ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ವಾರ್ಷಿಕ ಸಭೆ ನಡೆಯಲಿ

ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ವಾರ್ಷಿಕ ಸಭೆ ನಡೆಯಲಿ
ಕಲಬುರಗಿ: ನಗರದ ಖಾಸಗಿ ಸಭಾಗಂಣದಲ್ಲಿ ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 15ನೇ ಸಾಮಾನ್ಯ ವಾರ್ಷಿಕ ಮಹಾಸಭೆಯನ್ನು ಕ.ರಾ.ಸೌ.ಸಂ.ಸ.ನಿ. ಬೆಂಗಳೂರು ಹಾಗೂ ಗುಲಬರ್ಗಾ ಮಹಿಳಾ ಸೌಹಾರ್ದ ಸಹಕಾರಿ ಪತ್ತಿನ ಸಂಘದ ಶೈಲಜಾ ತಪಲಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ಕಲಬುರಗಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿಜಯಕುಮಾರ ದುಧಗಿ, ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಬಸವರಾಜ ಜಿ.ಪಾಟೀಲ, ಉಪಾಧ್ಯಕ್ಷ ಬಸವರಾಜ ಎಂ.ಪಾಟೀಲ, ನಿರ್ದೆಶಕರಾದ ಮಲ್ಲಿಕಾರ್ಜುನ್ ಕೆ. ಪಾಟೀಲ್, ಪಿತಂಬರಾವ ಪಾಟೀಲ, ಅಮಲ್ಲಪ್ಪ ದೇಸಾಯಿ, ಶಾಂತಗೌಡ ಪಾಟೀಲ, ಹುಲಿಕಂಠರಾಯ ಎಸ್.ಎಮ್, ಹಣಮಂತಪ್ಪಾ ಬಿರಾಳ, ಶ್ರೀಪಾದ ಜೋಶಿ, ಭೀಮರಾಯ ಪೂಜಾರಿ ಮದರಿ, ನಿರ್ಮಲಾ ಸಿಕೇದ್, ಕೈಸರ್ ಜಹಾನ್ ಸಿರೀನ್ ಪಟೇಲ್, ತಾತಗೌಡ ಪಾಟೀಲ, ಅಶೋಕ ಹರವಾಳ ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ನಂತರ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.