ಡೊಂಗರದೇವಿಯ ಜಾತ್ರಾ ಮಹೋತ್ಸವದಲ್ಲಿ ಹುಬ್ಬಳ್ಳಿ ಸಿದ್ಧಾರೂಢ ಪುರಾಣ

ಡೊಂಗರದೇವಿಯ ಜಾತ್ರಾ ಮಹೋತ್ಸವದಲ್ಲಿ ಹುಬ್ಬಳ್ಳಿ ಸಿದ್ಧಾರೂಢ ಪುರಾಣ
ಕಮಲಾಪುರ:ತಾಲೂಕಿನ ಡೊಂಗರಗಾವ್ ಗ್ರಾಮದಲ್ಲಿ ಪ್ರತಿ ವರ್ಷದಂತೆ ನಡೆಯುತ್ತಿರುವ ಶ್ರೀ ಡೊಂಗರದೇವಿ ಜಾತ್ರಾ ಮಹೋತ್ಸವದ ಅಂಗವಾಗಿ, ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಪುರಾಣ ನಡೆಯಲಿದೆ.
ಪುರಾಣ ಕಾರ್ಯಕ್ರಮವು ದಿನಾಂಕ 9.10.2025ರಿಂದ ಪ್ರಾರಂಭವಾಗಿ ಪ್ರತಿ ದಿನ ಸಾಯಂಕಾಲ 7.30 ರಿಂದ ರಾತ್ರಿ 9.30ರವರೆಗೆ ನಡೆಯಲಿದೆ ಎಂದು ಗ್ರಾಮದ ಪ್ರಮುಖರಾದ ಶ್ರೀ ಶಂಕ್ರಯ್ಯ ಹಿರೇಮಠ ,ಮಲ್ಲಯ್ಯ ಮಠಪತಿ ಹಾಗೂ ಗ್ರಾಮಸ್ಥರ ಪರವಾಗಿ ಲಿಂಗಾಯತ ಸಮಾಜದ ಯುವ ಮುಖಂಡರಾದ ಮುರುಗೇಶ್ ಕೆ. ಇಟಗಿ ತಿಳಿಸಿದ್ದಾರೆ.
ಪ್ರವಚನ ರತ್ನ ಬಂಡಯ್ಯ ಶಾಸ್ತ್ರಿ ಇವರ ಅಮೃತವಾಣಿಯಿಂದ ಪುರಾಣ ನಡೆಯಲಿದ್ದು, ಗುರುಲಿಂಗಯ್ಯ ಸ್ಥಾವರಮಠ , ಇವರಿಂದ ಸಂಗೀತ, ವೀರಭದ್ರಯ್ಯ ಸ್ಥಾವರಮಠ ಇವರು ತಬಲಸಾತ್ ನೀಡಲಿದ್ದಾರೆ.
ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಚೈತನ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಪುರಾಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿದಿನ ಭಜನೆ, ಆರತಿ, ಧಾರ್ಮಿಕ ಉಪನ್ಯಾಸ, ಪುರಾಣ, ಪ್ರವಚನ ಅನ್ನದಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಧಾರ್ಮಿಕ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ ಬಸವರಾಜ ಪಾಟೀಲ,ರಾಜಕುಮಾರ ಎಸ್. ಕಾರಿಂಗೆ,ಶರಣಬಸಪ್ಪ ಎ. ರಾಂಪುರೆ,ವೀರಶೆಟ್ಟಿ ಆರ್. ಜಾನಕಟ್ಟಿ, ಈರಣ್ಣ ಇಟಗಿ ,ಚಂದ್ರಶೇಖರ್ ಎನ್ ಗೋಳೆದೆ. ರವೀಂದ್ರ ಕೆ.ಪಾಟೀಲ್. ಸಿದ್ಮಾಲಪ್ಪ ಕೆ. ಮುಗುಳಿ.ಹಾಗೂ ಸಕಲ ಸದ್ಭಕ್ತ ಮಂಡಳಿ – ಡೊಂಗರಗಾವ್ ಸದಸ್ಯರು ಶ್ರಮಿಸುತ್ತಿದ್ದಾರೆ.
ಯುವಕರು ಮತ್ತು ಮಹಿಳಾ ಭಕ್ತರು ಸಹ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಭವ್ಯವಾಗಿ ನಡೆಸಲು ಸಿದ್ಧರಾಗಿದ್ದಾರೆ. ಗ್ರಾಮದ ಸರ್ವರ ಸಹಕಾರದಿಂದ ಈ ವರ್ಷದ ಜಾತ್ರಾ ಮಹೋತ್ಸವವು ಭಕ್ತಿ, ಶ್ರದ್ಧೆ ಮತ್ತು ಉತ್ಸಾಹದಿಂದ ನೆರವೇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.