ ಭುತಪೂರ ನಿರೂಪಿಸಿದರು. ಬಸವರಡ್ಡಿ ಮಕಾಶಿ ವಂದಿಸಿದರು.ಫೋಟೊಗ್ರಾಫರ್ಸ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅಂಚೆ ಅಪಘಾತ ವಿಮಾ ಸೌಲಭ್ಯ ಮತ್ತು ಛಾಯಾಚಿತ್ರ ಪ್ರದರ್ಶನ ನಡೆಯಿತು.