ಎಂ ಎಸ್ ಇರಾಣಿ ಕಾಲೇಜಿನಲ್ಲಿ ದಾಂಡಿಯಾ ನೃತ್ಯ

ಎಂ ಎಸ್ ಇರಾಣಿ ಕಾಲೇಜಿನಲ್ಲಿ ದಾಂಡಿಯಾ ನೃತ್ಯ

ಎಂ ಎಸ್ ಇರಾಣಿ ಕಾಲೇಜಿನಲ್ಲಿ ದಾಂಡಿಯಾ ನೃತ್ಯ

ಕಲಬುರ್ಗಿ: ಎಂಎಸ್ ಇರಾನಿ ಪದವಿ ಮಹಾವಿದ್ಯಾಲಯದಲ್ಲಿ ದಾಂಡಿಯಾ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಾ. ಲಕ್ಷ್ಮಿ ಮಾ ಕಾ ಡೀನ ಶರಣಬಸವ ವಿಶ್ವವಿದ್ಯಾಲಯ ಕಲಬುರ್ಗಿ ಇವರು ಆಗಮಿಸಿದ್ದರು. ನವರಾತ್ರಿ ಉತ್ಸವದ ಆಚರಣೆಗಳಲ್ಲಿ ದಾಂಡಿಯ ನೃತ್ಯವು ಸಹ ಒಂದಾಗಿದ ಇದು ಎಲ್ಲಾ ಹೆಣ್ಣುಮಕ್ಕಳ ಒಂದು ಸಂಭ್ರಮದ ಆಚರಣೆ. ಎಲ್ಲರೂ ಸೇರಿ ಸಂಸ್ಕೃತಿಯ ವಿಶೇಷತೆಯನ್ನು ತೋರಿಸುವ ಒಂದು ಆಚರಣೆ. ಸಮಾನತೆ ಸಾಮರಸ್ಯ ಒಗ್ಗಟ್ಟನ್ನು ಸೂಚಿಸುವ ಈ ಸಂಭ್ರಮದ ಆಚರಣೆ ಸಮಾಜದಲ್ಲಿ ಏಕತೆಯನ್ನು ಬೆಳೆಸುತ್ತದೆ ಎಂದು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಡಾ. ಉಮಾ ರೇವೂರ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ನವರಾತ್ರಿಯ ಆಚರಣೆ ದಾಂಡಿಯ ನೃತ್ಯ ಅರ್ಥಪೂರ್ಣವಾದ ಒಂದು ಸಾಮಾಜಿಕ ಸಾಂಪ್ರದಾಯಿಕತೆ ಎಂದು ಒತ್ತುಕೊಟ್ಟು ಹೇಳಿದರು. ಪ್ರೊ. ಶಾಂತಾ ಬೀಮ್ಸೇನ್ ರಾವ್, ನಿವೃತ್ತ ಕನ್ನಡ ಪ್ರಾಧ್ಯಾಪಕಿ, ಎಂ ಎಸ್ ಐ ಪದವಿ ಮಹಾವಿದ್ಯಾಲಯ ಕಲಬುರ್ಗಿ, ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕಾರ್ಯಕ್ರಮವನ್ನು ಮತ್ತಷ್ಟು ಶ್ರೀಮಂತ ಗೊಳಿಸಿದರು. ಎಂ ಎಸ್ ಐ ಮಹಾವಿದ್ಯಾಲಯದ ಮಹಿಳಾ ಕೋಶ ಸಂಯೋಜಕರಾದ ಡಾಕ್ಟರ್ ಮೈತ್ರಾದೇವಿ ಹಳೆಮನೆ ಅವರು ಕಾರ್ಯಕ್ರಮಕ್ಕೆ ಸ್ವಾಗತ ಭಾಷಣ ಮಾಡಿದರು. ಪ್ರಾಚಾರ್ಯರಾದ ಪ್ರೊ. ಮಲ್ಲಪ್ಪ ಬೂತಗಿ ಅಧ್ಯಕ್ಷೀಯ ಭಾಷಣ ಮಾಡಿದರು. ಡಾಕ್ಟರ್ ರಾಜೇಶ್ವರಿ ಪಾಟೀಲ್ ಮತ್ತು ಶ್ರೀಮತಿ ರೂಪ ನಿರೂಪಣೆ ಮಾಡಿದರು. ಶ್ರೀಮತಿ ವಿಜಯಲಕ್ಷ್ಮಿ ವಾರದ್ ವಂದಿಸಿದರು.

ದಾಂಡಿಯಾ ನೃತ್ಯ ಕಾರ್ಯಕ್ರಮದಲ್ಲಿ ಎಂಎಸ್ಐ ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕಿಯರು ಭಾಗವಹಿಸಿ ಸಂಭ್ರಮದಿಂದ ಆಚರಣೆ ಮಾಡಿದರು.