ಗಡಿನಾಡಿನಲ್ಲಿ ಕನ್ನಡ ಶಾಲೆ, ಭಾಷೆ ಉಳಿವಿಗೆ ಒಗ್ಗೂಡಲು ಶರಣಗೌಡ ಪಾಟೀಲ ಪಾಳಾ ಕರೆ
ಆಳಂದ: ಖಜೂರಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ರೈತ ವೈಜನಾಥ ತಡಕಲ್ ಅವರಿಂದ ಡ್ರೆಸ್‌ಗಳನ್ನು ಅತಿಥಿಗಳ ಮೂಲಕ ತೊಡಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ರೈತನಿಂದ ಮಕ್ಕಳಿಗೆ ಡ್ರೆಸ್ ತೊಡಿಸಿ ರಾಜ್ಯೋತ್ಸವ ಆಚರಣೆ
ಗಡಿನಾಡಿನಲ್ಲಿ ಕನ್ನಡ ಶಾಲೆ, ಭಾಷೆ ಉಳಿವಿಗೆ ಒಗ್ಗೂಡಲು ಶರಣಗೌಡ ಪಾಟೀಲ ಪಾಳಾ ಕರೆ
ಆಳಂದ: ಗಡಿನಾಡುಗಳು ಭಾಷಾ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ಇತರ ರಾಜ್ಯಗಳಿಂದ ಭಿನ್ನವಾಗಿವೆ. ಆದರೆ, ಅಲ್ಲಿ ಕನ್ನಡ ಭಾಷೆಯ ಉಳಿವಿಗೆ ಅಗತ್ಯವಿರುವುದು, ನಮ್ಮ ಹಿರಿದುಗಳ ಭಾಷೆಯ ಅಧೀನತೆ, ಸಂಘಟನಾಶೀಲತೆ ಹಾಗೂ ನಾವು ಕನ್ನಡ ನುಡಿಯ ಉತ್ತೇಜನಕ್ಕೆ ಶ್ರಮಿಸಲು ಗಡಿನಾಡಿನಲ್ಲಿ ಸರ್ವರು ಒಗ್ಗೂಡಬೇಕು ಎಂದು ಕಲಬುರಗಿ ಪಾಟೀಲ ಜನಕಲ್ಯಾಣ ಟ್ರಸ್ಟ್ನ ಅಧ್ಯಕ್ಷ, ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ ಅವರು ಕರೆ ನೀಡಿದರು.
ತಾಲೂಕಿನ ಗಡಿನಾಡು ಖಜೂರಿ ಗ್ರಾಮದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಆವರಣದಲ್ಲಿ ಶುಕ್ರವಾರ ತಾಲೂಕು ಕನ್ನಡ ಜಾನಪದ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು ಆಶ್ರಯ ದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ಯವಾಗಿ ಯುವ ರೈತ ವೈಜೀನಾಥ ತಡಕಲ ಇವರ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿಗಳಿಗೆ ಡ್ರೆಸ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮಕ್ಕಳಿಗೆ ತಲುಪಿಸಲು ಕನ್ನಡ ಮಾಧ್ಯಮ ಶಾಲೆಗಳ ಆರಂಭಕ್ಕೆ ಒತ್ತು ನೀಡಬೇಕಿದೆ. ಇದು ಗಡಿನಾಡಿನಲ್ಲಿ ಕನ್ನಡ ಭಾಷೆಯ ಪ್ರಚಾರಕ್ಕೆ ನೆರವಾಗುತ್ತದೆ ಮತ್ತು ಮುಂದಿನ ಪೀಳಿಗೆಗೆ ಭಾಷೆಯ ಉಳಿವಿಗೆ ಮಹತ್ವದ ಭಾಗವಾಗುತ್ತದೆ ಎಂದು ಪ್ರತಿಪಾದಿಸಿದರು.
ಕನ್ನಡ ನಾಡು, ನುಡಿ, ಹಾಗೂ ಸಂಸ್ಕೃತಿಯ ಉಳಿವಿಗಾಗಿ ಗಡಿನಾಡುಗಳಲ್ಲಿ ಇಂಥಹ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವುದು ನಮ್ಮಮ ಕರ್ತವ್ಯವಾಗಿದೆ. ಕನ್ನಡ ಶಾಲೆಗಳ ಮೂಲಕ ಕನ್ನಡ ಭಾಷೆಯನ್ನು ಹೆಚ್ಚು ಗೌರವಿಸುವಂತೆ ಸಹಾಯ ಮಾಡುವ ಬಗ್ಗೆ ಜನರ ನಡುವೆ ಚರ್ಚೆಯಾಗಬೇಕು. ಆಧುನಿಕತೆಯೊಂದಿಗೆ ಕನ್ನಡ ಉಳಿಸುವ ಮೂಲಕ ಜಾಗತಿಕತೆಯಲ್ಲಿ ಪ್ರಭಾವಿ ಭಾಷೆಯನ್ನಾಗಿ ಮಾಡಲು ಅಗತ್ಯವಿರುವ ಕ್ರಮಗಳು ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ನಗರೀಕರಣ ಮತ್ತು ಟೆಕ್ನೋಲಜಿಯ ಅಭಿವೃದ್ಧಿಯ ಸಮಯದಲ್ಲಿ, ಕನ್ನಡವನ್ನು ತಲುಪಿಸುವ ನವೀನ ವಿಧಾನಗಳ, ಆನ್‌ಲೈನ್ ಮೂಲಗಳ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ಗಳ ಬಳಕೆಯ ಬಗ್ಗೆ ಶರಣಗೌಡ ಅವರು ಪ್ರತಿಪಾದಿಸಿದರು.
ಆರಂಭದಲ್ಲಿ ವೇದಿಕೆಯಲ್ಲಿ 30 ಮಕ್ಕಳಿಗೆ ರೈತ ವೈಜನಾಥ ತಡಕಲ್ ಅವರು ಡ್ರೆಸ್‌ಗಳನ್ನು ತೊಡಿಸಿ "ನಾವು ಹೆಮ್ಮೆಯಿಂದ ಬೆಳೆದ ಕನ್ನಡ ಭಾಷೆಯನ್ನು ನಮ್ಮ ಮುಂದಿನ ಪೀಳಿಗೆಗೂ ಸಹ ಬೆಳೆಸಲು ಮತ್ತು ಬದುಕಿಗೆ ಉತ್ತಮ ಶಕ್ತಿಯಾದ ಉಡುಪುಗಳಾಗಿ ಕೊಡಲು ಈ ಕಾರ್ಯವನ್ನು ಆಯೋಜಿಸಿದ್ದೇವೆ" ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಉಸ್ತುರಿ, ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ, ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ, ಯುವ ಒಕ್ಕೂಟ ಜಿಲ್ಲಾಧ್ಯಕ್ಷ ಸುನೀಲಕುಮಾರ ಒಂಟಿ, ಗ್ರಾಮದ ಮಂಜುನಾಥ ಕಂದಗುಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ನಿಂಗಪ್ಪ, ಧರ್ಮಸ್ಥಳ ಖಜೂರಿ ಮೇಲ್ವಿಚಾರಕ ವಿರೇಶ್ ಮಸ್ಕಲ್, ಕಸಾಪ ಖಜೂರಿ ಅಧ್ಯಕ್ಷ ಶ್ರೀಶೈಲ ಬಿಂಪುರೆ, ಕಜಾಪ ಅಧ್ಯಕ್ಷ ಅಪ್ಪಸಾಬ್ ತೀರ್ಥೆ, ಹಿರಿಯ ಸಾಹಿತಿ ಎಸ್.ಬಿ. ಪಾಟೀಲ ತಡಕಲ್, ರಾಶೇಖರ ಹರಿಹರ, ಭೀಮಾಶಂಕರ ಕೋರೆ, ದಯಾನಂದ ಧನ್ನೂರೆ, ಕರಬಸಪ್ಪ ಸೊನ್ನ, ಬಸವರಾಜ ವಾಡೆ, ಮೈಬು ಪಟೇಲ್, ಅಪ್ಪುಶಾ ಮೈಸೂಲಗೆ, ರಾಮರಾಜ ನಗರೆ, ಕಾಶಿನಾಥ ಪರತಾಪೂರೆ, ಎಸ್‌ಡಿಎಂಸಿ ಪ್ರಾಥಮಿಕ ಶಾಲೆ ಅಧ್ಯಕ್ಷ ಸಂದೀಪ ಬಂಗರಗಿ, ಪ್ರೌಢಶಾಲೆ ಅಧ್ಯಕ್ಷ ಕಲ್ಯಾಣಿ ಹೊಸಮನಿ, ರಾಮ ಬಂಡೆ ಮತ್ತಿತರರು ಇದ್ದರು.
ಕಲ್ಯಾಣ ತುಕಾಣಿ ನಿರೂಪಿಸಿದರು. ಕಲಾವಿದರಿಂದ ಸುರಿಮಮಳೆಗೈದ ರಾಜ್ಯೋತ್ಸವ ಕುರಿತು ಗಾಯನ ಗಮನ ಸೆಳೆದವು.