ಕಸಾಪ ಸಮ್ಮೇಳನ ಸರ್ವಧ್ಯಕ್ಷರನ್ನಾಗಿ ಗೋ.ರು.ಚ ಅವರಿಗೆ ಆಯ್ಕೆ ಮಾಡಲು ಆಗ್ರಹ

ಕಸಾಪ ಸಮ್ಮೇಳನ ಸರ್ವಧ್ಯಕ್ಷರನ್ನಾಗಿ ಗೋ.ರು.ಚ ಅವರಿಗೆ ಆಯ್ಕೆ ಮಾಡಲು ಆಗ್ರಹ

ಕಸಾಪ ಸಮ್ಮೇಳನ ಸರ್ವಧ್ಯಕ್ಷರನ್ನಾಗಿ ಗೋ.ರು.ಚ ಅವರಿಗೆ ಆಯ್ಕೆ ಮಾಡಲು ಆಗ್ರಹ 

ಕೊಪ್ಪಳ : ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಕ ಪರಂಪರೆಗಳನ್ನು ಬೆಳೆಸುವಲ್ಲಿ ಅಲ್ಲದೆ ವಚನಸಾಹಿತ್ಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಪುಸ್ತಕಗಳನ್ನು 'ಸಾಹಿತ್ಯ ಲೋಕಕ್ಕೆ ಅರ್ಪಣೆ ಮಾಡಿದ ಧೀಮಂತ ಹಿರಿಯ ಸಾಹಿತಿ, ಜನಪರ ಸೇವೆಯನ್ನು ತಮ್ಮ ಜೀವನವನ್ನು ಉಸಿರಾಗಿಸಿಕೊಂಡಿರುವ ಜಾನಪದ ತಜ್ಞರಾಗಿ, ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಗೋ.ರು. ಚನ್ನಬಸಪ್ಪನವರನ್ನು ಮಂಡ್ಯದಲ್ಲಿ ಜರುಗುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷರನ್ನಾಗಿ ಆಯ್ಕೆ ಮಾಡಲು, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಮತ್ತು ಸಿರಿಗನ್ನಡ ವೇದಿಕೆ ರಾಜ್ಯ ಮತ್ತು ಜಿಲ್ಲಾ ಘಟಕ ಕೊಪ್ಪಳದಿಂದ ಈ ಮೂಲಕ ಆಗ್ರಹ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿಯವರು. , ಕರ್ನಾಟಕ ರಾಜ್ಯದ ಸರ್ಕಾರದ ಎಲ್ಲಾ ಮಂತ್ರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ ಮತ್ತು ಅವರ ಕಾರ್ಯಕಾರಿ ಸಮಿತಿ ಎಲ್ಲಾ ಸದಸ್ಯರು ಗೋ.ರು.ಚನ್ನಬಸಪ್ಪನವರನ್ನು ಒಮ್ಮತದಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಈ ಮೂಲಕ ಜಿ.ಎಸ್. ಗೋನಾಳ್. ಉಮೇಶ್ ಬಾಬು ಸರ್ವೆ. ಮಂಜುನಾಥ್ ಚಿತ್ರಗಾರ. ನಿರ್ಮಲ ಬಳ್ಕೊಳ್ಳಿ, ಸಾವಿತ್ರಿ ಎಂ. ಉಮೇಶ್ ಪೂಜಾರ, ಶ್ರೀನಿವಾಸ್ ಚಿತ್ರಗಾರ ಚಿತ್ರಗಾರ, ಫಕೀರಪ್ಪ ಗೋಟೂರು, ರೇಣುಕಾರಾಜ, ತಾಜ್ ಪಾಷ ಮಕಾಂದರ ಇತರರು ಆಗ್ರಹಿಸಿದ್ದಾರೆ.