ಶ್ರೀಕಾಂತ ಚೌಕಾ ಪರಿವಾರದ ಧಾರ್ಮಿಕ ಸೇವೆಗೆ ಶ್ಲಾಘನೆ ಹಲಚೇರಾ ಜಗದೀಶ್ವರ ದೇವಾಲಯ ಕಳಸಾರೋಹಣ
ಶ್ರೀಕಾಂತ ಚೌಕಾ ಪರಿವಾರದ ಧಾರ್ಮಿಕ ಸೇವೆಗೆ ಶ್ಲಾಘನೆ
ಹಲಚೇರಾ ಜಗದೀಶ್ವರ ದೇವಾಲಯ ಕಳಸಾರೋಹಣ
ಕಾಳಗಿ: ಕಾಶಿಯಲ್ಲಿ ವಿಶ್ವನಾಥ ನೆಲೆಸಿರುವಂತೆ ದಕ್ಷಿಣ ಕಾಶಿ ಕಾಳಗಿ ತಾಲ್ಲೂಕಿನ ಹಲಚೇರಿ ಗ್ರಾಮದಲ್ಲಿ ಜಗದೀಶ್ವರ ನೆಲೆಸಿದ್ದಾನೆ. ಜಗದೀಶ್ವರ ದೇವಾಲಯ ಜೀರ್ಣೋದ್ಧಾರಗೊಳಿಸಿದ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಶ್ರೀಕಾಂತ ಚೌಕಾ, ಸಾವಿತ್ರಿ ಚೌಕಾ ಪರಿವಾರದ ಧಾರ್ಮಿಕ ಸೇವೆ ಶ್ಳಾಘನೀಯ ಎಂದು ಭರತನೂರಿನ ಚಿಕ್ಕಗುರುನಂಜೇಶ್ವರ ಮಹಾ ಸ್ವಾಮೀಜಿ ತಿಳಿಸಿದರು. ಅವರು ತಾಲ್ಲೂಕಿನ ಹಲಚೇರಾ ಗ್ರಾಮದಲ್ಲಿ ನೂತನ ಜಗದೀಶ್ವರ ದೇವಾಲಯ ಕಳಸಾರೋಹಣ, ಆಮೆ, ನಂದಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಗುರುವಾರ ಮಾತನಾಡಿದರು.ಮಾನವನ ಜೀವನ ಸಾರ್ಥಕವಾಗಬೇಕಾದರೆ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಪುಣ್ಯಕಾರ್ಯಗಳು ಮಾಡಬೇಕೆಂದರು. ಶ್ರೀಕಾಂತ ಚೌಕಾ ಅವರು ಅತ್ಯಂತ ಕಷ್ಟಪಟ್ಟು ಬಡತನ ಮೆಟ್ಟಿ ನಿಂತು ಅಭ್ಯಾಸ ಮಾಡಿ ಎಂಜಿನಿಯರ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ವಿಶ್ರಾಂತ ಜೀವನ ಅತ್ಯಂತ ನೆಮ್ಮದಿಯಿಂದ ನಡೆಸುತ್ತಿದ್ದಾರೆ. ಇವರ ಸಾಮಾಜಿಕಕಾಳಜಿ, ಧಾರ್ಮಿಕನಂಬಿಕೆ ಇತರರಿಗೆ ಮಾದರಿಯಾಗಿದೆ ಎಂದರು.
ದಿನ ಬೆಳಗಾದರೆ ದ್ವೇಷ ಅಸೂಯೆ ಕೊಲೆ ಸುಲಿಗೆ ಹೆಚ್ಚಾಗಿವೆ. ಸಮಾಜ ಇವುಗಳಿಂದ ಮುಕ್ತನಾಗಬೇಕಾದರೆ ಪ್ರತಿಯೊಬ್ಬರಲ್ಲೂ ಧಾರ್ಮಿಕ ನಂಬಿಕೆ ಅವಶ್ಯಕ ಎಂದು ಹೊಸಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳಿಂದ ಮನುಷ್ಯ ನೆಮ್ಮದಿಯ ಜೀವನನಡೆಸಲು ಸಾಧ್ಯ. ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಲು ದೈವದಲ್ಲಿ ಭಕ್ತಿ. ನಂಬಿಕೆ ಪೂಜಾ ಕಾರ್ಯಗಳ ಬಗೆಗೆ ಮಕ್ಕಳಿಗೆ ಸಂಸ್ಕಾರ ಅಗತ್ಯವಿದೆ. ಮೋಬೈಲಗಳಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎಂದುಜವಾಹರ ಬಾಲಭವನ ಉಪಾಧ್ಯಕ್ಷ ಅನಿಲಕುಮಾರ ಜಮಾದಾರ ತಿಳಿಸಿದರು.
ಶ್ರೀಕಾಂತ ಚೌಕಾ, ಸರಸ್ವತಿ ಚೌಕಾ, ಡಾ. ಕಿರಣ ಚವಕಾ, ಉಮಾ ಪಾಟೀಲ, ಸಂಗಮೇಶ ಹೂಗಾರ,ರಮೇಶ,ಅಶೋಕ ಮಾನಕಾರ, ರಾಜಶೇಖರ ಅಪ್ಪಾಜಿ, ಗುರುನಾಥ ವಿಂಬಡಶೆಟ್ಟಿ, ಸೋಮಶೇಖರ ಚಿಂಚೋಳಿ, ರಾಜಶೇಖರ ಗಾರಂಪಳ್ಳಿ, ರಾಜು ಹೆಬ್ಬಾಳ, ಸಿದ್ದರಾಜ ಪುಣ್ಯಶೆಟ್ಟಿ, ಜಗದೀಶ ಸಜ್ಜನ, ಶಿವಾನಂದ ಮಾನಕಾರ. .ಜಗನ್ನಾಥ ಶೇರಿಕಾರ, ಮಲ್ಲಿನಾಥ ಪಾಟೀಲ ಕಾಳಗಿ ಮೊದಲಾದವರು ಇದ್ದರು.
ಸಿದ್ದು ಚೌಕಾ, ಸ್ವಾಗತಿಸಿದರು. ಗುರುನಾಥ ವಿಂಬಡಶೆಟ್ಟಿ ನಿರೂಪಿಸಿದರು. ಚನ್ನಮಲ್ಲಪ್ಪ ಮಳಖೇಡ ವಂದಿಸಿದರು.
---
