ಡಾ.ಅಂಬೇಡ್ಕರ್ ಪುಸ್ತಕ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಡಾ.ಅಂಬೇಡ್ಕರ್ ಪುಸ್ತಕ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಡಾ.ಅಂಬೇಡ್ಕರ್ ಪುಸ್ತಕ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಕಲಬುರಗಿ: ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಬಿಸಿಲನಾಡು ಪ್ರಕಾಶನ ಸಂಸ್ಥೆ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಪುಸ್ತಕ ಪ್ರಶಸ್ತಿ ಹಾಗೂ ಯುವ ಪುರಸ್ಕಾರಕ್ಕೆ ಕೃತಿಗಳನ್ನು ಆಹ್ವಾನ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಭುಲಿಂಗ ನೀಲೂರೆ ತಿಳಿಸಿದ್ದಾರೆ.

 ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆ ಆಧರಿಸಿ ಬರೆದ ಕೃತಿಗೆ ಡಾ.ಅಂಬೇಡ್ಕರ್ ಪುಸ್ತಕ ಪ್ರಶಸ್ತಿ ಹಾಗೂ ದಲಿತ, ಬಂಡಾಯ ಹಾಗೂ ವೈಚಾರಿಕತೆ ಕುರಿತು ಬರೆದ ಯಾವುದೇ ಪ್ರಕಾರದ ಕೃತಿಗೆ ಡಾ.ಅಂಬೇಡ್ಕರ್ ಯುವ ಪುರಸ್ಕಾರ ನೀಡಿ ಗೌರವಿಸಲು ನಿರ್ಧರಿಸಲಾಗಿದ್ದುಘಿ, ಪ್ರಶಸ್ತಿಯು 5000 ರೂ. ನಗದು ಹಾಗೂ ಪ್ರಶಸ್ತಿ ಲಕ ಒಳಗೊಂಡಿದೆ. ಕೃತಿಗಳನ್ನು ಪ್ರಭುಲಿಂಗ ನೀಲೂರೆ, ಎ್-26, ಮಾಲು ಎನ್‌ಕ್ಲೇವ್, ಇಂಡಸ್ಟ್ರೀಯಲ್ ಏರಿಯಾ, ಡಿಪೋ ನಂ.1 ಎದುರುಗಡೆ, ಜೇವರ್ಗಿ ಕ್ರಾಸ್ ಹತ್ತಿರ, ಕಲಬುರಗಿ- 585102ಗೆ ಕಳುಹಿಸಿಕೊಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9481000094ಗೆ ಸಂಪರ್ಕಿಸಬಹುದಾಗಿದೆ. ಕೃತಿಗಳನ್ನು ಅಕ್ಟೋಬರ್ 15ರೊಳಗೆ ಕಳುಹಿಸಿಕೊಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.