ಓಡಲು ತುಂಬಿಕೊಂಡ ಭೀಮಾ ನದಿ : ಕೊಲ್ಲೂರು ಜಲಾವೃತ : ಗಂಜಿ ಕೇಂದ್ರ ಸ್ಥಾಪನೆ

ಓಡಲು ತುಂಬಿಕೊಂಡ ಭೀಮಾ ನದಿ : ಕೊಲ್ಲೂರು ಜಲಾವೃತ : ಗಂಜಿ ಕೇಂದ್ರ ಸ್ಥಾಪನೆ
ಓಡಲು ತುಂಬಿಕೊಂಡ ಭೀಮಾ ನದಿ : ಕೊಲ್ಲೂರು ಜಲಾವೃತ : ಗಂಜಿ ಕೇಂದ್ರ ಸ್ಥಾಪನೆ

ಓಡಲು ತುಂಬಿಕೊಂಡ ಭೀಮಾ ನದಿ : ಕೊಲ್ಲೂರು ಜಲಾವೃತ : ಗಂಜಿ ಕೇಂದ್ರ ಸ್ಥಾಪನೆ 

ನಾಲವಾರ: ಸಮೀಪದ ಕೊಲ್ಲೂರು ಗ್ರಾಮವು ಅತಿಯಾದ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಗ್ರಾಮದೆಲ್ಲೆಡೆ ನೀರು ಬಂದಿರುವುದರಿಂದ ಅನೇಕ ಮನೆಗಳಿಗೆ, ಗ್ರಾಮ ಪಂಚಾಯತ್ ಕಾರ್ಯಾಲಯ, ಕೃಷ್ಣ ಗ್ರಾಮೀಣ ಬ್ಯಾಂಕ್, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು, ಗ್ರಂಥಾಲಯ, ಕೃಷಿ ಪತ್ತಿನ ಸಂಘ ದ ಕಾರ್ಯಾಲಯ ಹಾಗೂ ಅನೇಕ ದೇವಸ್ಥಾನ ಗಳಿಗೆ ನೀರು ನುಗ್ಗಿವೆ, ಜನರು ರಾತ್ರೋ ರಾತ್ರಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳಷ್ಟು ಜನರು ತಮ್ಮ ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಗಂಜಿ ಕೇಂದ್ರಕ್ಕೆ ಹೋಗಿದ್ದಾರೆ, ಇನ್ನೂ ಕೆಲವರು ಊರಿಂದ ಹೊರಗಡೆ ಆಶ್ರಯ ಪಡೆದುಕೊಂಡಿದ್ದಾರೆ. 

ಅತಿಯಾದ ಪ್ರವಾಹದಿಂದ ಎಲ್ಲೆಡೆ ನೀರು ತುಂಬಿಕೊಂಡು ಅನೇಕ ಗ್ರಾಮಗಳು ಜಾಲಾವೃತ ವಾಗಿವೆ. ಈ ಸಾಲಿನಲ್ಲಿ ಕೊಲ್ಲೂರು ಕೂಡ ಒಂದಾಗಿದ್ದು ಕಂದಾಯ ಇಲಾಖೆ ವತಿಯಿಂದ ಗಂಜಿ ಕೇಂದ್ರ ಸ್ಥಾಪನೆ ಮಾಡಿದ್ದೂ ಅನೇಕ ಕುಟುಂಬ ಗಳಿಗೆ ಆಶ್ರಯವಾಗಿದೆ, ವಿಪರ್ಯಾಸ ಏನೆಂದರೆ ಯಾವೊಬ್ಬ ಜನ ಪ್ರತಿನಿಧಿಗಳು, ಶಾಸಕರು, ತಾಲೂಕ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿಲ್ಲ, ಜನರನ್ನು ಕಷ್ಟ ಕೇಳುತ್ತಿಲ್ಲ, ಚುನಾವಣೆ ಸಮಯದಲ್ಲಿ ಮನೆ ಮನೆಗೆ ಭೇಟಿ ನೀಡುವ ಇವರುಗಳು ಜನರ ಕಷ್ಟ ಸಮಯದಲ್ಲಿ ಬರುತ್ತಿಲ್ಲ ಎಂದು ರಾಜೇಂದ್ರ. ಎನ್. ಕೊಲ್ಲೂರು ಅವರು ಪ್ರಶ್ನೆ ಮಾಡಿದ್ದಾರೆ. ಕೊಲ್ಲೂರು ಗ್ರಾಮವು ಮುಳುಗಡೆ ಪ್ರದೇಶ ಆಗಿದ್ದು ಆದಷ್ಟು ಬೇಗ ಶಾಸಕರು ಗಮನ ಹರಿಸಿ ಸುರಕ್ಷಿತ ಸ್ಥಳಕ್ಕೆ ಕೊಲ್ಲೂರು ಗ್ರಾಮ ವನ್ನು ಸ್ಥಳಾಂತರ ಮಾಡಬೇಕು ಮತ್ತು ಅತಿವೃಷ್ಟಿ ಯಿಂದ ನೂರಾರು ಜನರ ಹೊಲ ಗದ್ದೆಗಳು ನೀರು ಪಾಲಾಗಿದ್ದು ಎಲ್ಲಾ ಬೆಳೆ ಗಳು ನಾಶವಾಗಿವೆ ಈ ಘನ ರಾಜ್ಯ ಸರಕಾರ ಎಲ್ಲಾ ರೈತರಿಗೆ ಪರಿಹಾರ ಘೋಷಣೆ ಮಾಡಬೇಕೆಂದು ರಾಜೇಂದ್ರ. ಎನ್. ಕೊಲ್ಲೂರು ಒತ್ತಾಯಿಸಿದ್ದಾರೆ. ಹಾಗೂ ಕಂದಾಯ ಇಲಾಖೆ ಸ್ಥಾಪಿಸಿದ ಗಂಜಿ ಕೇಂದ್ರ ಸಾಕಷ್ಟು ಕುಟುಂಬ ಗಳಿಗೆ ನೇರವಾಗಿದ್ದು ಮತ್ತು ಗ್ರಾಮಾಧಿಕಾರಿಗಳಾದ ರಾಜು. ಯು. ಬಿ ಹಾಗೂ ಸಹಾಯಕರಾದ ಸಿದ್ದಲಿಂಗಪ್ಪ ಅವರು ಸತತವಾಗಿ ಜನರ ನಡುವೆ ಇದ್ದದ್ದು ನಿಜಕ್ಕೂ ಈ ಕಾರ್ಯಕ್ಕೆ ರಾಜೇಂದ್ರ. ಎನ್. ಕೊಲ್ಲೂರು ಶ್ಲಾಘಸಿದ್ದಾರೆ.