ಹೊಸೂರಲ್ಲಿ ಮಹಿಳೆಯರ ದಸರಾ ಸಂಭ್ರಮ

ಹೊಸೂರಲ್ಲಿ ಮಹಿಳೆಯರ ದಸರಾ ಸಂಭ್ರಮ

ಹೊಸೂರಲ್ಲಿ ಮಹಿಳೆಯರ ದಸರಾ ಸಂಭ್ರಮ

ಶಹಾಪುರ : ಗ್ರಾಮೀಣ ಭಾಗದ ಮಹಿಳೆಯರ ಸಂಸ್ಕೃತಿ ಸಡಗರ ಸಂಭ್ರಮ ಸಮುದಾಯಗಳ ಹಬ್ಬ ಆಚರಣೆಗಳಲ್ಲಿ ಈ ದಸರಾ ಹಬ್ಬವು ಒಂದು ಮಹತ್ವದ್ದಾಗಿದ್ದು,ಈ ದಸರಾ ಹಬ್ಬವನ್ನು ವಿಶೇಷ ಹಾಗೂ ವಿನೂತನವಾಗಿ ಆಚರಣೆ ಮಾಡುವುದರ ಮುಖಾಂತರ ಎಲ್ಲರೂ ಸಂಭ್ರಮಿಸಿ ಖುಷಿಪಟ್ಟರು.

ತಾಲೂಕಿನ ಹೊಸೂರು ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ನಡೆಯುವ 9 ದಿನಗಳ ಕಾಲ ಗ್ರಾಮದೇವತೆಗೆ ದಿನಾಲು ಬೆಳಗ್ಗೆ ಸಾಯಂಕಾಲ ವಿಶೇಷ ಪೂಜೆ ಪುನಸ್ಕಾರಗಳ ಜೊತೆಗೆ ಮಹಿಳೆಯರು ಬಣ್ಣ ಬಣ್ಣದ ಸೀರೆ ಉಟ್ಟು,ತಲೆಗೆ ಮಲ್ಲಿಗೆ ಹೂವು ಮುಡಿದು,ಭಕ್ತಿಯಿಂದ ದೇವಿಯನ್ನು ಪೂಜಿಸುತ್ತಾರೆ.

ಈ ಹಬ್ಬ ವಿಶೇಷವಾಗಿ ಮಹಿಳೆಯರೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತದೆ. ಈ ಹಬ್ಬವನ್ನು ಮತ್ತಷ್ಟು ಮೆರಗುಗೊಳಿಸಲು ವಿವಿಧ ಜಾನಪದ ಕಲಾತಂಡಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜೊತೆಗೆ ರಂಗೋಲಿ ಸ್ಪರ್ಧೆಗಳು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಜ್ಯೋತಿ ಅಂಗಡಿ,ಚಂದ್ರಕಲಾ,ಶೃತಿ ಕೊಳ್ಳೂರು,ಲಕ್ಷ್ಮಬಾಯಿ ಚಾಮನೂರ,ಚಂದ್ರಕಲಾ ಸಾಸನೂರ,ಮಂಜುಳಾ ಅಲ್ಲಾಪುರ, ಅನುಸೂಯ ಕೊಳ್ಳೂರ,ನಿರ್ಮಲಾ ಅಂಗಡಿ,ವೀಣಾ ಹಿರೇಮಠ,ವಿಜಯಲಕ್ಷ್ಮಿ,ಭಾಗ್ಯಲಕ್ಷ್ಮಿ,ದೇವರಮನೆ,ಮಲ್ಲಮ್ಮ ಅನವಾರ, ದೇವಮ್ಮ ಬೊಮ್ಮನಹಳ್ಳಿ,ಪಾರ್ವತಿ ನುನ್ನಾ,ಗಂಗಮ್ಮ ಹವಲ್ದಾರ, ಶರಣಮ್ಮ ಚಿಂತಿ,ಶಿಲ್ಪಾ ಕೊಳ್ಳೂರ, ಹನುಮವ್ವ ಮಲ್ಲೆದ,ಅಂಬಿಕಾ ಮ್ಯಾಗಡಿ,ಲಕ್ಷ್ಮಿ ಹುಣಸುಗುಂಡಿಗಿ ಸೇರಿದಂತೆ ಇನ್ನಿತರರು ಹಾಜರಿದ್ದರು