ಸಿದ್ದರಾಮಯ್ಯ ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ
ಸಿದ್ದರಾಮಯ್ಯ ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ
ಕಲಬುರಗಿ: ಕೋರ್ಟ ತೀರ್ಪು ತನಿಖೆಯನ್ನು ನಡೆಸಿ ಎಂದು ಹೇಳಿ ರುವುದು ಅಷ್ಟೇ ಸಿದ್ದರಾಮಯ್ಯ ನವರ ಕೇಳಿರೋ ಅರ್ಜಿಯನ್ನು ತಿರಸ್ಕರಿಸಿ ವಿಚಾರಣೆ ನಡೆಸುವಂತೆ ಸ್ಪಷ್ಟಪಡಿಸಿದೆ ತನಿಖೆ ನಡೆಯಲಿ ಆ ತನಿಖೆಯಲ್ಲಿ ಸ್ಪಷ್ಟ ನಿರ್ಧಾರಗಳು ಬರುವವರೆಗೂ ವಿರೋಧ ಪಕ್ಷದವರಿಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಅಖಿಲ ಕರ್ನಾಟಕ ಡಾ.ಎಚ್.ಸಿಮಹಾದೇವಪ್ಪ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಒಂಕಾರ ವಠಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಕೇಂದ್ರ ಬಿಜೆಪಿಯವರು ಗೌವರ್ನರ ಹುದ್ದೆಯನ್ನು ಗೌವನರ ಆಫೀಸ್‌ನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಹಲವಾರು ಬಿಜೆಪಿಯವರ ತನಿಖೆಗಳನ್ನ ಕೊಟ್ಟರು ಅದನ್ನು ಗೌವನರ ಬದಿಗಿಟ್ಟು ಸಿದ್ದರಾಮಯ್ಯನವರ ಪ್ರಕರಣವನ್ನು ತೆಗೆದುಕೊಂಡು ದ್ವೇಷದ ರಾಜಕಾರಣ ಮಾಡಲು ಹೊರಟಿದೆ ಕರ್ನಾಟಕದ ಜನತೆ 135 ಸೀಟುಗಳನ್ನು ಕಾಂಗ್ರೆಸ್ಸಿಗೆ ಕೊಟ್ಟು ಸ್ಪಷ್ಟ ಬಹುಮತದ ಆಶೀರ್ವಾದ ನೀಡಿದ್ದಾರೆ ಜನರ ಆಶೀರ್ವಾದ ಇರೋದ್ರಿಂದ ಸಿದ್ದರಾಮಯ್ಯ ನವರು ರಾಜೀನಾಮೆ ಕೊಡೋ ಪ್ರಶ್ನೆ ಇಲ್ಲ ಎಂದು ಅವರು ತಿಳಿಸಿದ್ದಾರೆ.